ಬೆಂಗಳೂರು: ಓಲಾ, ಉಬರ್ ಆಟೋಗಳ ಪ್ರಯಾಣಕ್ಕೆ ಶೇ.5ರಷ್ಟು ಸೇವಾ ಶುಲ್ಕವನ್ನು ರಾಜ್ಯ ಸರ್ಕಾರ ನಿಗದಿ ಪಡಿಸಿತ್ತು. ಆದ್ರೇ ಇದು ಕಡಿಮೆ, ಇದಕ್ಕಿಂತ ಹೆಚ್ಚು ನಿಗಧಿ ಪಡಿಸೋ ನಿಟ್ಟಿನಲ್ಲಿ, ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯನ್ನು ವಜಾಗೊಳಿಸಿರುವಂತ ಹೈಕೋರ್ಟ್, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ರಾಜ್ಯ ಸರ್ಕಾರದಿಂದ ನವೆಂಬರ್.22, 2022ರಂದು ಓಲಾ, ಉಬರ್ ಆಟೋ ಪ್ರಯಾಣಕ್ಕೆ ಶೇ.5ರಷ್ಟು ಮಾತ್ರವೇ ಜಿಎಸ್ಟಿ ವಿಧಿಸಿ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ಓಲಾ ಮತ್ತು ಉಬರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿಯಲ್ಲಿ ತಕ್ಷಣದಿಂದ ಬರುವಂತೆ ಈ ಸೇವೆಯ ಸ್ಥಗಿತಗೊಳಿಸಬೇಕು ಮತ್ತು ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮನವಿ ಮಾಡಿದ್ದವು.
ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೇ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಓಲಾ, ಉಬರ್ ಮನಸೋಇಚ್ಛೆ ಶುಲ್ಕ ವಿಧಿಸುತ್ತಿದ್ದ ಅಗ್ರಿಗ್ರೇಟರ್ಗಳಿಗೆ ಕಡಿವಾಣ ಬಿದ್ದಂತೆ ಆಗಿದೆ.
BREAKING: ‘ಸಭೆ, ವೀಡಿಯೋ ಸಂವಾದ’ ನಡೆಸುವಂತಿಲ್ಲ: ರಾಜ್ಯ ಸರ್ಕಾರಕ್ಕೆ ‘ಚುನಾವಣಾ ಆಯೋಗ’ ಖಡಕ್ ಸೂಚನೆ
BREAKING : ಮಹಿಳೆ ಕಿಡ್ನಾಪ್ ಕೇಸ್ : ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಅರ್ಜಿ ಸಲ್ಲಿಕೆ