ಚಿತ್ರದುರ್ಗ: ಆತ ಹೋಟೆಲ್ ಮಾಡಿಕೊಂಡಿದ್ದನು. ಅಲ್ಲಿಗೆ ಕೆಲಸಕ್ಕೆ ಬರುತ್ತಿದ್ದಂತ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಾಗಿದೆ. ಇದೇ ಕಾರಣಕ್ಕೆ ಆಕೆಯ ಮಕ್ಕಳನ್ನು ಮದುವೆ ಮಾಡೋದಕ್ಕೆ ಲಕ್ಷ ಲಕ್ಷ ಹಣವನ್ನೇ ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಇದೀಗ ಇಬ್ಬರು ಮಕ್ಕಳನ್ನು ಬಿಟ್ಟ ಆತ, ಮೂವರು ಮಕ್ಕಳನ್ನು ಬಿಟ್ಟ ಆಕೆ ಜೊತೆಗೂಡಿ ಪರಾರಿಯಾಗಿರುವಂತ ಘಟನೆ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 45 ವರ್ಷದ ನಾಗಭೂಷಣ ಎಂಬಾತ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಅಲ್ಲಿಗೆ ಅದೇ ಊರಿನ ಜ್ಯೋತಿ(38) ಎಂಬಾಕೆ ಕೆಲಸಕ್ಕೆ ಬರುತ್ತಿದ್ದರಂತೆ. ಆಕೆಯೊಂದಿಗೆ ಹೋಟೆಲ್ ಮಾಲೀಕ ನಾಗಭೂಷಣನನ ಸಲುಗೆಯಾಗಿದೆ. ಅದು ಅಕ್ರಮ ಸಂಬಂಧಕ್ಕೆ ತಿರುಗಿ, ಪತ್ನಿ ಇಲ್ಲದ ವೇಳೆಯಲ್ಲಿ ಪ್ರಣಯ ಪ್ರಸಂಗಕ್ಕೂ ಕಾರಣವಾಗಿತ್ತಂತೆ.
ನಾಗಭೂಷಣ ಅವರ ಪುತ್ರ ಹಾಗೂ ಸೊಸೆ ಇಬ್ಬರೂ ಇಂಜಿನೇರ್ ಆಗಿದ್ದು, ತಾವು ದುಡಿದಂತ ಸುಮಾರು 18 ಲಕ್ಷದಷ್ಟು ಹಣವನ್ನು ತನ್ನ ತಾಯಿ ಬ್ಯಾಂಕ್ ಖಾತೆಗೆ ಇಟ್ಟಿದ್ದರೆನ್ನಲಾಗಿದೆ. ಮಗ ತನ್ನ ಪತ್ನಿಯ ಬ್ಯಾಂಕ್ ಖಾತೆಯಲ್ಲಿ ಲಕ್ಷ ಲಕ್ಷ ಹಣ ಇರಿಸಿರೋ ವಿಷಯ ತಿಳಿದಂತ ನಾಗಭೂಷಣ್, ಹೋಟೆಲ್ ಕೆಲಸಕ್ಕೆ ಬರುತ್ತಿದ್ದಂತ ಜ್ಯೋತಿಗೆ ಒಂದಷ್ಟು, ಆಕೆಯ ಪುತ್ರಿಯರ ಮದುವೆಗೆ ಮತ್ತಷ್ಟು, ಒಡವೆ ಮಾಡಿಸಿಕೊಡೋದಕ್ಕೆ ಮಗದಷ್ಟು ನೀಡಿರೋ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.
ಕಳೆದ ಭಾನುವಾರದಂದು ಏಕಾಏಕಿ ಇಬ್ಬರು ಮಕ್ಕಳಿರುವಂತ ನಾಗಭೂಷಣ್ ಹಾಗೂ ಮೂವರು ಮಕ್ಕಳಿರುವಂತ ಜ್ಯೋತಿ ಜೊತೆಗೂಡಿ ಮನೆಯಲ್ಲಿದ್ದಂತ ಹಣ, ಒಡವೆಯೊಂದಿಗೆ ಪರಾರಿಯಾಗಿದ್ದಾರೆ. ಇತ್ತ ತಂದೆಯಿಂದ ಹಣ ಕಳೆದುಕೊಂಡ ನಾಗಭೂಷಣ್ ಪತ್ನಿ, ಪುತ್ರ ಕಣ್ಣೀರಿಡುತ್ತಿದ್ದಾರೆ. ಅತ್ತ ಮಾಡದಕೆರೆಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿರೋ ಜ್ಯೋತಿ ಪತಿ, ಮಕ್ಕಳು ಮಾತ್ರ ತಮಗೇನು ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ ಎನ್ನಲಾಗಿದೆ.
ನಾಗಭೂಷಣ್ ಹಾಗೂ ಜ್ಯೋತಿ ಪರಾರಿಯಾಗಿ ಒಂದು ವಾರವೇ ಕಳೆದರೂ ಕುಟುಂಬಸ್ಥರು ಹುಡುಕಿ ಕರೆ ತರೋದಕ್ಕೆ ಪೊಲೀಸರಿಗೆ ದೂರು ನೀಡದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು, ನಾಗಭೂಷಣ್ ಹಾಗೂ ಜ್ಯೋತಿ ಹುಡುಕಿ ಮರಳಿ ಕರೆತರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
BREAKING : ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ ; ಕನ್ನಡಿಗ ‘ಕೆ.ಎಲ್ ರಾಹುಲ್’ಗೆ ಸ್ಥಾನ!








