ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ( Farmer PM HD Devegowdha ) ಭೀಷ್ಮಾಚಾರ್ಯರಂತೆ. ಅವರಿಗೆ ಸಾವು ಅನ್ನೋದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು ಯಾರೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Ex CM HD Kumaraswamy ) ಹೇಳಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲೇಬೇಕೆಂದು ದೇವೇಗೌಡರು ಶತಪಥ ಮಾಡಿದ್ದಾರೆ. ಹಾಗಾಗಿ, ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಅವರು ಇಚ್ಛಾಮರಣಿ ಎಂಬುದು ನನ್ನ ಅಚಲ ನಂಬಿಕೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ. ನಾನು ಅವರ ಭಾವನೆಗಳನ್ನು ಗಮನಿಸಿದ್ದೇನೆ ಎಂದರು.

2023ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಗಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ – ಮಾಜಿ ಸಿಎಂ HDK ವಿಶ್ವಾಸ

ಯಾವುದೇ ಕಾರಣಕ್ಕೂ ಅವರ ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಅವರ ಬಗ್ಗೆ ಕೆಟ್ಟದ್ದಾಗಿ ಚರ್ಚೆ ಮಾಡಿರುವ ವ್ಯಕ್ತಿಗಳ ಬಯಕೆ ಈಡೇರುವುದಿಲ್ಲ ಎಂದು ಅವರು ತಿರುಗೇಟು ನೀಡಿದರು.

ದೇವೆಗೌಡರ ಬಗ್ಗೆ ರಾಜಣ್ಣನವರ ಹೇಳಿಕೆ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯನವರ ಖಾಸಗಿ ಟೀಂ ನಲ್ಲಿ ಈ ಬಗ್ಗೆ ಚರ್ಚೆ ಆಗಿರುತ್ತದೆ. ದೇವೆಗೌಡರು ಇನ್ನೆಷ್ಟು ವರ್ಷ ಇರುತ್ತಾರೆ. ಅವರ ಕಾಲ ಮುಗಿಯಿತು ಅಂತ ಆಂತರಿಕವಾಗಿ ಮಾತನಾಡಿಕೊಂಡಿರುತ್ತಾರೆ. ಹಾಗಾಗಿ, ಮಾಜಿ ಶಾಸಕ ರಾಜಣ್ಣನವರು ವೇದಿಕೆ ಮೇಲೆ ಅದನ್ನೆ ಬಾಯಿತಪ್ಪಿ ಹೇಳಿದ್ದಾರೆ ಅಷ್ಟೆ ಎಂದರು.

ಸಿದ್ದರಾಮಯ್ಯನವರನ್ನು ಬೆಳೆಸಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲ. ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯಲು ಜೆಡಿಎಸ್‍ ಕಾರ್ಯಕರ್ತರು ಕಾರಣ. ಅದನ್ನು ಅರ್ಥಮಾಡಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಈ ಶಿಕ್ಷಕ ಪಲ್ಲಂಗದಾಟವಾಡಿದ್ದು ಎಷ್ಟು ಮಹಿಳೆಯರ ಜೊತೆಗೆ ಗೊತ್ತಾ.? ವೀಡಿಯೋ ಸಹಿತ ಹೊರಬಿದ್ದುದ್ದು ಹೇಗೆ ಗೊತ್ತಾ.?

ಇದಕ್ಕೂ ಮುನ್ನ ರಾಜಣ್ಣ ವಿರುದ್ಧ ಆಕ್ರೋಶ ಹೊರಹಾಕಿದ ಹೆಚ್ ಡಿಕೆ, ನಿನ್ನೆ ದೇವೆಗೌಡರ ವಿಚಾರದಲ್ಲಿ ಕೆಲವೊಂದು ಹೇಳಿಕೆಗಳು ಕೇಳುಬಂದಿತ್ತು. ಕೆಲ ಮಾಧ್ಯಮದಲ್ಲಿ ಕೆಲವೊಂದು ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಮೇಲೆ ಅಪಾರ್ಥ ಬರುವ ಹಾಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮ ಕೆಡಿಸಬೇಕೆಂದು ಕುಮಾರಸ್ವಾಮಿ ಹುನ್ನಾರ ನಡೆಸಿದ್ದಾರೆಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮ ಅದು ಅವರ ವೈಯಕ್ತಿಕ ವಿಚಾರ. ನಮ್ಮ ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ದೇವೆಗೌಡರ ಕೊಡುಗೆ ಏನೆಂಬುದರ ಬಗ್ಗೆ ಅನೇಕ ಪುಸ್ತಕಗಳಲ್ಲಿ ಬರೆದಿದ್ದಾರೆ ಎಂದ ಕುಮಾರಸ್ವಾಮಿ ಅವರು, ಮಾಜಿ ಪ್ರಧಾನಿಗಳ ಸಾಧನೆ ಬಗ್ಗೆ ಬಂದಿರುವ ‘ ಫರೋಸ್ ಇನ್ ಎ ಫೀಲ್ಡ್ -ದಿ ಅನ್ಎಕ್ಸ್ಪ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡ’, ಹಾಗೂ ‘ ಸಾಧನೆಯ ಶಿಖರಾರೋಹಣ ‘ ಕೃತಿಗಳನ್ನು ತೋರಿಸಿದರು.

BREAKING NEWS: ಬ್ರಿಯಾನ್ ಲಾರಾ ಟೆಸ್ಟ್ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ | ENG vs IND

ನಾಡಿನ ಜನತೆಯ ಆಕ್ರೋಶ ಜಾಸ್ತಿ ಆದ ಮೇಲೆ ರಾಜಣ್ಣ ಮಾತನಾಡಿದ್ದಾರೆ. ನನ್ನ ಹೇಳಿಕೆ ತಿರಚಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ನನಗೆ ಸಿದ್ದರಾಮಯ್ಯನವರ ಮೇಲೆ ದ್ವೇಷ ಇಲ್ಲ. ನಾನು ಕಳೆದ ಒಂದು ತಿಂಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿ ಎಲ್ಲೂ ಮಾತಾನಾಡಿಲ್ಲ. ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾವ್ಯಾಕೆ ಆಕ್ಷೇಪ ಮಾಡೋಣ ಎಂದು ಸ್ಪಷ್ಟನೆ ನೀಡಿದರು.

Share.
Exit mobile version