ಹಾಸನ: ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನಕ್ಕೆ ಅಧಿಕೃತ ತೆರೆ ಇಂದು ಬಿದ್ದಿದೆ. ದಿನಾಂಕ 10-10-2025ರಿಂದ ಭಕ್ತರ ದರ್ಶನಕ್ಕಾಗಿ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. 13 ದಿನಗಳಲ್ಲಿ ಬರೋಬ್ಬರಿ 26.07 ಲಕ್ಷ ಮಂದಿ ದರ್ಶನವನ್ನು ಪಡೆದಿದ್ದಾರೆ.
ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದು, ದಿನಾಂಕ 10-10-2025ರಂದು 58 ಸಾವಿರ ಮಂದಿ ದರ್ಶನವನ್ನು ಪಡೆದಿದ್ದಾರೆ. ದಿನಾಂಕ 11-10-2025ರಂದು 2.08 ಲಕ್ಷ ಭಕ್ತರು ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದಿದ್ದಾರೆ.
ಹೀಗಿದೆ 13 ದಿನಗಳಲ್ಲಿ ಭಕ್ತರ ದರ್ಶನದ ಅಂಕಿ-ಸಂಖ್ಯೆ
ದಿನಾಂಕ 10-10-2025 – 0.58 ಲಕ್ಷ
ದಿನಾಂಕ 11-10-2025 – 2.08 ಲಕ್ಷ
ದಿನಾಂಕ 12-10-2025 – 1.45 ಲಕ್ಷ
ದಿನಾಂಕ 13-10-2025 – 2.29 ಲಕ್ಷ
ದಿನಾಂಕ 14-10-2025 – 2.44 ಲಕ್ಷ
ದಿನಾಂಕ 15-10-2025 – 2.47 ಲಕ್ಷ
ದಿನಾಂಕ 16-10-2025 – 2.58 ಲಕ್ಷ
ದಿನಾಂಕ 17-10-2025 – 3.62 ಲಕ್ಷ
ದಿನಾಂಕ 18-10-2025 – 2.17 ಲಕ್ಷ
ದಿನಾಂಕ 19-10-2025 – 1.27 ಲಕ್ಷ
ದಿನಾಂಕ 20-10-2025 – 2.02 ಲಕ್ಷ
ದಿನಾಂಕ 21-10-2025 – 1.50 ಲಕ್ಷ
ದಿನಾಂಕ 22-10-2025 – 1.60 ಲಕ್ಷ
2025ನೇ ಸಾಲಿನಲ್ಲಿ ಹಾಸನಾಂಬೆ ದೇವಿಯನ್ನು ಬರೋಬ್ಬರಿ ಒಟ್ಟು 26,06,691 ಭಕ್ತರು ದರ್ಶನವನ್ನು ಪಡೆದಿದ್ದಾರೆ. ಅದೇ 2024ರಲ್ಲಿ 17,47,240 ಭಕ್ತರು ಹಾಸನಾಂಬೆ ದೇವಿಯ ದರ್ಶನವನ್ನು ಪಡೆದಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು