ಬೆಂಗಳೂರು: ಬೆಸ್ಕಾಂ ಪ್ರೀಪೇಯ್ಡ್ ಮೀಟರ್ ಶುಲ್ಕಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.
ಬೆಸ್ಕಾಂನಿಂದ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಕಡ್ಡಾಯ ವಿಚಾರವಾಗಿ ಬೆಸ್ಕಾಂ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎಂಬುವರಿಂದ ರಿಟ್ ಅರ್ಜಿ ಸಲ್ಲಿಸಿದ್ದರು. 2000 ರೂಪಾಯಿ ಇದ್ದ ಮೀಟರ್ ಈಗ 8910 ರೂ ಕೊಡಬೇಕಾಗಿದೆ. ಬೇರೆ ರಾಜ್ಯಗಳಲ್ಲಿ 900 ರೂ ಗಳಿಗೆ ಪ್ರೀಪೆಯ್ಡ್ ಮೀಟರ್ ನೀಡಲಾಗುತ್ತಿದೆ. ಕೆಇಆರ್ ಸಿ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲವೆಂದಿತ್ತು. ಆದರೇ ಬೆಸ್ಕಾಂ ಸುತ್ತೋಲೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದಿದೆ ಎಂಬುದಾಗಿ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.
ಈ ವೇಳೆ ದುಬಾರಿ ಪ್ರೀಪೆಯ್ಡ್ ವಿದ್ಯುತ್ ಮೀಟರ್ ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ನಿಮ್ಮಿಂದ ಯಾರು ಫ್ರೀ ವಿದ್ಯುತ್ ಕೇಳಿದ್ದರು ಎಂಬುದಾಗಿ ಹೈಕೋರ್ಟ್ ಪ್ರಶ್ನೆ ಮಾಡಿತು. ಬಡವರಿಂದ ಇಷ್ಟು ಹಣ ಕಿತ್ತರೆ ಎಲ್ಲಿಗೆ ಹೋಗಬೇಕು ಎಂಬುದಾಗಿ ಪ್ರಶ್ನಿಸಿತು.
ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೇ ಬಡವರೇನು ಮಾಡಬೇಕು. ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ಬೆಸ್ಕಾಂ ಪ್ರೀಪೇಯ್ಡ್ ಮೀಟರ್ ಶುಲ್ಕಕ್ಕೆ ಹೈಕೋರ್ಟ್ ನಿಂದ ಮಧ್ಯಂತರ ತಡೆಯಾಜ್ಞೆ ನೀಡಿತು.