ಬೆಂಗಳೂರು: ಉದ್ಯಮಿ ವಿಜಯ್ ತಾತಾ ಅವರಿಗೆ 50 ಕೋಟಿ ನೀಡುವಂತೆ ಬೆದರಿಕೆ ಆರೋಪದ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಎಂಎಲ್ಸಿ ಹೆಚ್.ಎಂ ರಮೇಶ್ ಗೌಡಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ಟೋಬರ್.29ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಎಸ್ ಪಿಪಿ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ವಿಚಾರಣೆಯನ್ನು ಅಲ್ಲಿಯವರೆಗೆ ಮುಂದೂಡಿಕೆ ಮಾಡಿದೆ.
ಇಂದು ಉದ್ಯಮಿ ವಿಜಯ್ ತಾತಾ ಅವರಿಗೆ 50 ಕೋಟಿ ಹಣಕ್ಕೆ ಬೆದರಿಕೆ ಆರೋಪದಲ್ಲಿ ದಾಖಲಾಗಿದ್ದಂತ ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮಾಜಿ ಪರಿಷತ್ ಸದಸ್ಯ ಹೆಚ್.ಎಂ ರಮೇಶ್ ಗೌಡ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ವಾದಿಸಿ, ಉದ್ಯಮಿ ವಿಜಯ್ ತಾತಾ ಅವರು ನೀಡಿದಂತ ದೂರು ಆದರಿಸಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್.3ರಂದು ಎನ್ ಸಿ ಆರ್ ದಾಖಲಾಗುತ್ತದೆ. ಆ ಬಳಿಕ NCR ನೀಡಿದ ದಿನವೇ ಎಫ್ಐಆರ್ ಅನ್ನು ಪೊಲೀಸರು ದಾಖಲಿಸಿದ್ದಾರೆ. ಇದು ಏಕೆ ಎಂಬುದಾಗಿ ಪ್ರಶ್ನಿಸಿದರು.
ಈ ಸಂಬಂಧ ಅಕ್ಟೋಬರ್.29ರಂದು ವಿವರಣೆ ನೀಡುವಂತೆ ಹೈಕೋರ್ಟ್ ನ್ಯಾಯಪೀಠವು ಸೂಚಿಸಿತು. ಇದೇ ಸಂದರ್ಭದಲ್ಲಿ ಎಸ್ ಪಿಪಿ ಬಿಎನ್ ಜಗದೀಶ್ ಅವರು ಅಲ್ಲಿಯವರೆಗೆ ಯಾವುದೇ ಬಲವಂತದ ಕ್ರಮವಿಲ್ಲ ಎಂಬುದಾಗಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡಂತ ಹೈಕೋರ್ಟ್ ನ್ಯಾಯಪೀಠವು ವಿಚಾರಣೆಯನ್ನು ಅಕ್ಟೋಬರ್.29ಕ್ಕೆ ಮುಂದೂಡಿಕೆ ಮಾಡಿದೆ.
ಸಿ.ಪಿ ಯೋಗೇಶ್ವರ್ ಹುಲಿ ಬೋನಿಗೆ ಹೋಗಿದ್ದಾರೆ, ಈಗ ಮಣಿಸಬೇಕು, ಇಲ್ಲವೇ ಬಲಿ ಆಗಬೇಕು: ಸಿ.ಟಿ ರವಿ
ಇತಿಹಾಸದಲ್ಲಿ ಮೊದಲ ಬಾರಿಗೆ 80,000 ರೂ.ಗಳನ್ನು ದಾಟಿದ ಚಿನ್ನದ ಬೆಲೆ | Gold Price