ಮುಂಬೈ: 16 ವರ್ಷದ ಅತ್ಯಾಚಾರ ಸಂತ್ರಸ್ತೆ ತಾನು ಆತನ ಹೆಂಡತಿ ಎಂದು ಹೇಳಿಕೆ ನೀಡಿದ ನಂತರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾದ 28 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.

ಸಂತ್ರಸ್ತೆಯ ಹೇಳಿಕೆಯನ್ನು ಗಮನಿಸಿದ ನ್ಯಾಯಾಲಯ, ಸಂತ್ರಸ್ತೆಯು ತನ್ನ ಸ್ವಂತ ಇಚ್ಛೆಯ ಮೇರೆಗೆ ಆರೋಪಿಯೊಂದಿಗೆ ಒಟ್ಟಿಗೆ ಇರುವ ಬಯಕೆಯನ್ನು ಗಮನಿಸಿದ್ದು ಈ ತೀರ್ಪು ನೀಡಿದ್ದಾರೆ.

ಏನಿದು ಘಟನೆ?

ಜೂನ್ 18, 2020 ರಂದು, ಬಾಲಕಿ ತನ್ನ ತಾಯಿಗೆ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋದವಳು ಮತ್ತೆ ವಾಪಸ್‌ ಮನೆಗೆ ಮರಳಲಿಲ್ಲ. ಇದ್ರಿಂದ ಗಾಬರಿಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಹುಡುಕಾಟದ ಎರಡು ತಿಂಗಳ ನಂತ್ರ ಪತ್ತೆಯಾದ ಬಾಲಕಿಯನ್ನು ಪೊಲೀಸರು ತಾಯಿಗೆ ಒಪ್ಪಿಸಿದರು.

ನಂತ್ರ ಬಾಲಕಿ ತಾಯಿ ಈ ಸಂಬಂಧ ದೂರು ನೀಡಿದ್ದಳು. ನಂತರ ಪೊಲೀಸರು ಆ ವ್ಯಕ್ತಿಯನ್ನು ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು POCSO ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪರಾರಿಯಾಗಿದ್ದ ಆರೋಪಿಯನ್ನು ಒಂದು ವರ್ಷದ ನಂತ್ರ ಬಂಧಿಸಲಾಯ್ತು.

ವಿಚಾರಣೆ ಸಂದರ್ಭದಲ್ಲಿ ತಾಯಿ, ತನ್ನ ಮಗಳು ಅಪ್ರಾಪ್ತ ವಯಸ್ಕಳಾಗಿದ್ದಾಳೆ ಮತ್ತು ಆರೋಪಿಯು ಮದುವೆಯಾಗಿ ಮಕ್ಕಳಿದ್ದರೂ, ಅವನು ತನ್ನ ಮಗಳಿಗೆ ಆಮಿಷವೊಡ್ಡಿದ್ದನು ಮತ್ತು ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ಆರೋಪಿಸಿದಳು.

ಆದ್ರೆ, ಆರೋಪಿಯ ಜೊತೆಯಲ್ಲಿದ್ದಾಗ ಮಂಗಳಸೂತ್ರವನ್ನು ಧರಿಸಿ ಆರೋಪಿಯ ಪತ್ನಿಯಾಗಿ ವಾಸವಿದ್ದ ಬಾಲಕಿ ವಿವಿಧ ಸಂದರ್ಭಗಳಲ್ಲಿ ದೈಹಿಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಬಾಲಕಿ ಅಪ್ರಾಪ್ತಳಾಗಿದ್ದರೂ, ಇಬ್ಬರು ಪತಿ-ಪತ್ನಿಯಾಗಿ ಒಟ್ಟಿಗೆ ಇರುವುದನ್ನು ಗಮನಿಸಿದ ಹೈಕೋರ್ಟ್ ವ್ಯಕ್ತಿಗೆ ಜಾಮೀನು ನೀಡಿದೆ.

BIGG NEWS : ಭಕ್ತರಿಗೆ ಮುಖ್ಯ ಮಾಹಿತಿ : ವರ್ಷಕ್ಕೊಮ್ಮೆ ದರ್ಶನ ನೀಡುವ ‘ಹಾಸನಾಂಬೆ’ ದರ್ಶನಕ್ಕೆ ಇಂದು ಕೊನೆಯ ದಿನ |Hasanambe Temple

WATCH VIDEO: ʻಪಾಕ್‌ ರಾಷ್ಟ್ರಧ್ವಜʼವನ್ನು ಉಲ್ಟಾ ಹಿಡಿದು ಸಂಭ್ರಮಿಸುತ್ತಿದ್ದ ಅಭಿಮಾನಿ!… ಮುಂದೇನಾಯ್ತು ನೋಡಿ

BIGG NEWS : ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಶಿಷ್ಯ ವೇತನ’ಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

BIGG NEWS : ಭಕ್ತರಿಗೆ ಮುಖ್ಯ ಮಾಹಿತಿ : ವರ್ಷಕ್ಕೊಮ್ಮೆ ದರ್ಶನ ನೀಡುವ ‘ಹಾಸನಾಂಬೆ’ ದರ್ಶನಕ್ಕೆ ಇಂದು ಕೊನೆಯ ದಿನ |Hasanambe Temple

Share.
Exit mobile version