ಬೆಂಗಳೂರು: ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ನಾಳೆ ಬೆಳಗ್ಗೆಯಿಂದ ಮತದಾನ ಆರಂಭಗೊಳ್ಳಲಿದ್ದು, ಮತದಾನ ಮಾಡೋದಕ್ಕೆ ವೋಟರ್ ಐಡಿ ಮುಖ್ಯವಾಗಿದೆ. ಒಂದು ವೇಳೆ ನೀವು ಮತಗಟ್ಟೆಗೆ ವೋಟರ್ ಐಡಿ ತೆಗೆದುಕೊಂಡು ಹೋಗದೇ ಇದ್ದರೇ ಯಾವುದೇ ಚಿಂತೆ ಬೇಡೆ. ಅದಕ್ಕೆ ಪರ್ಯಾಯವಾಗಿ ದಾಖಲೆಗಳು ಯಾವುವು ಅಂತ ಮುಂದೆ ಓದಿ.
ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಎಕ್ಸ್ ನಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಮತಗಟ್ಟೆಗೆ ನಿಮ್ಮ ವೋಟರ್ ಐಡಿ ತರಲು ನೀವು ಮರೆತಿದ್ದೀರಾ? ಚಿಂತೆ ಬೇಡ, ಈ ಸಂದರ್ಭದಲ್ಲಿ ಮತ ಚಲಾಯಿಸಲು ಬಳಸಬಹುದಾದ 12 ಪರ್ಯಾಯ ದಾಖಲೆಗಳು ಇಲ್ಲಿವೆ. ಮತಗಟ್ಟೆಯಲ್ಲಿ ಯಾವುದಾದರು ಒಂದು ದಾಖಲೆಯನ್ನು ತೋರಿಸಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದಿದೆ.
ಮತಗಟ್ಟೆಗೆ ನಿಮ್ಮ ವೋಟರ್ ಐಡಿ ತರಲು ನೀವು ಮರೆತಿದ್ದೀರಾ? ಚಿಂತೆ ಬೇಡ, ಈ ಸಂದರ್ಭದಲ್ಲಿ ಮತ ಚಲಾಯಿಸಲು ಬಳಸಬಹುದಾದ 12 ಪರ್ಯಾಯ ದಾಖಲೆಗಳು ಇಲ್ಲಿವೆ. ಮತಗಟ್ಟೆಯಲ್ಲಿ ಯಾವುದಾದರು ಒಂದು ದಾಖಲೆಯನ್ನು ತೋರಿಸಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ.#ceokarnataka #LokaSabhaElection2024#documentstovote #dontforget pic.twitter.com/szHjqjPh3j
— Chief Electoral Officer, Karnataka (@ceo_karnataka) April 25, 2024
ಹೀಗಿವೆ ಪರ್ಯಾಯ ದಾಖಲೆಗಳು
ಇನ್ನೂ ನೀವು ವೋಟರ್ ಐಡಿ ಇಲ್ಲದೇಯೂ ಪರ್ಯಾದ ದಾಖಲೆಗಳನ್ನು ತೋರಿಸಿ, ನಾಳೆ ಲೋಕಸಭಾ ಚುನಾವಣೆಗಾಗಿ ನಡೆಯುತ್ತಿರುವಂತ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ. ಆ ದಾಖಲೆಗಳು ಯಾವುವು ಅಂತ ಮುಂದೆ ಓದಿ.
- ಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಪ್ಯಾನ್ ಕಾರ್ಡ್
- ವಿಶೇಷ ಚೇತನರ ವಿಶೇಷ ಗುರುತಿನ ಚೀಟಿ
- ಸೇವೆ ಗುರಿತಿನ ಚೀಟಿ
- ಭಾವಚಿತ್ರವುಳ್ಳ ಬ್ಯಾಂಕ್, ಅಂಚೆ ಕಚೇರಿಯ ಪಾಸ್ ಪುಸ್ತಕ
- ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್ ( ಕಾರ್ಮಿಕ ಇಲಾಖೆಯಿಂದ ನಿಡೋದು)
- ಚಾಲನಾ ಪರವಾನಗಿ ( ಡಿಎಲ್)
- ಪಾಸ್ ಪೋರ್ಟ್
- ಆರ್ ಜಿಐ ನಡಿ ಎನ್ ಪಿಐ ಮುಖೇನ ವಿತರಿಸುವ ಸ್ಮಾರ್ಟ್ ಕಾರ್ಡ್
- ಪಿಂಚಣಿ ದಾಖಲೆ
- ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
- ಎಂ ಜಿ ಆರ್ ಇ ಜಿಎ ಉದ್ಯೋಗ ಗುರುತಿನ ಚೀಟಿ
BREAKING: ‘ಅಪಾರ್ಮೆಂಟ್ ನಿವಾಸಿಗಳಿಗೆ ಆಮಿಷ ಪ್ರಕರಣ’ದಲ್ಲಿ ‘ಡಿ.ಕೆ ಶಿವಕುಮಾರ್’ಗೆ ಬಿಗ್ ರಿಲೀಫ್
ಏ.29 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ -2 : ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ