ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಮಹತ್ವದ ಕ್ರಮವನ್ನು ವಹಿಸಲಾಗಿದೆ. ಇದರ ಭಾಗವಾಗಿ ಅನುಷ್ಠಾನ ಸಮಿತಿಯ ಅಧ್ಯಕ್ಷರನ್ನಾಗಿ ಹೆಚ್.ಎಂ ರೇವಣ್ಣ ಅವರನ್ನು ನೇಮಕ ಮಾಡಲಾಗಿದೆ. ಇದಲ್ಲದೇ ಉಪಾಧ್ಯಕ್ಷರಾಗಿ ನಾಲ್ವರನ್ನು ನೇಮಿಸಿ, ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಐತಿಹಾಸಿಕ ಐದು ಗ್ಯಾರಂಟಿ ಸ್ಕೀಂ ಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಿತಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದಿದೆ.
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಉಪಾಧ್ಯಕ್ಷರಾಗಿ ಮೆಹರೂಜ್ ಖಾನ್, ಪುಷ್ಪ ಅಮರನಾಥ್, ಎಸ್.ಆರ್.ಪಾಟೀಲ್ ಮತ್ತು ಸೂರಜ್ ಹೆಗ್ಡೆ ಅವರ ಹೆಸರನ್ನು ಸಿಎಂ ಸಿದ್ಧರಾಮಯ್ಯ ಅನುಮೋದಿಸಿದ್ದಾರೆ ಎಂಬುದಾಗಿ ತಿಳಿಸಿದೆ.
BREAKING: ’40 ಕಾಂಗ್ರೆಸ್ ಕಾರ್ಯಕರ್ತ’ರಿಗೆ ‘ನಿಗಮ-ಮಂಡಳಿ ಸ್ಥಾನ’ ನೀಡಲು ‘ಸಿಎಂ ಸಿದ್ಧರಾಮಯ್ಯ’ ಗ್ರೀನ್ ಸಿಗ್ನಲ್
ಮೆಟ್ರೋದಲ್ಲಿ ‘ರೈತ’ನಿಗೆ ಅವಮಾನ ಪ್ರಕರಣ: ರಾಜ್ಯ ‘ಮಾನವಹಕ್ಕುಗಳ ಆಯೋಗ’ದಿಂದ ‘BMRCL’ಗೆ ನೋಟಿಸ್ ಜಾರಿ