ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಸಂಭ್ರಮ ಶನಿವಾರ’- (ಬ್ಯಾಗ್ ರಹಿತ ದಿನ – No Bag Day) – ಕಾರ್ಯಕ್ರಮದ ವರದಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಶಾಲಾ ಬ್ಯಾಗ್ ಹೊರೆಯನ್ನು ತಗ್ಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನು ಆಚರಿಸುವಂತೆ ಉಲ್ಲೇಖ-1 ರ ಪತ್ರದಲ್ಲಿ ಆದೇಶಿಸಲಾಗಿದೆ. ಅದರಂತೆ, ಪ್ರಸಕ್ತ ಸಾಲಿನಲ್ಲಿ ಕ್ರಮವಹಿಸಲು ಉಲ್ಲೇಖ-2 ರ ಸುತ್ತೋಲೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ.
ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು, ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು DSERT ವತಿಯಿಂದ ಸಿದ್ಧಪಡಿಸಲಾಗಿದೆ. ಸದರಿ ಮಾಡ್ಯೂಲ್ ಗಳು ಅರಿವು, ಅನುಭವ ಮತ್ತು ಅವಲೋಕನ ಎಂಬ ಮೂರು ಹಂತಗಳನ್ನು ಹೊಂದಿದ್ದು, ವಿದ್ಯಾರ್ಥಿಗಳೇ ಸ್ವತಃ ಕೈಗೊಳ್ಳಬಹುದಾದ ಚಟುವಟಿಕೆಗಳಾಗಿವೆ.
‘ಸಂಭ್ರಮ ಶನಿವಾರ’ ದಿನದಂದು Website ನಲ್ಲಿ ಲಭ್ಯವಿರುವ DSERT ಯಿಂದ ಸಿದ್ಧಪಡಿಸಿರುವ ಹಾಗೂ NCERT ಯಿಂದ ನೀಡಿರುವ ಕಲಿಕಾ ಸಾಮಗ್ರಿಗಳನ್ನು ಉಪಯೋಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಲ್ಲಾ ಶಿಕ್ಷಕರಿಗೆ ಮಾಹಿತಿ ಒದಗಿಸುವುದು. ಈ ಕುರಿತು ಜಿಲ್ಲೆ, ಬ್ಲಾಕ್, ಕ್ಲಸ್ಟರ್ ಮತ್ತು ಶಿಕ್ಷಕರ ಸಭೆಗಳಲ್ಲಿ ಕ್ಷೇತ್ರ ಮಟ್ಟದ ಎಲ್ಲಾ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುವುದು ಹಾಗೂ ‘ಸಂಭ್ರಮ ಶನಿವಾರ’ ದಿನದಂದು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅನುಪಾಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಮೇಲುಸ್ತುವಾರಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ.
NCERT ಮಾರ್ಗಸೂಚಿಯಲ್ಲಿ ನೀಡಿರುವ ಚಟುವಟಿಕೆಗಳನ್ನು ಸಂಭ್ರಮ ಶನಿವಾರ ಆಚರಿಸುವ ದಿನಗಳಂದು ಅಗತ್ಯಾನುಸಾರ ನಿರ್ವಹಿಸಲು ಉಲ್ಲೇಖ-3 ರಂತೆ ತಿಳಿಸಲಾಗಿತ್ತು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳ ವರದಿಯನ್ನು ಕೆಲವು ಡಯಟ್ ಗಳು ಮಾತ್ರ ಸಲ್ಲಿಸಿದ್ದು ಸದರಿ ವರದಿಗಳಲ್ಲಿ ಇದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸದರಿ ಚಟುವಟಿಕೆಗಳು ಶೈಕ್ಷಣಿಕ ವೃತ್ತಿ ಮಾರ್ಗದರ್ಶನಕ್ಕೆ ಪೂರಕವಾಗಿರುವುದರಿಂದ ಎಲ್ಲರೂ ಕಟ್ಟುನಿಟ್ಟಾಗಿ ಕ್ರಮವಹಿಸಲು ತಿಳಿಸಿದೆ.
‘ಸಂಭ್ರಮ ಶನಿವಾರ’ದ ಆಚರಣೆ ಕುರಿತಾದ ಜಿಲ್ಲಾ ಹಂತದ ವರದಿಯನ್ನು ಉಪನಿರ್ದೇಶಕರು ಅಭಿವೃದ್ಧಿ ಮತ್ತು ಆಡಳಿತ ರವರು 3ನೇ ಶನಿವಾರ/ಶುಕ್ರವಾರದಂದು ಸಂಭ್ರಮ ಶನಿವಾರ ಕಾರ್ಯಕ್ರಮವನ್ನು ಆಚರಿಸಿ ಕಡ್ಡಾಯವಾಗಿ 2 ಪುಟಗಳ ಚಿತ್ರಸಹಿತ ವರದಿಯನ್ನು 3 ದಿನಗಳೊಳಗಾಗಿ DSERT ಕಛೇರಿಯ EVG ಶಾಖೆಯ Email ID: evg.kardsert1@gmail.com ಗೆ ಸಲ್ಲಿಸುವುದು ಹಾಗೂ ಉಲ್ಲೇಖ-4 ರ ನಿರ್ದೇಶನದಂತೆ ವರದಿಯನ್ನು ತಮ್ಮ ಡಯಟ್ ಗಳ Website ನಲ್ಲಿ Upload ಮಾಡುವುದು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಮಾನ್ಯ ಆಯುಕ್ತರ ಗಮನಕ್ಕೆ ತರಲಾಗುವುದು.