ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಾಳೆ ತುರ್ತು ವಿದ್ಯುತ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಹೊನ್ನಾಳಿಯ ಬೆಸ್ಕಾಂ ಎಇಇ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೊನ್ನಾಳಿಯಲ್ಲಿರುವ 66 ಕೆ.ವಿ. ಶಕ್ತಿ ಪರಿವರ್ತಕ, 66 ಕೆವಿ ಸಿಟಿ 66ಕೆ.ವಿ. ಬ್ರೇಕರ್, 11 ಕೆ.ವಿ. ಬ್ರೇಕರ್‌ಗಳ ಮತ್ತು ಇನ್ನಿತರ ಉಪಕರಣಗಳ ತೈ-ಮಾಸಿಕ ನಿರ್ವಹಣೆ ಕೆಲಸಗಳಿಗೆ, ಹಾಟ್ ಸ್ಪಾಟ್ ಗಳನ್ನು ಸರಿಪಡಿಸಲು ಮತ್ತು ಕೇಂದ್ರದ ಡಿಸಿ ಗೌಂಡಿಂಗ್ ಅನ್ನು ಸರಿಪಡಿಸಲು ದಿನಾಂಕ: 30/12/2025 ರಂದು – ಬೆಳಿಗ್ಗೆ 10:30 ರಿಂದ ಸಂಜೆ 05:30 ರವರೆಗೆ 220 ೦ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೊನ್ನಾಳಿಯಲ್ಲಿನ ಎಲ್ಲಾ ಮಾರ್ಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ತಿಳಿಸಿದೆ.
ಸದರಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕೈ-ಮಾಸಿಕ ನಿರ್ವಹಣೆಗಾಗಿ ಮಾರ್ಗಮುಕ್ತತೆ ಪಡೆಯಲು ಬೆ.ವಿ. ಕಂಪನಿ ಅವರಿಂದ ಅನುಮೋದನೆ ದೊರೆತಿರುತ್ತದೆ. ಆದರೆ ಪಲ್ಸ್ ಪೋಲಿಯೋ ಕಾಯಕ್ರಮ ಇರುವುದರಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾ ಮತ್ತು ಪಾ ಉಪ ವಿಭಾಗ, ಬೆ.ವಿ.ಕಂ., ಹೊನ್ನಾಳಿ/ನ್ಯಾಮತಿ ಇವರ ಸೂಚನೆಯಂತೆ ಆ ದಿನ ನಿರ್ವಹಣಾ ಕಾರ್ಯವನ್ನು ಮಾಡಿರುವುದಿಲ್ಲ ಎಂದು ಹೇಳಿದೆ.
ಆದ ಕಾರಣ ದಿನಾಂಕ: 30/12/2025 ರಂದು – ಬೆಳಿಗ್ಗೆ 10:30 ರಿಂದ ಸಂಜೆ 05:30 ರವರೆಗೆ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೊನ್ನಾಳಿಯ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಎಂಬುದಾಗಿ ತಿಳಿಸಿದೆ.
ನಾಳೆ ಹೊನ್ನಾಳ್ಳಿ ತಾಲ್ಲೂಕು ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
1. 66 ಕೆ.ವಿ. ಹೊನ್ನಾಳಿ -ಹೊನ್ನಾಳಿ, ಕತ್ತಿಗೆ, ಉಪಕೇಂದ್ರಗಳು ಮತ್ತು ಐ.ಪಿ.ಪಿ ಕರೆಂಟ್ ಇರೋದಿಲ್ಲ.
2. 66 ಕೆ.ವಿ. ನ್ಯಾಮತಿ- ನ್ಯಾಮತಿ, ಸವಳಂಗ, ಚೀಲೂರು ಮತ್ತು ಮಲ್ಲಾಪುರ ಉಪಕೇಂದ್ರಗಳಲ್ಲಿ ಪವರ್ ಕಟ್ ಆಗಲಿದೆ.
3. 66 ಕೆ.ವಿ. ಭಾನುವಳ್ಳಿ -ಭಾನುವಳ್ಳಿ, ನಂದಿಗುಡಿ, ಚಿಕ್ಕಗೋಣಿಗೆರೆ ಮತ್ತು EHT-M/S Cargill ನಲ್ಲಿ ಕರೆಂಟ್ ಇರೋದಿಲ್ಲ.
4. 66 ಕೆ.ವಿ. ಕುಂದೂರು- ಕುಂದೂರು, ಮಲೆಬೆನ್ನೂರು, ದೇವರಬೆಳೇಕೆರೆ ಉಪಕೇಂದ್ರಗಳು ಮತ್ತು ಐ.ಪಿ.ಪಿ. ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
5. 66 ಕೆ.ವಿ. ಸಾನ್ವಿಹಳ್ಳಿ -ಸಾನ್ವಿಹಳ್ಳಿ, ಕ್ಯಾಸಿನಕೆರೆ, ಉಪಕೇಂದ್ರಗಳಲ್ಲಿ ಕರೆಂಟ್ ಇರಲ್ಲ.
6. 66 ಕೆ.ವಿ. ನಲ್ಲೂರು ಮಾರ್ಗಗಳು-ಬಸವಪಟ್ಟಣ ಉಪಕೇಂದ್ರಗಳು ಮತ್ತು ಐ.ಪಿ.ಪಿ ಪವರ್ ಕಟ್ ಆಗಲಿದೆ.
7. 66 ಕೆ.ವಿ. ಪರಿವರ್ತಕಗಳು ಮತ್ತು ಹೊರಹೋಗುವ 11 ಕೆ.ವಿ. ಮಾರ್ಗಗಳು- ಬಿದರಗಡ್ಡೆ, ಗೋವಿನಕೋವಿ, ಹೊಳೆಮಾದಪುರ, ಕಮ್ಮಾರಘಟ್ಟೆ, ತರಗನಹಳ್ಳಿ ಗ್ರಾಮಗಳಲ್ಲಿ ಕರೆಂಟ್ ಇರೋದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಹೊನ್ನಾಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ವರದಿ: ಸಲ್ಮಾನ್, ಹಿರಿಯ ವರದಿಗಾರರು, ಹೊನ್ನಾಳಿ








