ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ನಾಲ್ಕನೇ ವ್ಯಕ್ತಿಯನ್ನು ಬಂಧಿಸಿದೆ ಮತ್ತು ಆತನ ವಿರುದ್ಧ ಆರೋಪ ಹೊರಿಸಿದೆ ಎಂದು ಕೆನಡಾ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಮಗ್ರ ನರಹತ್ಯೆ ತನಿಖಾ ತಂಡ (ಐಎಚ್ಐಟಿ) ಅಮನ್ದೀಪ್ ಸಿಂಗ್ ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಪ್ರಥಮ ದರ್ಜೆ ಕೊಲೆ ಮತ್ತು ನಿಜ್ಜರ್ ಹತ್ಯೆಯ ಪಿತೂರಿಯ ಆರೋಪ ಹೊರಿಸಲಾಗಿದೆ.
ಸಂಬಂಧವಿಲ್ಲದ ಬಂದೂಕು ಆರೋಪದ ಮೇಲೆ 22 ವರ್ಷದ ಅಮನ್ದೀಪ್ ಸಿಂಗ್ ಈಗಾಗಲೇ ಒಂಟಾರಿಯೊದಲ್ಲಿ ಬಂಧನದಲ್ಲಿದ್ದಾನೆ ಎಂದು ಐಎಚ್ಐಟಿ ತಿಳಿಸಿದೆ.
ಕರಣ್ ಬ್ರಾರ್ (22), ಕಮಲ್ಪ್ರೀತ್ ಸಿಂಗ್ (22), ಕರಣ್ಪ್ರೀತ್ ಸಿಂಗ್ (28) ಅವರೊಂದಿಗೆ ಅಮನ್ದೀಪ್ ಸಿಂಗ್ ಅವರನ್ನು ಬಂಧಿಸಲಾಗಿದೆ. ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಇದೇ ಆರೋಪದಡಿ ಮೂವರನ್ನು ಬಂಧಿಸಲಾಗಿದೆ.