ಮಂಡ್ಯ: ಜಿಲ್ಲೆಯಲ್ಲಿ ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿಗೆ ನುಗ್ಗೋದಕ್ಕೆ ಯತ್ನಿಸಿರುವಂತ ಘಟನೆ ನಡೆದಿದೆ. ಈ ವೇಳೆ ತಳ್ಳಾಟ ನೂಕಾಟ ಕೂಡ ಉಂಟಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಪರಿಸ್ಥಿತಿ ಕೂಡಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಸಲಾಗುತ್ತಿದೆ. ಈ ವೇಳೆಯಲ್ಲೇ ಜಾಮೀಯಾ ಮಸೀದಿ ಕಡೆಗೆ ನುಗ್ಗೋದಕ್ಕೆ ಹನುಮ ಮಾಲಾಧಾರಿಗಳು ಯತ್ನಿಸಿರುವಂತ ಘಟನೆ ನಡೆದಿದೆ.
ಜಾಮೀಯಾ ಮಸೀದಿಗೆ ನುಗ್ಗೋದಕ್ಕೆ ಯತ್ನಿಸಿದಂತ ಹನುಮ ಮಾಲಾಧಾರಿಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆಯಲ್ಲಿ ಹನುಮ ಮಾಲಾಧಾರಿಗಳು, ಪೊಲೀಸರ ನಡುವೆ ತಳ್ಳಾಟ, ನೂಕಾಟ ಕೂಡ ಉಂಟಾಗಿದೆ.
ಇದೀಗ ಶ್ರೀರಂಗ ಪಟ್ಟಣದ ಜಾಮಿಯಾ ಮಸೀದಿ ವೃತ್ತದಲ್ಲಿ ಹನುಮ ಮಾಲಾಧಾರಿಗಳು ಜಮಾವಣೆಗೊಂಡಿದ್ದಾರೆ. ಕೇಸರಿ ಧ್ವಜ ತಿರುಗಿಸಿ ಮಸೀದಿ ಜಾಗ ನಮ್ಮದು ಎಂಬುದಾಗಿ ಘೋಷಣೆ ಕೂಗುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಾಮಿಯಾ ಮಸೀದಿ ಬಳಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರ ರಜೆ: ಸರ್ಕಾರ ಮಹತ್ವದ ಆದೇಶ
SHOCKING : ಕಳ್ಳತನದ ಆರೋಪ ಸಹಿಸಲಾಗದೇ `SSLC’ ವಿದ್ಯಾರ್ಥಿ ಆತ್ಮಹತ್ಯೆ.!








