Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಘಾತದಲ್ಲಿ ಮಡಿದ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ವಿತರಿಸಿದ ಇಂಧನ ಸಚಿವ ಜಾರ್ಜ್‌

18/02/2026 10:22 PM

ನ್ಯಾಯಾಧೀಶರಾಗಿ ಆಯ್ಕೆಯಾದ ಸಂಯುಕ್ತಾ, ರಕ್ಷಿತಾಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

18/02/2026 10:18 PM

ನೀವು ಬೆನ್ನು ನೋವಿನಿಂದ ಬಳಲುತ್ತಿದ್ದೀರಾ.? ಹಾಗಾದ್ರೆ, ಪ್ರತಿದಿನ ಕುಂಬಳಕಾಯಿ ಬೀಜ ತಿನ್ನಿ!

18/02/2026 10:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುಂಡಿಗಳ ಬಗ್ಗೆ ಡಿಸಿಎಂ ಅವರನ್ನು ಕೇಳಿ ಎಂದ ಸಿಎಂಗೆ ಹೆಚ್.ಡಿ.ಕುಮಾರಸ್ವಾಮಿ ತರಾಟೆ
KARNATAKA

ಗುಂಡಿಗಳ ಬಗ್ಗೆ ಡಿಸಿಎಂ ಅವರನ್ನು ಕೇಳಿ ಎಂದ ಸಿಎಂಗೆ ಹೆಚ್.ಡಿ.ಕುಮಾರಸ್ವಾಮಿ ತರಾಟೆ

By kannadanewsnow0901/11/2025 3:44 PM

ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಲು ವಿಧಿಸಿರುವ ಡೆಡ್ ಲೈನ್ ಮುಗಿದಿದ್ದರೂ ಇನ್ನು ಗುಂಡಿಗಳು ಹಾಗೆಯೇ ಇವೆ. ಆ ಬಗ್ಗೆ ಮಾಧ್ಯಮಗಳು ಕೇಳಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಎಂದಿರುವುದು ಬೇಜವಾಬ್ದಾರಿಯ ಪರಮಾವಧಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಸಪ್ನ ಪುಸ್ತಕ ಮಳಿಗೆ ಪುಸ್ತಕ ಜಾತ್ರೆಯಲ್ಲಿ ಪಾಲ್ಗೊಂಡ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಶುಕ್ರವಾರದ ದಿನ ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ಅವರ ಹೇಳಿಕೆ ಬೇಜವಾಬ್ದಾರಿತನದ್ದು ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾ? ಅಥವಾ ಡಿ.ಕೆ. ಶಿವಕುಮಾರ್ ಅವರಾ? ಎನ್ನುವ ಪ್ರಶ್ನೆ ಬರುತ್ತೆ. ಮುಖ್ಯಮಂತ್ರಿಗಳೇ ಸಭೆ ಮಾಡಿ ಗುಂಡಿ ಮುಚ್ಚಲು ಡೆಡ್ ಲೈನ್ ಕೊಟ್ಟಿದ್ದರು. ಆದರೆ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಮುಖ್ಯಮಂತ್ರಿಗಳ ಮಾತಿಗೂ ಸಹ ಎಷ್ಟು ಬೆಲೆ ಅಧಿಕಾರಿಗಳು ಕೊಡುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಹೇಳಿಕೆ ನೋಡಿದಾಗ ಅವರು ಈ ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಣೆ ಮಾಡುವುದಕ್ಕೆ ಅಸಮರ್ಥ ಆಗಿದ್ದೇನೆ ಎಂದು ಹೇಳಿದ ರೀತಿ ಇದೆ. ಅವರು ಇಂಥ ಹೇಳಿಕೆ ನೀಡಬಾರದು ಎಂದು ಅವರು ಹೇಳಿದರು.

ನವೆಂಬರ್ ಕ್ರಾಂತಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು:

ನವೆಂಬರ್ 21ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗಿ ಪದಗ್ರಹಣ ಮಾಡುತ್ತಾರೆ ಎಂಬ ಚರ್ಚೆ ಬಗ್ಗೆ ಗಮನ ಸೆಳೆದಾಗ, ಅದು ಅವರ ಪಕ್ಷದಲ್ಲಿನ ತೀರ್ಮಾನಗಳು. ಅವರಿಗೆ ಬಿಟ್ಟಿರೋದು, ನಾನು ಈ ವಿಷಯದಲ್ಲಿ ಮಾತಮಾಡುವುದು ಸಣ್ಣತನ ಆಗುತ್ತದೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡುತ್ತಾರೋ ಮಾಡಿಕೊಳ್ಳಲಿ ಎಂದರು ಕುಮಾರಸ್ವಾಮಿ ಅವರು.

ಸರ್ಕಾರದ ಅವಧಿ ಇನ್ನು ಎರಡೂವರೆ ವರ್ಷ ಇದೆ. ಆದರೆ ಎರಡೂವರೆ ವರ್ಷ ಸರ್ಕಾರ ನಡೆಸುವಲ್ಲಿ ಕಾಂಗ್ರೆಸ್ ನವರೇ ಪ್ರತಿನಿತ್ಯ ನಗೆಪಾಟಿಗೆ ಒಳಗಾಗುತ್ತಿದ್ದಾರೆ. ವಿರೋಧ ಪಕ್ಷಗಳು ಮಾತಾಡುವ ಅವಶ್ಯಕತೆ ಇಲ್ಲ. ಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವರವರೇ ಮಾತನಾಡುತ್ತಿರುವಾಗ ನಾವು ಯಾವ ದೃಷ್ಟಿಯಿಂದ ನೋಡೋದು? ಅವರ ಭಿನ್ನಮತ ನೋಡುವ ಅಗತ್ಯ ಎನ್ಡಿಎ ಮೈತ್ರಿಕೂಟಕ್ಕೆ ಇಲ್ಲ. ಅವರ ಪಕ್ಷದಲ್ಲಿರುವ ಶಾಸಕರು, ಮಂತ್ರಿಗಳೇ ದೊಡ್ಡ ಮಟ್ಟದಲ್ಲಿ ನೋಡ್ತಾ ಇದ್ದಾರೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ಮನೆಗಳ ಮುಂದೆ ಕಸ; ಸರ್ಕಾರದ ಹೊಸ ಕಾರ್ಯಕ್ರಮ ಎಂದು ಲೇವಡಿ

ಬಿಬಿಎಂಪಿ ಸಿಬ್ಬಂದಿ ಮನೆಗಳ ಮುಂದೆ ಕಸ ಸುರಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಮನೆಗಳ ಮುಂದೆ ಕಸ ಹಾಕುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದೆ. ಜನರು ಕಸ ಬೀದಿಯಲ್ಲಿ ಹಾಕಿದರು ಎಂದು ಬೀದಿಯಲ್ಲಿರೋ ಕಸ ತಂದು ಜನರ ಮನೆ ಮುಂದೆ ಹಾಕಿದರೆ ಅರ್ಥ ಇದೀಯಾ? ಅದರಿಂದ ಏನು ಸಾಧನೆ ಮಾಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಜವಾಬ್ದಾರಿ ಮಾಡುವಲ್ಲಿ ವೈಜ್ಞಾನಿಕ ತೀರ್ಮಾನ ಮಾಡಬೇಕು. ಅದು ಬಿಟ್ಟು ಲಾರಿಯಲ್ಲಿ ಕಸ ತುಂಬಿಕೊಂಡು ಒಂದು ಮನೆ ಮುಂದೆ ಹೊರಗಡೆ ಹಾಕುವುದು ಎಷ್ಟು ಸರಿ? ಸರ್ಕಾರಕ್ಕೆ ಸಮಸ್ಯೆ ಇದೆ, ಅವರಿಗೆ ಕಸ ವಿಲೇವಾರಿ ಮಾಡುವುದಕ್ಕೆ ಜಾಗ ಇಲ್ಲ. ಅದಕ್ಕೆ ಮನೆಗಳ ಮುಂದೆ ತಂದು ಹಾಕಿದರೆ ಜನರೇ ಕಸ ವಿಲೇವಾರಿ ಮಾಡಿಕೊಳ್ಳುತ್ತಾರೆ ಎನ್ನುವ ಭಾವನೆ ಇರಬಹುದು. ಆ ಉದ್ದೇಶದಿಂದ ಸರ್ಕಾರ ಮನೆಗಳ ಮುಂದೆ ಕಸ ಸುರಿಯುವ ಹೊಸ ವಿನೂತನ ಕಾರ್ಯಕ್ರಮ ಮಾಡಿದೆ ಎಂದು ಹೆಚ್ಡಿಕೆ ಕಿಡಿಕಾರಿದರು.

ಸುರಂಗ ರಸ್ತೆ ಬಗ್ಗೆ ಪ್ರತಿಕ್ರಿಯೆ:

ಸುರಂಗ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ನೋಡೋಣ.. ಇವರು ಟನಲ್ ರಸ್ತೆ ಕೆಲಸ ಯಾವಾಗ ಪ್ರಾರಂಭ ಮಾಡುತ್ತಾರೆ ಎಂದು. ನುರಿತ ತಜ್ಞರು ಅಭಿಪ್ರಾಯ ಪಡೆದು ಕೆಲಸ ಆರಂಭ ಮಾಡುತ್ತಾರೋ ಅಥವಾ ಹಾಗೆಯೇ ಕಾಮಗಾರಿ ಆರಂಭ ಮಾಡುತ್ತಾರೋ ನೋಡೋಣ. ನಾನು ಹೇಳೋದು ಬೆಂಗಳೂರು ಜನರ ಪ್ರತಿನಿತ್ಯ ಜನರ ಸಮಸ್ಯೆ ಬಗ್ಗೆ. ಅದು ಬಗೆಹರಿಯಬೇಕು. ಇಲ್ಲಿ ಟನಲ್ ರೋಡ್ ಮಾಡ್ತಾರೋ, ಎಲಿವೆಟೆಡ್ ರಸ್ತೆ ಮಾಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು. ಜನರು ಪ್ರತಿನಿತ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರದ ವೈಫಲ್ಯಗಳ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜನರ ಬದುಕಿನಲ್ಲಿ ಚಲ್ಲಾಟ ಆಡಬೇಡಿ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ:

ರಾಜ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಬೇಕಾದಷ್ಟು ನಡೆಯುತ್ತಿದೆ. ಮಾತನಾಡುವುದಕ್ಕೆ ಬೇಕಾದಷ್ಟು ವಿಷಯ ಇದೆ. ಜನ 70, 80 ವರ್ಷಗಳ ಕಾಲ ಕಷ್ಟಪಟ್ಟು ಸಂಪಾದನೆ ಮಾಡಿ ಆಸ್ತಿಯನ್ನ ದೋಚುತ್ತಿದ್ದಾರೆ. ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ. ಇದಕ್ಕೆಲ್ಲ ಅಂತ್ಯ ಹಾಡುವ ಕಾಲ ಬರುತ್ತದೆ ಎಂದು ಅವರು ಹೇಳಿದರು.

ಮಧ್ಯಂತರ ಚುನಾವಣೆಗೆ ನಾವು ರೆಡಿ ಎಂಬ ಆರ್.ಅಶೋಕ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಅವರು ಸಿದ್ಧ ಎಂದರೆ ನಾವು ಸಿದ್ಧವೇ. ಚುನಾವಣೆ ಬಂದರೆ ಎದುರಿಸಬೇಕಲ್ಲವೇ? ಸರ್ಕಾರ ಬಿದ್ದುಹೋದರೆ ನಾವು ತಯಾರು ಆಗಬೇಕು. ನಮ್ಮದು ಜವಾಬ್ದಾರಿ ಇದೆ. ಆದರೆ, ನಾನು ಮಧ್ಯಂತರ ಚುನಾವಣೆಯ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ಈ ಸರ್ಕಾರಕ್ಕೆ ಸಂಪೂರ್ಣ 136 ಶಾಸಕರು ಇದ್ದಾರೆ. ಅವರಲ್ಲಿರುವ ಭಿನ್ನಮತ ಬಗೆಹರಿಸಿಕೊಂಡರೆ ಸರ್ಕಾರ ಪೂರ್ಣಾವಧಿ ಕಾಲ ಇರುತ್ತದೆ. ಇಲ್ಲವಾದರೆ ಹೋಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಅವಧಿ ಮುಕ್ತಾಯ ಆಗಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಸಮೀಕ್ಷೆಯಿಂದ ಏನು ಸಾಧನೆ ಮಾಡುತ್ತಾರೆ ಇವರು? ಅದರಲ್ಲಿ ಎಷ್ಟರಮಟ್ಟಿಗೆ ಸಮೀಕ್ಷೆ ನಡೆಸಿದ್ದಾರೆ? ಎಷ್ಟರಮಟ್ಟಿಗೆ ಜನ ಆ ಸಮೀಕ್ಷೆಗೆ ಸ್ಪಂದಿಸಿದ್ದಾರೆ?

ಸಮಾಜದಲ್ಲಿ ಯಾರೆಲ್ಲಾ ಬಡತನದಲ್ಲಿ ಇದ್ದಾರೆ ಎನ್ನುವುದು ಗಮನಿಸಬೇಕು. ಇಲ್ಲಿ ಜಾತಿ ಪ್ರಶ್ನೆ ಅಲ್ಲ. ಎಲ್ಲ ಜಾತಿಯಲ್ಲಿಯು ಬಡವರಿದ್ದಾರೆ. ಮೊದಲು ಶಿಕ್ಷಣ ಕೋಡುವ ಕೆಲಸ ಮಾಡಬೇಕು. ಇವತ್ತು ರಾಜ್ಯದಲ್ಲಿ 63 ಸಾವಿರ ಶಿಕ್ಷಕರ ಕೊರತೆ ಇದೆ ಎನ್ನುವ ಮಾಧ್ಯಮ ವರದಿ ನೋಡಿದೆ.

ನಿಮ್ಮ ಬೆಂಗಳೂರು ನಗರ ವಿವಿಯಲ್ಲಿ ಶೇ.94ರಷ್ಟು ಬೋಧಕರ ಹುದ್ದೆಗಳು ಖಾಲಿ ಇವೆ ಎನ್ನುವ ಮಾಧ್ಯಮ ವರದಿಯನ್ನು ಗಮನಿಸಿದೆ. ಅಲ್ಲೆಲ್ಲ ಹುದ್ದೆಗಳನ್ನು ಖಾಲಿ ಬಿಟ್ಟು ಸರ್ಕಾರ ಯಾವ ಸಮೀಕ್ಷೆ ಮಾಡಿ ಏನು ಸಾಧನೆ ಮಾಡುತ್ತೆ. ಸರ್ಕಾರದಲ್ಲಿ ಹಲವಾರು ಲೋಪದೋಷಗಳು ಇವೆ. ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾಗಳಿಗೆ ಮಾಡಿರುವ ಸಮೀಕ್ಷೆ ಇದು. ನಾಡಿನ ಜನತೆ ಉದ್ದಾರಕ್ಕೆ ಮಾಡಿರೋ ಸಮೀಕ್ಷೆ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

BIG NEWS : ಕರ್ನಾಟಕದ ಮದರಸಾಗಳಲ್ಲಿ `ಕನ್ನಡ’ ಕಲಿಸಲು ಆದ್ಯತೆ : CM ಘೋಷಣೆ

ಇಂದು ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ: ಸಾಗರ AC ವೀರೇಶ್ ಕುಮಾರ್

Share. Facebook Twitter LinkedIn WhatsApp Email

Related Posts

ಆಘಾತದಲ್ಲಿ ಮಡಿದ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ವಿತರಿಸಿದ ಇಂಧನ ಸಚಿವ ಜಾರ್ಜ್‌

18/02/2026 10:22 PM1 Min Read

ನ್ಯಾಯಾಧೀಶರಾಗಿ ಆಯ್ಕೆಯಾದ ಸಂಯುಕ್ತಾ, ರಕ್ಷಿತಾಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

18/02/2026 10:18 PM1 Min Read

BREAKING: ಸಾರಿಗೆ ನಿಗಮಗಳ ಸಿಬ್ಬಂದಿ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ: ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಿಸಿ ಆದೇಶ

18/02/2026 9:21 PM2 Mins Read
Recent News

ಆಘಾತದಲ್ಲಿ ಮಡಿದ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ವಿತರಿಸಿದ ಇಂಧನ ಸಚಿವ ಜಾರ್ಜ್‌

18/02/2026 10:22 PM

ನ್ಯಾಯಾಧೀಶರಾಗಿ ಆಯ್ಕೆಯಾದ ಸಂಯುಕ್ತಾ, ರಕ್ಷಿತಾಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

18/02/2026 10:18 PM

ನೀವು ಬೆನ್ನು ನೋವಿನಿಂದ ಬಳಲುತ್ತಿದ್ದೀರಾ.? ಹಾಗಾದ್ರೆ, ಪ್ರತಿದಿನ ಕುಂಬಳಕಾಯಿ ಬೀಜ ತಿನ್ನಿ!

18/02/2026 10:09 PM

ಅಮೆರಿಕಕ್ಕೆ ಸಾಗರದೊಳಗಿನ ಕೇಬಲ್ ಹಾಕಲು, ಗೂಗಲ್’ನಿಂದ ಭಾರತದಲ್ಲಿ 1.35 ಲಕ್ಷ ಕೋಟಿ ರೂ. ಹೂಡಿಕೆ!

18/02/2026 9:36 PM
State News
KARNATAKA

ಆಘಾತದಲ್ಲಿ ಮಡಿದ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ವಿತರಿಸಿದ ಇಂಧನ ಸಚಿವ ಜಾರ್ಜ್‌

By kannadanewsnow0918/02/2026 10:22 PM KARNATAKA 1 Min Read

ಬೆಂಗಳೂರು : ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್‌ ತಲಾ ಒಂದು…

ನ್ಯಾಯಾಧೀಶರಾಗಿ ಆಯ್ಕೆಯಾದ ಸಂಯುಕ್ತಾ, ರಕ್ಷಿತಾಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದನೆ

18/02/2026 10:18 PM

BREAKING: ಸಾರಿಗೆ ನಿಗಮಗಳ ಸಿಬ್ಬಂದಿ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ: ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಿಸಿ ಆದೇಶ

18/02/2026 9:21 PM

ಅಂಗನವಾಡಿ ನೌಕರರ ಕಾರ್ಯ ಶ್ಲಾಘನೀಯವಾದದ್ದು: ಸಾಗರ ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್

18/02/2026 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.