ನವದೆಹಲಿ: 2025 ರ ದೆಹಲಿ ವಿಧಾನಸಭಾ ಚುನಾವಣೆಯ ನಿರ್ಣಾಯಕ ಮತ ಎಣಿಕೆಗೆ ಶನಿವಾರ ವೇದಿಕೆ ಸಜ್ಜಾಗಿದ್ದು, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಸತತ ಮೂರನೇ ಅವಧಿಗೆ ಗೆಲ್ಲುತ್ತದೆಯೇ ಅಥವಾ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುತ್ತದೆಯೇ ಎಂದು ನಿರ್ಧರಿಸಲಿದೆ.
ಮೂರು ಹಂತದ ಭದ್ರತಾ ವ್ಯವಸ್ಥೆಯಡಿ 19 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಫಲಿತಾಂಶಗಳು 70 ವಿಧಾನಸಭಾ ಸ್ಥಾನಗಳ ಭವಿಷ್ಯವನ್ನು ನಿರ್ಧರಿಸಲಿದ್ದು, ಚುನಾವಣೋತ್ತರ ಸಮೀಕ್ಷೆಗಳು ಎಎಪಿಯನ್ನು ಸೋಲಿಸಲು ಬಿಜೆಪಿ ಸಜ್ಜಾಗಿದೆ ಎಂದು ಭವಿಷ್ಯ ನುಡಿದಿವೆ.
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ:
ಪಾಯಿಂಟ್ #
ಫೆಬ್ರವರಿ 5 ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 60.54 ರಷ್ಟು ಮತದಾನವಾಗಿದ್ದು, 2020 ಕ್ಕೆ ಹೋಲಿಸಿದರೆ ಶೇಕಡಾ 2.5 ರಷ್ಟು ಕಡಿಮೆಯಾಗಿದೆ. 50.42 ಲಕ್ಷ ಪುರುಷ ಮತದಾರರು ಮತ್ತು 44.08 ಲಕ್ಷ ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಾಯಿಂಟ್ #
ಮುಸ್ತಫಾಬಾದ್ ನಲ್ಲಿ ಅತಿ ಹೆಚ್ಚು ಅಂದರೆ ಶೇ.69.01ರಷ್ಟು ಮತದಾನವಾಗಿದ್ದು, 2.9 ಲಕ್ಷ ಪುರುಷ ಹಾಗೂ 1.08 ಲಕ್ಷ ಮಹಿಳಾ ಮತದಾರರು ಭಾಗವಹಿಸಿದ್ದರು. ಮೆಹ್ರೌಲಿಯಲ್ಲಿ ಅತಿ ಕಡಿಮೆ ಅಂದರೆ ಶೇ.53.02ರಷ್ಟು ಮತದಾನವಾಗಿದ್ದು, 61,000 ಪುರುಷರು ಹಾಗೂ 53,578 ಮಹಿಳಾ ಮತದಾರರಿದ್ದಾರೆ.
ಪಾಯಿಂಟ್ #
ಮತದಾನದ ಹಿನ್ನೆಲೆಯಲ್ಲಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮತದಾನದ ಡೇಟಾವನ್ನು ಪ್ರಕಟಿಸುವಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದೆ