ನವದೆಹಲಿ: ಮಂಡ್ಯದಲ್ಲಿ ಹನುಮಧ್ವಜ ವಿವಾದ ವಿರೋಧಿಸಿ ನಡೆಸಲಾದಂತ ಬಿಜೆಪಿ ಪ್ರತಿಭಟನೆಯ ವೇಳೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದ್ದರು. ಹೀಗೆ ಕೇಸರಿ ಶಾಲು ಧರಿಸಿದ್ದಕ್ಕೆ ತಂದೆ ದೇವೇಗೌಡರಿಂದಲೇ ವಿರೋಧ ವ್ಯಕ್ತವಾಗಿದೆ.
ಶುಕ್ರವಾರದಂದು ನವದೆಹಲಿಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ಹೆಚ್ ಡಿಕೆ ಕೇಸರಿ ಶಾಲು ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ ಅವರ ಜೊತೆಗಿದ್ದಾಗ ನಾವು ನಮ್ಮ ಪಕ್ಷದ ಶಾಲೇ ಹಾಕಿಕೊಳ್ಳಬೇಕು ಎಂಬುದಾಗಿ ತಿಳಿಸಿದ್ದಾರೆ.
ಕೇಸರಿ ಶಾಲು ಧರಿಸಿದ್ದನ್ನೇ ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ವಿಲೀನವಾಗಲಿದೆ ಎಂಬ ರೀತಿಯಲ್ಲಿ ವಿಶ್ಲೇಷಣೆ ಮಾಡೋದು ಸರಿಯಲ್ಲ ಎಂದರು.
ಒಂದು ವೇಳೆ ನಾಳೆ ಪ್ರಧಾನಿ ಮೋದಿ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವಂತೆ ಕರೆದರೂ ನಾನು ನನ್ನ ಪಕ್ಷದ ಶಾಲು ಹಾಕಿಕೊಂಡೇ ಹೋಗುತ್ತೇನೆ ಎಂಬುದಾಗಿ ತಿಳಿಸಿದರು.
BIG NEWS: ರಾಜ್ಯ ಸರ್ಕಾರದಿಂದ ‘VA ನೇಮಕಾತಿ’ಯಲ್ಲಿ ಮಹತ್ವದ ಬದಲಾವಣೆ: ‘ಸ್ಪರ್ಧಾತ್ಮಕ ಪರೀಕ್ಷೆ’ ನಿಗದಿ
BIG NEWS: ‘ಸರ್ಕಾರಿ ಕಾರ್ಯಕ್ರಮ’ಗಳ ಆರಂಭದಲ್ಲೇ ‘ನಾಡಗೀತೆ’ ಹಾಡುವುದು ಕಡ್ಡಾಯ – ‘ರಾಜ್ಯ ಸರ್ಕಾರ’ ಆದೇಶ