ಮಂಡ್ಯ: ಡಿಸೆಂಬರ್ 15 ರಂದು ಕುಮಾರಸ್ವಾಮಿ ಅಭಿನಂದನಾ ಸಭಾರಂಭ ರದ್ದು ಮಾಡಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಎಚ್‌ಡಿಕೆ ಅಭಿನಂದನಾ ಸಮಾರಂಭ ಮುಂದೂಡಿಕೆ ಮಾಡಲಾಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಕಾರ್ಯಕ್ರಮ ಮುಂದೂಡಲಾಗಿದೆ ಅಂತ ಮದ್ದೂರಿನಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ತಿಳಿಸಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಸೂಚನೆ ಮೇರೆಗೆ ಡಿಸೆಂಪರ್.15ರಂದು ನಿಗದಿ ಪಡಿಸಲಾಗಿದ್ದಂತ ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಬೇರೆ ಯಾವುದೇ ಕಾರಣಗಳು ಇಲ್ಲ. ಯಾವುದೇ ಗೊಂದಲಗಳು ಆಗಬಾರದು ಎಂದು ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಈ ಕಾರ್ಯಕ್ರಮ ಮಾಡುವ ಬಗ್ಗೆ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವು. ಸಮ್ಮೇಳನ ಮುಗಿದ ಮೇಲೆ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ಈ ಕಾರ್ಯಕ್ರಮದ ಬಗ್ಗೆ ಸಚಿವ ಚಲುವರಾಯಸ್ವಾಮಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಇಂತಹ ಜಿಲ್ಲಾ ಮಂತ್ರಿಗಳನ್ನ ಬಹಳ ನೋಡಿದ್ದೇವೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತಿಲ್ವಾ. ಸಮ್ಮಿಶ್ರವಾಗಿ ಚುನಾವಣೆ ಮಾಡಿದ್ದಾಗ ಇವರು ಏನು ಮಾಡಿದ್ರು. ಜನರ ತೀರ್ಮಾನ ಒಪ್ಪಿದ್ದೇವೆ. ನಮಗೂ ಮಾತನಾಡಲು ಬರುತ್ತದೆ. ಹೊಸ ಡಾಂಬರು ಬೇಡ, ಗುಂಡಿ ಬಿದ್ದಿರುವುದನ್ನ ಮುಚ್ಚಲಿ ಎಂದು ತಿರುಗೇಟು ನೀಡಿದರು.
ಸಾಹಿತ್ಯ ಸಮ್ಮೇಳನದ ಸಭೆಗಳಲ್ಲಿ ಕುಮಾರಸ್ವಾಮಿ ಭಾಗವಹಿಸದೇ ಇರುವ ವಿಚಾರವಾಗಿ ಮಾತನಾಡಿ ನಾವೆಲ್ಲ ಸಭೆಗಳಲ್ಲಿ ಭಾಗವಹಿಸಿದ್ದೇವೆ. ಕೇಂದ್ರ ಮಂತ್ರಿಗಳು ಬರಲು ಸಾಧ್ಯವಾಗಿಲ್ಲ. ಸಂಸತ್ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಭಾಗವಹಿಸಿಲ್ಲ. 1.30 ಕ್ಕೆ ಬರಲು ಹೇಳಿ 4 ಗಂಟೆಗೆ ಸಚಿವರು ಬರುತ್ತಾರೆ. ಇದಾ ಉಸ್ತುವಾರಿ ಸಚಿವರ ಉಟ್ಟು? ನಮಗೆ ವಹಿಸಿರುವ ಜವಾಬ್ದಾರಿ ಮಾಡುತ್ತಿದ್ದೇವೆ. ಜಿಲ್ಲಾಡಳಿತ ಕರೆದಿದ್ದಾರೆ ನಾವು ಹೋಗಿದ್ದೇವೆ. ನಾವು ನಾಡು ನುಡಿಯ ಕೆಲಸ ಮಾಡಿದ್ದೇವೆ. ಸಾಹಿತ್ಯ ಸಮ್ಮೇಳನ ಚೆನ್ನಾಗಿ ಮಾಡಲಿ ಎಂದು ತಿಳಿಸಿದರು.
ನಿಖಿಲ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದಂತ ಅವರು, ದೇವೇಗೌಡರು ತೀರ್ಮಾನ ಮಾಡುತ್ತಾರೆ. ಪಕ್ಷ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ನಲ್ಲೂ ವಂಶರಾಜಕಾರಣ ಇದೆ. ಜವಹಾರ್ ಲಾಲ್ ಕುಟುಂಬದಲ್ಲಿ ಕೂಡ ಕುಟುಂಬ ರಾಜಕಾರಣ ಇದೆ. ದೇವೇಗೌಡರ ಕುಟುಂಬ ರಾಜಕಾರಣ ಮಾಡಿದ್ರೆ ತಪ್ಪೇನು? ಕಾಂಗ್ರೆಸ್ ನಲ್ಲಿ ಇದೀಗ ಏನು ಆಗುತ್ತಿದೆ ನೋಡಿ. ಇದನ್ನ ಚಲುವರಾಯಸ್ವಾಮಿ ಹೇಳಬೇಕು. ಇದು ಬಹಳ ದಿನ ನಡೆಯುವುದಿಲ್ಲ. ಲಘುವಾಗಿ ಮಾತನಾಡಬೇಡಿ. ಗೌರವ ಇಟ್ಟುಕೊಂಡು ಮಾತನಾಡಿ. ಇದು ಕೊನೆಯಾಗದೇ ಇದ್ದರೇ, ನಾವು ಮಾತನಾಡುತ್ತೇವೆ. ನಾವು ನಾಯಕನ ಹತ್ತಿರ ಸೈ ಅನ್ನಿಸಿಕೊಳ್ಳಲು ಕೆಲಸ ಮಾಡುತ್ತೇವೆ. ಅದರಲ್ಲಿ ತಪ್ಪೇನೂ ಇದೆ? ನಮ್ಮದು ದೇವೇಗೌಡರ ಮನೆ ಮಾತ್ರ ಎಂದು ವಾಗ್ಧಾಳಿ ನಡೆಸಿದರು.
ಅವರ ತರಾ ಸಿದ್ದರಾಮಯ್ಯ ಜೊತೆ ಇರಬೇಕಾ, ಶಿವಕುಮಾರ್ ಜೊತೆ ಇರಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ. ನಮ್ಮ ಪಕ್ಷದ ಗೊಂದಲದ ಬಗ್ಗೆ ಇವರಿಗೆ ಯಾಕೆ ಮಾತನಾಡುತ್ತಾರೆ. ನಮ್ಮದು ಯಾಕೆ ಹುಡುಕುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಜಸ್ಟ್ ಪಾಸಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂಬುದಾಗಿ ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.