Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BIG BREAKING NEWS: Mild tremors felt again in Kodagu's Sampaje

BREAKING: ದೆಹಲಿ-ಎನ್‌ಸಿಆರ್, ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ | Earthquick In Delhi-NCR

03/04/2026 10:12 PM

ಆತಿಥ್ಯ ವಹಿಸಿದ ಬೀದರ್ ಜಿಲ್ಲೆ KUWJ ಪ್ರಶಸ್ತಿ ಪ್ರಕಟ: 94 ವರ್ಷದ ಶಿವಶರಣಪ್ಪ ವಾಲಿ ಸೇರಿ 9 ಪತ್ರಕರ್ತರಿಗೆ ಗೌರವ

03/04/2026 10:07 PM

BREAKING: ಜಮ್ಮು-ಕಾಶ್ಮೀರದಲ್ಲಿ 2.4 ತೀವ್ರತೆಯಲ್ಲಿ ಭೂಕಂಪನ: ದೆಹಲಿಯಲ್ಲೂ ಕಂಪನದ ಅನುಭವ

03/04/2026 9:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ
KARNATAKA

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳ ಸೇರ್ಪಡೆ ನಿರ್ಧಾರ ಕೈಬಿಡಿ: ಸಿಎಂಗೆ ಪತ್ರ ಬರೆದು HDK ಆಗ್ರಹ

By kannadanewsnow0902/03/2026 3:29 PM

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ಕೂಡಲೇ ರಾಜ್ಯ ಸರಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಮಂಡ್ಯದ ಲೋಕಸಭೆ ಸದಸ್ಯರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು; ಜನಾಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಸಂಪುಟ ಸಭೆಯಲ್ಲಿ ಕೂಡ ಈ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದ್ದೇನೆ. ಸರಕಾರ ಜನತೆಯ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರರದು. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆಯೊಡ್ಡಬೇಕು ಎಂದು ಕೋರಿದ್ದಾರೆ.

ಈ ಎಲ್ಲಾ ಪಂಚಾಯಿತಿಗಳ ಗ್ರಾಮಸ್ಥರು ಹಾಗೂ ಪಂಚಾಯಿತಿಗಳ ಸದಸ್ಯರು, ರೈತ ಮುಖಂಡರಾದ ಸುನಂದಾ ಜಯರಾಂ ಅವರು ಸೇರಿದಂತೆ ಅನೇಕರುವ ಈ ಬಗ್ಗೆ ಮನವಿ ಮಾಡಿದ್ದು, ಇವರೆಲ್ಲರೂ 70 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರ ಬೇಡಿಕೆಗಳನ್ನು ಆಲಿಸಿದ್ದೇನೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸುನಂದಾ ಜಯರಾಮ್ ಅವರು ತಮಗೆ ನೀಡಿದ್ದ ಮನವಿ ಪತ್ರವನ್ನು ಲಗತ್ತಿಸಿದ್ದಾರೆ.

ಯಾವುದೇ ಕಾರಣಕ್ಕೂ ಮದ್ದೂರು ನಗರಸಭೆ ವ್ಯಾಪ್ತಿಗೆ ಈ ಗ್ರಾಮಗಳನ್ನು ಸೇರಿಸಬಾರದು. ಕೂಡಲೇ ಈ ಜನವಿರೋದಿ ನಿರ್ಧಾರವನ್ನು ಹಿಂಪಡೆಯಬೇಕೆಂದು ಒಕ್ಕೂರಲ ಒತ್ತಾಯ ಮಾಡಿರುತ್ತಾರೆ. ಸ್ಥಳೀಯರ ಮನವಿಗೆ ಮನ್ನಣೆ ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ. ಅಲ್ಲದೆ, ಜನತೆಯ ನಿರ್ಧಾರಕ್ಕೆ ವಿರುದ್ಧವಾಗಿ ಸರಕಾರ ನಡೆದುಕೊಳ್ಳುವುದು ಸರಿಯಲ್ಲ ಎಂದು ಸಚಿವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಕೃಷಿ ಆಧರಿತ ಪ್ರದೇಶ

ಈ ಭಾಗದ ಎಲ್ಲಾ ಗ್ರಾಮಗಳು ಕೃಷಿ ಆಧರಿತವಾಗಿದ್ದು, ಸುಮಾರು 2,000 ಎಕರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಾಗಿರುತ್ತದೆ ಎಂಬುದು ಗಮನಾರ್ಹ. ಭತ್ತ, ಕಬ್ಬು, ಹೂವು, ತರಕಾರಿ ಇನ್ನಿತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಪಶು ಸಾಕಾಣಿಕೆಯಲ್ಲಿ ರೈತಾಪಿ ಜನ ತೊಡಗಿಕೊಂಡಿದ್ದಾರೆ. ಜತೆಗೆ ಗೆಜ್ಜಲಗೆರೆ ಗ್ರಾಮದಲ್ಲಿಯೇ ಮಂಡ್ಯ ಜಿಲ್ಲೆಯ ಹಾಲು ಉತ್ಪಾದನಾ ಮಂಡಳಿ (ಮನ್ ಮುಲ್) ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಆಸ್ಪತ್ರೆ, ವಿದ್ಯಾಸಂಸ್ಥೆಗಳು ಸೇರಿ ಅನೇಕ ಮೂಲಸೌಕರ್ಯ ಸೇವೆಗಳು ಜನರಿಗೆ ಲಭ್ಯವಿವೆ ಎಂಬ ಅಂಶವನ್ನು ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೇ ಸಾರ್ವಜನಿಕರ, ರೈತರ ಅಭಿಪ್ರಾಯವನ್ನು ಆಲಿಸಿದೇ, ಗ್ರಾಮಸಭೆಯನ್ನು ನಡೆಸದೆ ಸದರಿ ಗ್ರಾಮಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ನಿರ್ಣಯ ಮಾಡಿರುವುದು ಜನವಿರೋಧಿ ಕ್ರಮವಾಗಿದೆ. ಬಹುಮತವನ್ನು ಲೆಕ್ಕಿಸದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲವರಷ್ಟೇ ಸದಸ್ಯರು ಗ್ರಾಮಸಭೆಯಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡು ಗ್ರಾಮ ಪಂಚಾಯಿತಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೆ, ಈ ಜನವಿರೋಧಿ ನಿರ್ಣಯದ ಬಗ್ಗೆ ಗ್ರಾಮಗಳ ಗ್ರಾಮಸ್ಥರು, ರೈತರು ಹಾಗೂ ಎಲ್ಲಾ ಸಾರ್ವಜನಿಕರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿರುವುದಾಗಿ ತಿಳಿದುಬಂದಿದೆ ಎಂದು ಸಚಿವರು ಪತ್ರದಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಜನತೆಯ ಹಿತದೃಷ್ಟಿಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಿರುವ ನಿರ್ಣಯವನ್ನು ಕೂಡಲೇ ವಾಪಸ್ ಪಡೆಯಬೇಕು. ತಾವು ಸ್ಥಳೀಯರ ಮನವಿಗೆ ಓಗೊಟ್ಟು ಅವರ ಪರವಾಗಿ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ ಎಂದು ಸಚಿವರು ಪತ್ರದಲ್ಲಿ ಕೋರಿದ್ದಾರೆ.

Share. Facebook Twitter LinkedIn WhatsApp Email

Related Posts

ಆತಿಥ್ಯ ವಹಿಸಿದ ಬೀದರ್ ಜಿಲ್ಲೆ KUWJ ಪ್ರಶಸ್ತಿ ಪ್ರಕಟ: 94 ವರ್ಷದ ಶಿವಶರಣಪ್ಪ ವಾಲಿ ಸೇರಿ 9 ಪತ್ರಕರ್ತರಿಗೆ ಗೌರವ

03/04/2026 10:07 PM1 Min Read

BIG UPDATE: ಆರೋಗ್ಯದಲ್ಲಿ ಚೇತರಿಗೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್

03/04/2026 7:42 PM1 Min Read

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

03/04/2026 6:50 PM2 Mins Read
Recent News
BIG BREAKING NEWS: Mild tremors felt again in Kodagu's Sampaje

BREAKING: ದೆಹಲಿ-ಎನ್‌ಸಿಆರ್, ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ | Earthquick In Delhi-NCR

03/04/2026 10:12 PM

ಆತಿಥ್ಯ ವಹಿಸಿದ ಬೀದರ್ ಜಿಲ್ಲೆ KUWJ ಪ್ರಶಸ್ತಿ ಪ್ರಕಟ: 94 ವರ್ಷದ ಶಿವಶರಣಪ್ಪ ವಾಲಿ ಸೇರಿ 9 ಪತ್ರಕರ್ತರಿಗೆ ಗೌರವ

03/04/2026 10:07 PM

BREAKING: ಜಮ್ಮು-ಕಾಶ್ಮೀರದಲ್ಲಿ 2.4 ತೀವ್ರತೆಯಲ್ಲಿ ಭೂಕಂಪನ: ದೆಹಲಿಯಲ್ಲೂ ಕಂಪನದ ಅನುಭವ

03/04/2026 9:59 PM

BREAKING: ಇರಾನ್ ನಲ್ಲಿ ಪತನಗೊಂಡಿದ್ದ ಅಮೇರಿಕಾದ ಫೈಟರ್ ಜೆಟ್ ಓರ್ವ ಸಿಬ್ಬಂದಿ ರಕ್ಷಣೆ

03/04/2026 9:44 PM
State News
KARNATAKA

ಆತಿಥ್ಯ ವಹಿಸಿದ ಬೀದರ್ ಜಿಲ್ಲೆ KUWJ ಪ್ರಶಸ್ತಿ ಪ್ರಕಟ: 94 ವರ್ಷದ ಶಿವಶರಣಪ್ಪ ವಾಲಿ ಸೇರಿ 9 ಪತ್ರಕರ್ತರಿಗೆ ಗೌರವ

By kannadanewsnow0903/04/2026 10:07 PM KARNATAKA 1 Min Read

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀದರ್‌ನಲ್ಲಿ ಏ.11 ಮತ್ತು 12 ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ…

BIG UPDATE: ಆರೋಗ್ಯದಲ್ಲಿ ಚೇತರಿಗೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್

03/04/2026 7:42 PM

ರೈತರು ನೀರಾವರಿ ಕಛೇರಿ ಮುಂದೆ ಹೋರಾಟ ಮಾಡಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್

03/04/2026 6:50 PM

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಅಂಕ ಕಡಿತ: ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರ ಪತ್ರ

03/04/2026 6:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.