ಬೆಂಗಳೂರು: ಮಗುವಿಗೆ ಎದೆ ಹಾಲುಣಿಸುವ ಮೂಲಭೂತ ಹಕ್ಕು ತಾಯಿಗಿದೆ. ಮಗುವಿನ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ತಾಯಿಯ ತೀರ್ಮಾವೇ ಅಂತಿಮ. ಹೀಗಾಗಿ ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ (Maternity and Child Care Leave – CCL) ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕು ಅಂತ ಹೈಕೋರ್ಟ್ ತಿಳಿಸಿದೆ. ಅಲ್ಲದೇ 120 ದಿನಗಳ ಸಿಸಿಎಲ್ ರಜೆ ಕೋರಿದ್ದಂತ ಮಹಿಳಾ ಶುಶ್ರೂಶಕಕಿಗೆ ಮಂಜೂರು ಮಾಡಿದೆ. ಈ ಮೂಲಕ ಸರ್ಕಾರಿ ಮಹಿಳಾ ನೌಕರರಿಗೆ ಸಿಸಿಎಲ್ ರಜೆ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನಿಮ್ಹಾನ್ಸ್ ನ ತುರ್ತು ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಂತ ಶುಶ್ರೂಶಕಿ ಅನಿತಾ ಜೋಸೆಫ್ ಎಂಬುವರು 120 ದಿನಗಳ ಕಾಲ ಹೆಚ್ಚುವರಿಯಾಗಿ ಸಿಸಿಎಲ್ ನೀಡುವಂತೆ ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯು(ಸಿಎಟಿ) ವಿಚಾರಣೆ ನಡೆಸಿ ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನಿಮ್ಹಾನ್ಸ್ ಆಡಳಿತ ಮಂಡಳಿಯು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೃಷ್ಣ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆಯಲ್ಲಿ ನಿಮ್ಹಾನ್ಸ್ ಪರ ವಕೀಲರು ನಿಮ್ಹಾನ್ಸ್ ಮಾರ್ಗಸೂಚಿ ಅನುಸಾರ ವರ್ಷದಲ್ಲಿ 45 ದಿನಗಳ ಕಾಲ ಮಾತ್ರವೇ ಸಿಸಿಎಲ್ ನೀಡಲು ಅವಕಾಶವಿದೆ. ಜೊತೆಗೆ ಐಸಿಯುನಲ್ಲಿ ಸೇವೆ ಸಲ್ಲಿಸುವ ಶುಶ್ರೂಶಕಿಯರ ಸಂಖ್ಯೆ ಕೊರತೆಯಿದೆ. ಹೀಗಾಗಿ ಹೆಚ್ಚುವರಿ ರಜೆ ಮಂಜೂರು ಮಾಡೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತಿಳಿಸಿತು.
ಈ ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಮಗುವಿಗೆ ಎದೆ ಹಾಲುಣಿಸುವ ಮೂಲಭೂತ ಹಕ್ಕು ತಾಯಿಗೆ ಇದೆ ಎಂಬುದಾಗಿ ಬಾಲ ನ್ಯಾಯ ( ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ನಿಬಂಧನೆಗಳಲ್ಲಿ ಇದೆ. ಬೆಳೆಯುತ್ತಿರುವ ಮಗುವಿನ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ತಾಯಿಯ ತೀರ್ಮಾನವೇ ಅಂತಿ ಎಂಬುದಾಗಿ ಅಭಿಪ್ರಾಯ ಪಟ್ಟಿತು.
ನಿಮ್ಹಾನ್ಸ್ ನಲ್ಲಿ 700 ಶುಶ್ರೂಷಕಿಯರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರಿಗೆ 120 ದಿನಗಳ ಕಾಲ ಸಿಸಿಎಲ್ ಮಂಜೂರು ಮಾಡಿದಲ್ಲಿ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿ ನಿರ್ಮಾಣ ಆಗೋದಿಲ್ಲ ಎಂಬುದಾಗಿ ತಿಳಿಸಿ, ನಿಮ್ಹಾನ್ಸ್ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು. ಜೊತೆಗೆ ಕೇಂದ್ರ ನಾಗರೀಕ ಸೇವೆಗಳ (ರಜೆ) ನಿಯಮಗಳ ಪ್ರಕಾರ ಸಿಸಿಎಲ್ 45 ದಿನಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂಬ ನಿಯಮ ಇಲ್ಲ. ಆದರೇ ನಿಮ್ಹಾನ್ಸ್ ಹೊರಡಿಸಿದ ಮಾರ್ಗಸೂಚಿಗಳು ನಿಯಮಗಳಿಗೆ ವಿರುದ್ಧವಾಗಿದ್ದಾವೆ ಎಂಬುದಾಗಿ ಹೇಳುವ ಮೂಲಕ ಕೇಂದ್ರ ಆಡಳಿತ ಮಂಡಳಿಯ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಹೀಗಿದೆ ಐಪಿಎಲ್ 2025ರಲ್ಲಿ ಆಡಲಿರುವ ‘RCB ಆಟಗಾರ’ರ ಸಂಪೂರ್ಣ ಪಟ್ಟಿ | Royal Challengers Bangalore