ಬೆಂಗಳೂರು: 8000 ಕೋಟಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಅಸ್ತು ಎಂದಿದೆ. ಎಲ್ ಅಂಡ್ ಟಿ ಸಂಸ್ಥೆಯಿಂದ ಸಲ್ಲಿಸಲಾಗಿದ್ದಂತ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ, ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

8000 ಕೋಟಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಅವ್ಯವಹಾರ ಆರೋಪ ಪ್ರಶ್ನಿಸಿ ಎಲ್ ಅಂಡ್ ಟಿ ಸಂಸ್ಥೆಯಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿ ಅರ್ಜಿಯಲ್ಲಿ ಕೆ ಪಿ ಸಿಎಲ್ ನಿಂದ ಕೆಲ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವಂತೆ ಟೆಂಡರ್ ಕರೆಯಲಾಗಿದೆ ಎಂಬುದಾಗಿ ಆರೋಪಿಸಲಾಗಿತ್ತು.

ಈ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡಂತ ನ್ಯಾಯಪೀಠವು, ಎಲ್ ಅಂಡಿ ಟಿ ಸಂಸ್ಥೆಯ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ 21 ದಿನಗಳಲ್ಲಿ 8000 ಕೋಟಿ ವೆಚ್ಚದ ಶರಾವತಿ ಹೈಡ್ರೋ ಎಲೆಕ್ಟ್ರಿಕ್ ಯೋಜನೆಯ ಟೆಂಡರ್ ಕರೆಯೋದಕ್ಕೆ ಅಸ್ತು ಎಂದಿದೆ.

BREAKING: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಯುವಕರು ದುರ್ಮರಣ

‘ತಪ್ಪು ತಿಳುವಳಿಕೆ’ : ಮಾನವ ಹಕ್ಕುಗಳ ಕುರಿತ ಅಮೆರಿಕದ ವರದಿಯನ್ನ ‘ತಾರತಮ್ಯ’ ಎಂದ ಭಾರತ

Share.
Exit mobile version