ಮೈಸೂರು: ಕಳ್ಳರು ಮನೆಗಳ್ಳತನ ಮಾಡಿ, ಕದ್ದಿದ್ದಂತ ಚಿನ್ನಾಭರಣದಲ್ಲಿ ಪಾಲು ಪಡೆದಿದ್ದಂತ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರು, ಮಾರಾಟ ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿರುವಂತ ಘಟನೆ ಮೈಸೂರಿನ ಮಂಡಿ ಠಾಣೆಯಲ್ಲಿ ನಡೆದಿದೆ.
ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಮನೆಗಳ್ಳತನ ಪ್ರಕರಣಗಳು ನಡೆದಿದ್ದವು. ಈ ಕಳ್ಳತನ ಪ್ರಕರಣದಲ್ಲಿ ಕಳ್ಳರಾದಂತ ನಜರುಲ್ಲಾ ಬಾಬು, ಆಲಿ ಎಂಬುವರು ಭಾಗಿಯಾಗಿದ್ದಂತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅವರನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸರು ಬಂಧಿಸಿದ್ದಂತ ಮನೆಗಳ್ಳರಾದಂತ ನಜರುಲ್ಲಾ ಬಾಬು ಹಾಗೂ ಆಲಿ ತಾವು ಕದ್ದಿದ್ದಂತ 400 ಗ್ರಾಂ ಚಿನ್ನಾಭರಣದಲ್ಲಿ 300 ಗ್ರಾಂ ಅನ್ನು ಅಶೋಕಪುರಂ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಜು ಎಂಬುವರಿಗೆ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ಅಶೋಕಪುರಂ ಹೆಡ್ ಕಾನ್ ಸ್ಟೇಬಲ್ ರಾಜು ಅವರ ಮೇಲೆ ಮಂಡಿ ಠಾಣೆಯ ಪೊಲೀಸರು ಕಣ್ಣಿಟ್ಟಿದ್ದರು. ಇಂದು ಮನೆಗಳ್ಳರಿಂದ ಪಡೆದಿದ್ದಂತ 100 ಗ್ರಾಂ ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದಂತ ವೇಳೆಯಲ್ಲಿ ಹೆಡ್ ಕಾನ್ ಸ್ಟೇಬಲ್ ರಾಜುನನ್ನು ಮಂಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೇ ಬಂಧಿತ ಹೆಡ್ ಕಾನ್ ಸ್ಟೇಬಲ್ ರಾಜು ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ಕಳ್ಳರಿಂದ ಚಿನ್ನಾಭರಣವನ್ನು ಪಡೆದಿರುವಂತ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಮಂಡಿ ಠಾಣೆಯ ಪೊಲೀಸರಿಂದ ಹೆಚ್ ಸಿ ರಾಜುನನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
‘ಉತ್ತಮ ಶಿಕ್ಷಕ ಪ್ರಶಸ್ತಿ ತಡೆ’ ಹಿಡಿದ ರಾಜ್ಯ ಸರ್ಕಾರದ ವಿರುದ್ಧ ‘MLC ಛಲವಾದಿ ನಾರಾಯಣಸ್ವಾಮಿ’ ವಾಗ್ಧಾಳಿ
ಭಾಗ್ಯಲಕ್ಷ್ಮಿ ಯೋಜನೆಯ ‘ಸೀರೆ ವಿತರಣೆ’ಯಲ್ಲಿ ಅಕ್ರಮ: ‘SIT ತನಿಕೆ’ಗೆ ಕೋರಿ ಸಿಎಂಗೆ ‘ರಮೇಶ್ ಬಾಬು’ ಪತ್ರ