ಹಾಸನ: ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಅ.09 ರಿಂದ ಅ.23ರವರೆಗೆ ನಡೆದಿದ್ದು 25,59,87,327 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.
1000 ರೂ, 300 ರೂ ಟಿಕೆಟ್ ಹಾಗೂ ಲಾಡುಪ್ರಸಾದ ಮಾರಾಟದಿಂದ ಒಟ್ಟು 21,91,75,052 ರೂ ಆದಾಯ ಬಂದಿರುತ್ತದೆ. ಹುಂಡಿ ಎಣಿಕೆಯಲ್ಲಿ 3,68,12,275 ರೂಪಾಯಿ ಬಂದಿರುತ್ತದೆ. ಕಾಣಿಕೆ ರೂಪದಲ್ಲಿ 75 ಗ್ರಾಂ. 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ 58 ಗ್ರಾಂ. 400 ಮಿಲಿ ಹುಂಡಿಗೆ ಭಕ್ತರು ಹಾಕಿದ್ದಾರೆ ಎಂದು ತಿಳಿಸಿದರು.
ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆ ನಡೆದಿದ್ದು, 15,17,785 ರೂ ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.








