ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನಗಳಲ್ಲಿ ಕೂದಲು ಉದುರುವುದು ಹೆಚ್ಚಾಗಿದೆ. ಕೂದಲು ಉದುರುವುದು ನಿಲ್ಲಿಸುವುದಕ್ಕೆ ನಾನಾ ಕಸರತ್ತು ಮಾಡಿದ್ದಾರೆ.

HEALTH TIPS: ನಿಮಗೆ ಆಗಾಗ ಕಾಡುತ್ತಿದ್ದೀಯಾ ವೈರಲ್‌ ಫೀವರ್‌? ಅದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ

 

ಪ್ರತಿಯೊಬ್ಬರಿಗೂ ನನ್ನ ಕೂದಲು ದಪ್ಪ , ಉದ್ದಕ್ಕೆ ಇರಬೇಕು ಎಂದು ಬಯಸುತ್ತಾರೆ. ಕೆಲವೊಮ್ಮೆ ವಿಟಮಿನ್‌ಗಳ ಕೊರತೆ, ಸರಿಯಾದ ಆಹಾರ ಸೇವಿಸದೇ ಇರುವುದು ಮತ್ತು ತಪ್ಪಾದ ಜೀವನಶೈಲಿಯಿಂದ ಕೂದಲು ಉದುರಲು ಪ್ರಾರಂಭಿಸುತ್ತದೆ. ಅನೇಕ ಬಾರಿ ತಪ್ಪಾದ ಉತ್ಪನ್ನಗಳ ಬಳಕೆಯಿಂದ ತಲೆಹೊಟ್ಟು, ಸೀಳು ತುದಿಗಳು ಮತ್ತು ಕೂದಲಿನ ಬೆಳವಣಿಗೆ ಇತ್ಯಾದಿಗಳ ಸಮಸ್ಯೆಯೂ ಹೆಚ್ಚಾಗುತ್ತದೆ.
ಕರ್ಪೂರದ ಬಳಕೆ
ಈ ಉತ್ಪನ್ನಗಳನ್ನು ಕೂದಲಿಗೆ ದೀರ್ಘಕಾಲದವರೆಗೆ ಬಳಸುವುದರಿಂದ ಕೂದಲಿನ ನೈಸರ್ಗಿಕ ಹೊಳಪು ಕಳೆದುಹೋಗುವುದರ ಜೊತೆಗೆ ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಏಕೆಂದರೆ ಈ ಉತ್ಪನ್ನಗಳಲ್ಲಿ ಅನೇಕ ಬಾರಿ ಬಹಳಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ.
ಕರ್ಪೂರ ಮತ್ತು ತೆಂಗಿನ ಎಣ್ಣೆ
ಕರ್ಪೂರ ಮತ್ತು ತೆಂಗಿನ ಎಣ್ಣೆಯ ಬಳಕೆಯಿಂದ ಕೂದಲು ಉದುರುವಿಕೆ ಮತ್ತು ಬೋಳು ತಲೆಯ ಸಮಸ್ಯೆ ದೂರವಾಗುತ್ತದೆ. ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಎರಡನ್ನೂ ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಮತ್ತು ಲಘು ಕೈಯಿಂದ ಕೂದಲನ್ನು ಮಸಾಜ್ ಮಾಡಿ.

HEALTH TIPS: ನಿಮಗೆ ಆಗಾಗ ಕಾಡುತ್ತಿದ್ದೀಯಾ ವೈರಲ್‌ ಫೀವರ್‌? ಅದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ

 

ಹಸಿ ಮೊಟ್ಟೆಯೊಂದಿಗೆ ಕರ್ಪೂರ
ಕೂದಲು ಸ್ಟ್ರಾಂಗ್ ಮತ್ತು ಹೊಳೆಯುವಂತೆ ಮಾಡಲು, ಕರ್ಪೂರವನ್ನು ಹಸಿ ಮೊಟ್ಟೆಯೊಂದಿಗೆ ಬೆರೆಸಿ ಲೇಪಿಸಬಹುದು. ಕರ್ಪೂರದ ಎಣ್ಣೆ ಅಥವಾ ಕರ್ಪೂರವನ್ನು ಇದಕ್ಕೆ ಬಳಸಬಹುದು. ಕರ್ಪೂರ ಎಣ್ಣೆಯನ್ನು ಹಸಿ ಮೊಟ್ಟೆಯೊಂದಿಗೆ ಬೆರೆಸಿ ಅದನ್ನು ಕೂದಲಿನ ಬೇರುಗಳಿಹೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಇರಿಸಿ. ಅದರ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
ಕರ್ಪೂರ ಮತ್ತು ಆಲಿವ್ ಎಣ್ಣೆ
ಕರ್ಪೂರ ಮತ್ತು ಆಲಿವ್ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಕೂದಲು ತ್ವರಿತವಾಗಿ ಬೆಳೆಯುವುದರ ಜೊತೆಗೆ ಕೂದಲು ಉದುರುವುದು ಸಹ ನಿಲ್ಲುತ್ತದೆ.

Share.
Exit mobile version