ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೊಸರಿನ ಜೊತೆ ಒಣ ದ್ರಾಕ್ಷಿ ಸೇವಿಸಿದರೆ ಆರೋಗ್ಯಕ್ಕೆ ದುಪ್ಪಟ್ಟು ಒಳ್ಳೆಯದು. ಮೊಸರು ಹಾಗು ಒಣ ದ್ರಾಕ್ಷಿ ಸಂಯೋಜನೆ ಆರೋಗ್ಯಕ್ಕೆ ದೊಡ್ಡ ವರದಾನ. ಇವೆರಡರ ಮಿಶ್ರಣದ ಸೇವನೆ ಚರ್ಮದ ಆರೋಗ್ಯಕ್ಕೆ ಹಾಗು ಜೀರ್ಣಕ್ರಿಯೆಗೆ ಹೇಳಿ ಮಾಡಿಸಿದ ಆಹಾರ ಪದಾರ್ಥಗಳಾಗಿವೆ.
ಮೊಸರಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ, ಪ್ರೋಟೀನ್, ರಂಜಕ ಕಬ್ಬಿಣ, ಮುಂತಾದ ಪೋಷಕಾಂಶಗಳಿವೆ. ಇನ್ನು ಒಣ ದ್ರಾಕ್ಷಿಯಲ್ಲಿ ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಹೇರಳವಾಗಿವೆ. ಎರಡರನ್ನು ಫೈಬರ್ ಅಂಶ ಸಂಮೃದ್ಧವಾಗಿದೆ. ಹಾಗಾಗಿ ಇಷ್ಟೆಲ್ಲಾ ಪೋಷಕಾಂಶಗಳಿರುವ ಈ ಎರಡೂ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದರೆ ದೇಹಕ್ಕೆ ಈ ಎಲ್ಲಾ ಪೋಷಕಾಂಶಗಳು ಒಂದೇ ಸಮಯದಲ್ಲಿ ಒದಗಿಸಿದಂತಾಗುತ್ತದೆ.
ಒಂದು ವೇಳೆ ನಿಮಗೆ ದೀರ್ಘ ಕಾಲದಿಂದಲೂ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ ಮೊಸರಿನೊಟ್ಟಿಗೆ ಒಣ ದ್ರಾಕ್ಷಿ ಸೇವಿಸಿ ನೋಡಿ ಕೆಲವೇ ದಿನಗಳಲ್ಲಿ ಆ ಸಮಸ್ಯೆ ನಿವಾರಣೆಯಾಗುತ್ತದೆ. ಕಾರಣ ಇವೆರಡರಲ್ಲೂ ಇರುವ ಫೈಬರ್‌ನ ಅಂಶ ಆಹಾರವನ್ನು ಸುಲಭವಾಗಿ ಜೀರ್ಣಗೊಳಿಸುತ್ತದೆ. ಜೀರ್ಣಕ್ರಿಯೆ ಸುಲಭವಾಗಿ ಆದರೆ ಮಲಬದ್ಧತೆ ಸಮಸ್ಯೆ ಕೂಡ ಅಟೋಮ್ಯಾಟಿಕ್ ಆಗಿ ಮಾಯವಾಗುತ್ತದೆ.
ಮೊಸರು ಹಾಗು ಒಣ ದ್ರಾಕ್ಷಿ ಸೇವನೆ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಮ್ಮನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುತ್ತದೆ.
ದೇಹಕ್ಕೆ ನಿಶಕ್ತಿ ಉಂಟಾದರೆ ಅಥವಾ ದೇಹಕ್ಕೆ ತೀರಾ ಸುಸ್ತು ಎನಿಸಿದರೆ ಮೊಸರಿನ ಜೊತೆ ನಾಲ್ಕು ಐದು ಒಣದ್ರಾಕ್ಷಿ ಸೇವಿಸಿದರೆ ದೇಹಲ್ಲಿ ಕೂಡಲೇ ಶಕ್ತಿ ಉತ್ಪತ್ತಿಯಾಗುತ್ತದೆ.
ಪ್ರತಿನಿತ್ಯ ಮೊಸರಿನ ಜೊತೆ ಒಣ ದ್ರಾಕ್ಷಿ ಸೇವಿಸಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ. ಮೊಡವೆ ಅಥವಾ ಮೊಡವೆ ಕಲೆಗಳನ್ನು ನಿಧಾನವಾಗಿ ಇಲ್ಲವಾಗಿಸುತ್ತದೆ. ಒಟ್ಟಾರೆ ನಿತ್ಯ ಇವೆರಡನ್ನು ಸೇವಿಸಿದರೆ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು.