ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆಯಂತೆ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧ ಸಲ್ಲಿಸಲಾಗಿದ್ದಂತ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು. ಬಳಿಕ ತೀರ್ಪು ಕಾಯ್ದಿರಿಸಿತ್ತು. ಆದ್ರೇ ಕಾಯ್ದಿರಿಸಿದ್ದಂತ ತೀರ್ಪು ಪ್ರಕಟಿಸಿಲ್ಲ. ಬೋರ್ಡ್ ಪರೀಕ್ಷೆಗೆ ಅನುಮತಿ ಕೂಡ ನೀಡಿಲ್ಲ ಎಂಬುದಾಗಿ ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಪಠ್ಯಕ್ರಮದ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠವು ಅನುಮತಿ ನೀಡಿದೆ ಎಂಬುದಾಗಿ ಸುದ್ದಿಯೊಂದು ಹರಿದಾಡುತ್ತಿದೆ ಎಂದಿದ್ದಾರೆ.
ಹೈಕೋಟ್ರ್ ಏಕಸದಸ್ಯ ಪೀಠವು 5, 8, 9 ಮತ್ತು 11ನೇ ತರಗತಿ ಪರೀಕ್ಷೆ ಎಕ್ಸಾಂ ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗಿಯ ಪೀಠ ಪಬ್ಲಿಕ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಹೀಗಾಗಿ ನಿಗದಿಯಂತೆ ಸೋಮವಾರದಿಂದ 5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯಲಿದೆ ಎಂಬುದಾಗಿ ಸುದ್ದಿಯಲ್ಲಿ ಇದೆ. ಆದ್ರೇ ಇದು ನಿಜವಲ್ಲ. ಸುಳ್ಳು ಸುದ್ದಿಯಾಗಿದೆ. ಹೈಕೋರ್ಟ್ ನಿಂದ ಯಾವುದೇ ರೀತಿಯ ಇಂತಹ ತೀರ್ಪು ನೀಡಿಲ್ಲ. ಯಾವುದೇ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಒಳಗಾಗಬಾರದು. ಹೈಕೋರ್ಟ್ ತೀರ್ಪಿನ ನಂತ್ರವೇ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಯ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದೆ.
BREAKING : ‘ನೀಟ್ ಪಿಜಿ ಪರೀಕ್ಷೆ’ ಮುಂದೂಡಿಕೆ, ಹೊಸ ‘ವೇಳಾಪಟ್ಟಿ’ ಹೀಗಿದೆ! |NEET PG 2024 exam