ಬೆಂಗಳೂರು: ನಗರದ ನಗರತ್ ಪೇಟೆಯಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಐವರಿಂದ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದಂತ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಹೀಗೆ ಬಂಧಿತ ಆರೋಪಿಯೊಬ್ಬರ ಸಹೋದರ ಹಾಕಿದ್ದಂತ ಸ್ಟೇಟಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ಅಷ್ಟೇ ಆಕ್ರೋಶಕ್ಕೂ ಕಾರಣವಾಗಿದೆ. ಆ ಬಗ್ಗೆ ಮುಂದೆ ಓದಿ.
ಬೆಂಗಳೂರಿನ ನಗರತ್ ಪೇಟೆಯ ಅಂಗಡಿಯೊಂದರಲ್ಲಿ ಹನುಮಾನ್ ಜಾಲೀಸಾ ಹಾಕಿದ್ದ ಕಾರಣಕ್ಕಾಗಿ ಹಿಂದೂ ವ್ಯಾಪಾರಿಯೊಬ್ಬರ ಮೇಲೆ ಐವರು ಯುವಕರು ಹಲ್ಲೆ ನಡೆಸಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಗೂ ಗ್ರಾಸವಾಗಿದೆ. ಅಲ್ಲದೇ ರಾಜಕೀಯ ತಿರುವು ಪಡೆದು ಪ್ರತಿಭಟನೆಗೂ ಕಾರಣವಾಗಿತ್ತು.
ಇದರ ನಡುವೆ ಬಂಧಿತ ಸುಲೇಮಾನ್ ಸಹೋದರ ಹಾಕಿರೋ ಸ್ಟೇಟಸ್ ಈಗ ವೈರಲ್ ಆಗಿದೆ. ಅದರಲ್ಲಿ ಇಂದು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್ ಎಂದಿದ್ದಾನೆ. ಈ ಮೂಲಕ ಕಿರಾತಕನೊಬ್ಬ ವಿಕೃತಿ ಮೆರೆದಿದ್ದಾನೆ. ಆತನ ಸ್ಟೇಟಸ್ ಗೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಸಹೋದರನನ್ನು ಬಂಧಿಸಿದಂತೆ ಈತನನ್ನೂ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಅಂದಹಾಗೇ ಮಾರ್ಚ್.17ರಂದು ಸಾಯಂಕಾಲ 6.15ರ ಸಮಯದಲ್ಲಿ ನಗರತ್ ಪೇಟೆಯಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವಂತ ಕೃಷ್ಣ ಟೆಲಿಕಾಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್ ಹನುಮಾನ್ ಜಾಲೀಸಾ ಹಾಕಿದ್ದರು. ಇಷ್ಟಕ್ಕೇ ಅಂಗಡಿಗೆ ಬಂದಂತ ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಆಲಿಯಾಸ್ ದಡಿಯಾ ಹಾಗೂ ಇನ್ನೊಬ್ಬ ವ್ಯಕ್ತಿ ಅದನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಒಪ್ಪದಂತ ಮುಖೇಶ್ ಇದು ನನ್ನ ಅಂಗಡಿ, ನನ್ನ ಇಷ್ಟ ಎಂಬುದಾಗಿ ಹೇಳಿದರು. ಈಗ ಆಜಾನ್ ಟೈಮ್, ದೇವರ ಭಜನೆ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಮುಖೇಶ್ ಮೇಲೆ ಹಲ್ಲೆ ನಡೆಸಿದ್ದರು.
ನನ್ನ ‘ಕಾಂಗ್ರೆಸ್ ಪಕ್ಷ’ದವರು ಸಂಪರ್ಕ ಮಾಡಿದ್ದಾರೆ, ನಾಳೆ ಎಲ್ಲಾ ನಿರ್ಧಾರ ಹೇಳ್ತೀನಿ – ಡಿ.ವಿ ಸದಾನಂದಗೌಡ
ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ: ಬಿವೈ ವಿಜಯೇಂದ್ರ