ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಇಂದು ಜೈಲಿನಿಂದ ಬಿಡುಗಡೆಯಾದರು. ಅಲ್ಲದೇ ತಂದೆ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಅಲ್ಲಿ ನೆರೆದಿದ್ದಂತ ಜೆಡಿಎಸ್ ಕಾರ್ಯಕರ್ತರನ್ನು ಕಂಡಂತ ಅವರು ಗಳಗಳನೇ ಕಣ್ಣೀರಿಟ್ಟ ಘಟನೆಯೂ ನಡೆದಿದೆ.
ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಭೇಟಿ ನೀಡಿದರು. ಆ ನಂತ್ರ ಮನೆಯಿಂದ ಹೊರ ಬಂದಾಗ ದೇವೇಗೌಡರ ನಿವಾಸದ ಎಂದುರು ನೆರೆದಿದ್ದಂತ ಕಾರ್ಯಕರ್ತರನ್ನು ಕಂಡು ಕಣ್ಣೀರಿಟ್ಟರು.
ಹೆಚ್.ಡಿ ರೇವಣ್ಣ ಕಣ್ಣೀರು ಹಾಕೋದನ್ನು ಕಂಡಂತ ಜೆಡಿಎಸ್ ಕಾರ್ಯಕರ್ತರು, ನೀವು ಅಳಬೇಡಿ ಕಣಣ್ಣ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಈ ವೇಳೆ ರೇವಣ್ಣ ಹಾಗೆಲ್ಲ ಮಾತಾಡಬಾರದು ಅಂದಾಗ, ಯಾಕಣ್ಣ ಮಾತಾಡಬಾರದು ಎಂಬುದಾಗಿ ಕಾರ್ಯಕರ್ತರು ರೊಚ್ಚಿಗೆದ್ದರು ಎನ್ನಲಾಗುತ್ತಿದೆ.
ಜೆಡಿಎಸ್ ಕಾರ್ಯಕರ್ತರನ್ನು ಸಮಾಧಾನಿಸಿದಂತ ಹೆಚ್.ಡಿ ರೇವಣ್ಣ, ಕೆಲ ಕಾರ್ಯಕರ್ತರು ಜೊತೆಗೆ ಮಾತನಾಡಿದಾಗ, ಅವರು ಕಣ್ಣೀರು ಹಾಕಿದ್ರು ಎನ್ನಲಾಗುತ್ತಿದೆ. ಆ ಬಳಿಕ ಅಲ್ಲಿಂದ ಟೆಂಪಲ್ ರನ್ ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ತೆರಳಿದರು ಎಂಬುದಾಗಿ ತಿಳಿದು ಬಂದಿದೆ.
ವಿಜಯಪುರ : ಮೂರು ಮಕ್ಕಳ ಸಾವಿನ ಪ್ರಕರಣ : ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ‘FIR’ ದಾಖಲು
ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’