ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಗೆ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ ತಂಡವು ಏಕೈಕ ಟೆಸ್ಟ್ ಪಂದ್ಯ ಮತ್ತು 3 ಪಂದ್ಯಗಳ ಏಕದಿನ ಮತ್ತು ಟಿ 20 ಐ ಸರಣಿಯನ್ನು ಆಡಲು ಭಾರತಕ್ಕೆ ಪ್ರಯಾಣಿಸಲಿದೆ.
ಹರ್ಮನ್ ಪ್ರೀತ್ ಕೌರ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಜೂನ್ 16ರಿಂದ ಭಾರತ ಪ್ರವಾಸ ಕೈಗೊಳ್ಳಲಿದ್ದು, 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜೂನ್ 28 ರಂದು ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಜುಲೈ 5 ರಿಂದ ಮೊದಲ ಟಿ 20 ಪಂದ್ಯ ಪ್ರಾರಂಭವಾಗಲಿದೆ. ಒಂದು ತಿಂಗಳ ಪ್ರವಾಸವು ಜುಲೈ 9 ರಂದು ಕೊನೆಗೊಳ್ಳಲಿದೆ.
ಭಾರತದ ಸ್ಟಾರ್ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಪೂಜಾ ವಸ್ತ್ರಾಕರ್ ಅವರ ಲಭ್ಯತೆಯು ಅವರ ಫಿಟ್ನೆಸ್ಗೆ ಒಳಪಟ್ಟಿರುತ್ತದೆ. ಹಿರಿಯ ಮಹಿಳಾ ಅಂತರ ವಲಯ ಮಲ್ಟಿ-ಡೇ ಟ್ರೋಫಿಯ ಸಮಯದಲ್ಲಿ ಬೆನ್ನುನೋವಿನಿಂದಾಗಿ ಜೆಮಿಮಾ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಸರಣಿಯಿಂದ ಹೊರಗುಳಿದಿದ್ದರು.