ಹಾಸನ : ವರ್ಷಕ್ಕೆ ಒಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ಮಹೋತ್ಸವದಲ್ಲಿ ಅ.26 ರಂದು ಸಾರ್ವಜನಿಕರ ದರ್ಶನಕ್ಕೆ ಕಡೇ ದಿನವಾಗಿದೆ. 

ಈ ಬಾರಿ ಅ.13 ರಿಂದ ಬಾಗಿಲು ಹಾಸನಾಂಬೆ ದೇವಾಲಯದ ಬಾಗಿಲು ತೆರೆದರೂ ಅ. 14 ರಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು, ಅಂದಿನಿಂದ ಇದುವರೆಗೆ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ.

ಅ,26 ರಂದು ಬೆಳಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 4:30 ರಿಂದ 11 ರವರೆಗೆ ದೇವಿಗೆ ನೈವೇದ್ಯ ಇರುವುದರಿಂದ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ , ಅದರ ಹೊರತಾಗಿ ರಾತ್ರಿ 11 ರಿಂದ ಬೆಳಗ್ಗೆ 7 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಅ. 13 ರಿಂದ ಹಾಸನಾಂಬೆ ದೇವಾಲಯದ ಗರ್ಭಗುಡಿ ಓಪನ್ ಆಗಿದ್ದು. ಹಾಸನಾಂಬೆ ದೇವಿಯ ಪವಾಡ ಕಂಡು ಜನರು ಪಾವನರಾಗಿದ್ದಾರೆ.ವರ್ಷಕೊಮ್ಮೆ ತೆರಯುವ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲನ್ನು ತೆರೆಯುವ ಮೂಲಕ ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಆಶ್ವೀಜ ಮಾಸದ ಮೊದಲ ಗುರುವಾರ ಅ.13 ರಂದು ಮಧ್ಯಾಹ್ನ 12.12 ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಈ ವೇಳೆ ವರ್ಷದ ಹಿಂದೆ ಹಚ್ಚಿಟ್ಟದ್ದ ದೀಪ ಇನ್ನು ಉರಿಯುತ್ತಿತ್ತು, ಹಾಗೂ ಅಲಂಕರಿಸಿದ ಹೂಗಳು ಕೂಡ ಬಾಡದೇ ಹಾಳಾಗಿರಲಿಲ್ಲ, ಈ ಪವಾಡ ಕಂಡು ಜನರು ಪಾವನರಾಗಿದ್ದರು.

BIGG NEWS : ವೈದ್ಯ, ದಂತ ವೈದ್ಯ ಕೋರ್ಸ್ ಗೆ ಪ್ರವೇಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

BIGG NEWS : ಸ್ಯಾಂಡಲ್ ವುಡ್ ನಟಿಗೆ ‘ಬ್ಲಾಕ್ ಮೇಲ್’ : ನಗ್ನ ಫೋಟೋ, ವಿಡಿಯೋ ವೈರಲ್ ಬೆದರಿಕೆ : ಬೆಂಗಳೂರಿನಲ್ಲಿ ‘ಮೇಕಪ್ ಮ್ಯಾನ್’ ಅರೆಸ್ಟ್

BIGG NEWS : ವೈದ್ಯ, ದಂತ ವೈದ್ಯ ಕೋರ್ಸ್ ಗೆ ಪ್ರವೇಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

Share.
Exit mobile version