ಬೆಂಗಳೂರು: ಹಬ್ಬ ಹರಿದಿನಗಳು ಬಂದ್ರೆ ಸಾಕು ವಾಟ್ಸ್ ಆಪ್ ನಲ್ಲಿ ಸ್ಕ್ಯಾಮ್ ಗಳ ಸಂಖ್ಯೆ ಹೆಚ್ಚಾಗುತ್ತವೆ. ಒಂದು ವೇಳೆ ಅವರ ಆಫರ್ ನಂಬಿ, ಅವರು ಕಳುಹಿಸೋ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಬ್ಯಾಂಕ್ ಖಾತೆಯೇ ಖಾಲಿ ಆಗೋದು ಗ್ಯಾರಂಟಿ ಎಂಬುದು ಹಣ ಕಳೆದುಕೊಂಡವರ ಮಾತಾಗಿದೆ. ನಿಮಗೂ ಈ ರೀತಿಯಾಗಿ ವಾಟ್ಸ್ ಆಪ್ ಮೆಸೇಜ್ ಬಂದಿದ್ರೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ ಎಂಬುದು ಪೊಲೀಸರ ಎಲರ್ಟ್ ಆಗಿದೆ.
ಹೌದು.. ಸದ್ಯ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಅಂತೂ ಮೆಸೇಜ್ ಒಂದು ಹರಿದಾಡುತ್ತಿದೆ. ಅದು ನೀವು ಇರುವಂತ ಗ್ರೂಪ್ ನಲ್ಲಿಯೂ ಬಂದಿರಬಹುದು. ಇಲ್ಲವೇ ನಿಮ್ಮ ಸ್ನೇಹಿತರು ನಿಮಗೆ ಪರ್ಸನಲ್ ಆಗಿಯೂ ಕಳುಹಿಸಿರಬಹುದು. ಅದೇನೆಂದ್ರೇ “ಮೊದಲಿಗೆ ಇದು ನಕಲಿ ಎಂದು ಭಾವಿಸಿದ್ದೆ, ಆದರೆ ನಿಜವಾಗಿಯೂ ನನಗೆ ₹50,000 ದೊರೆಯಿತು! ನೀವೂ ಪ್ರಯತ್ನಿಸಿ ನೋಡಿ!” ಎಂಬುದಾಗಿದೆ.

ಹೀಗೆ ತಲೆ ಬರಹ ಇರುವಂತ ವಾಟ್ಸ್ ಅಪ್ ಮೆಸೇಜ್ ಜೊತೆಗೆ ಒಂದು ಲಿಂಕ್ ಕೂಡ ಹರಿ ಬಿಡಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು ನೀವು 50,000 ಗೆಲ್ಲಬೇಕು ಅಂದ್ರೆ ಇಷ್ಟು ಗ್ರೂಪಿಗೆ ಈ ಸಂದೇಶ ಕಳುಹಿಸಿ. ಇಷ್ಟು ಜನರಿಗೆ ಸಂದೇಶ ಕಳುಹಿಸಿ ಎಂಬುದಾಗಿ ತೋರಿಸುತ್ತದೆ. ಆ ಬಳಿಕ ಶುರುವಾಗೋದೇ ಅಸಲಿ ಆಟವಾಗಿದೆ. ನಿಮ್ಮ ಬ್ಯಾಂಕ್ ಖಾತೆ ಸೇರಿದಂತೆ ಇತರೆ ವೈಯಕ್ತಿಕ ವಿವರವನ್ನು ನಮೂದಿಸಿ ಅಂತ ಕೇಳಲಾಗುತ್ತದೆ. ನೀವು ನಮೂದಿಸಿದ್ರೇ ನಿಮ್ಮ ಪೋನ್ ಪೇ, ಗೂಗಲ್ ಪೇ ಆನ್ ಲೈನ್ ಕಳ್ಳರ ಪಾಲಾಗಲಿದೆ.
ಇದಷ್ಟೇ ಅಲ್ಲದೇ ನಿಮ್ಮ ಬ್ಯಾಂಕ್ ಖಾತೆ ವಿವರ ಸೇರಿದಂತೆ ಇತರೆ ಮಾಹಿತಿಯನ್ನು ಪಡೆಯುವಂತ ವಂಚಕರು, ಆ ಬಳಿಕ ನಿಮಗೆ ಇಲ್ಲ ಸಲ್ಲದ ಆಸೆಗಳನ್ನು ತೋರಿಸಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವಂತ ಹಣವನ್ನೇ ಖಾಲಿ ಮಾಡುತ್ತಾರೆ. ಹೀಗಾಗಿ ಸದ್ಯ ಹರಿದಾಡುತ್ತಿರುವಂತ ವಾಟ್ಸ್ ಅಪ್ ಸಂದೇಶದ ಜೊತೆಗಿನ ಲಿಂಕ್ ಕ್ಲಿಕ್ ಮಾಡಬೇಡಿ ಎಂಬುದು ಪೊಲೀಸರ ಸೂಚನೆಯಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಯಾವುದೇ ರಾಜಕೀಯ ಪಕ್ಷಗಳ ಪ್ರೇರಿತದಿಂದ ಹೋರಾಟ ಮಾಡುತ್ತಿಲ್ಲ: ಮದ್ದೂರು ರೈತ ನಾಯಕಿ ಸುನಂದಾ ಜಯರಾಂ
BIG NEWS : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಿದ ಸೆನ್ಸಾರ್ ಮಂಡಳಿ








