ಶಿರಸಿ: ಹಾವೇರಿ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಬಂಧಿತ 6 ಜನರಲ್ಲಿ ಇಬ್ಬರು ಬೇರೆಯವರಾಗಿದ್ದಾರೆ. ಅವರು ಅತ್ಯಾಚಾರ ಎಸಗಿಲ್ಲ. ಇನ್ನುಳಿದವರು ಪ್ರಕರಣದಲ್ಲಿ ಭಾಗಿಯಾಗಿಲ್ಲ. ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ ಎಂಬುದಾಗಿ ಅತ್ಯಾಚಾರ ಸಂತ್ರಸ್ತೆ ಹೇಳುವು ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಇಂದು ಶಿರಸಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಂತ್ರಸ್ತ ಮಹಿಳೆ, ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ 6 ಆರೋಪಿಗಳಲ್ಲಿ ಇಬ್ಬರು ಬೇರೆಯವರು. ಆ ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿಲ್ಲ. ಜೀವ ಭಯವಿದ್ದರೂ ನನ್ನ ರಕ್ಷಣೆಗೆ ಪೊಲೀಸರನ್ನು ನಿಯೋಜಿಸಿಲ್ಲ ಎಂಬುದಾಗಿ ತಿಳಿಸಿದರು.
ವೀಡಿಯೋದಲ್ಲಿ ಇರೋರನ್ನ ಹಿಡಿದಿಲ್ಲ. ಬೇರೆಯವರನ್ನು ಹಿಡಿದಿದ್ದಾರೆ. ಇಬ್ಬರು ಮಾತ್ರವೇ ಸಿಕ್ಕಿದ್ದಾರೆ. ಬಾಕಿಯವರು ಸಿಕ್ಕಿಲ್ಲ. ನನಗೆ ಇಬ್ಬರ ಪೋಟೋ ತೋರಿಸಿದ್ರು. ಅವರು ಇಬ್ಬರೂ ಅಲ್ಲ. ಶಿಕ್ಷೆ ಆಗಬೇಕು ಸರ್ ಅವರಿಗೆ. ಅವರಿಗೆ ಬಿಡಬಾರದು ಎಂಬುದಾಗಿ ಹೇಳಿದರು.
‘ಮಕರ ಸಂಕ್ರಾಂತಿ’ಯಂದು ‘ಗೋಸೇವೆ’ ಮಾಡಿದ ‘ಪ್ರಧಾನಿ ಮೋದಿ’: ಫೋಟೋ ವೈರಲ್ | PM Modi performs Gau Seva
BREAKING: ಮಣಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಅದ್ಧೂರಿ ಚಾಲನೆ