ಮಂಡ್ಯ: ಜಿಲ್ಲೆಯ ಕೆರಗೋಡುವಿನಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಫೆಬ್ರವರಿ.9ರಂದು ಮಂಡ್ಯ ಬಂದ್ ಗೆ ಕರೆ ನೀಡಲಾಗಿದೆ. ಈ ಮೂಲಕ ಇಂದು ನಡೆಸಲಾಗುತ್ತಿದ್ದಂತ ಪ್ರತಿಭಟನೆಯನ್ನು ಕೈ ಬಿಡಲಾಗಿದೆ.
ಮಂಡ್ಯ ತಾಲೂಕಿ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಪ್ರತಿಭಟನೆಯನ್ನು ಬಿಜೆಪಿಯಿಂದ ನಡೆಸಲಾಯಿತು.
ಕೆರಗೋಡಿನಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮೂಲಕ ಸಾಗಿ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ಜಮಾಯಿಸಿದರು. ಈ ಪ್ರತಿಭಟನೆಗೆ ಜೆಡಿಎಸ್ ನ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಕೇಸರಿ ಶಾಲು ಧರಿಸಿ ಭಾಗಿಯಾದರು.
ಈ ಪ್ರತಿಭಟನೆಯಲ್ಲಿ ಭಾಗಿಯಾದಂತ ಬಿಜೆಪಿ ನಾಯಕ ಸಿಟಿ ರವಿ ಮನೆ ಮನೆಯ ಮೇಲೂ ಹನುಮಧ್ವಜ ಹಾರಿಸೋದಕ್ಕೆ ಕರೆ ನೀಡಿದ್ರೇ, ಮಾಜಿ ಸಿಎಂ ಹೆಚ್ ಡಿಕೆ ಹೆಸರಿನಲ್ಲಿ ರಾಮನಿದ್ರೆ ಸಾಲದು, ನಡೆಯಲ್ಲೂ ಶ್ರೀರಾಮನಂತೆ ಇರಬೇಕು ಎಂಬುದಾಗಿ ಕಿಡಿಕಾರಿದರು.
ಅಂತಿಮವಾಗಿ ಫೆಬ್ರವರಿ.9ರಂದು ಮಂಡ್ಯ ಬಂದ್ ಮಾಡಬೇಕು ಎಂಬುದಾಗಿ ಪ್ರತಿಭಟನಾ ನಿರತರು ಘೋಷಣೆ ಕೂಗುತ್ತಾ, ಫೆಬ್ರವರಿ.9ರಂದು ಮಂಡ್ಯ ಬಂದ್ ಗೆ ಕರೆ ನೀಡುವ ಮೂಲಕ ಪ್ರತಿಭಟನೆಯನ್ನು ಮುಕ್ತಾಯಗೊಳಿಸಲಾಯಿತು.
ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ಪದಚ್ಯುತಿ ಪಕ್ಕಾ.? : ‘ವಾಗ್ದಂಡನೆ ನಿರ್ಣಯ’ ಮಂಡನೆಗೆ ವಿಪಕ್ಷಗಳ ಸಿದ್ಧತೆ : ವರದಿ
ಮುಸ್ಲಿಮರ ಓಲೈಕೆಯಲ್ಲೂ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭಾರಿ ಪೈಪೋಟಿ – ಆರ್.ಅಶೋಕ್ ಕಿಡಿ