ಬೆಂಗಳೂರು: ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಪಕ್ಷದ ಉನ್ನತ ಮಟ್ಟದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷರನ್ನಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೇಮಕ ಮಾಡಿದ್ದಾರೆ.
ಈ ಸಂಚಾಲಕರನ್ನಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾ ನಾಯಕ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಸದಸ್ಯರಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಶಾಸಕರಾದ ಎಂ.ಟಿ. ಕೃಷ್ಣಪ್ಪ, ಎಸ್.ಎಲ್. ಬೋಜೇಗೌಡ, ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ.
ಪ್ರಚಾರ ಸಮಿತಿಗೆ ವೈ ಎಸ್ ವಿ ದತ್ತ ನಾಯಕತ್ವ
ಜೆಡಿಎಸ್ ಪ್ರಚಾರ ಸಮಿತಿಯನ್ನು ರಾಜ್ಯಾಧ್ಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರಚನೆ ಮಾಡಿದ್ದು, ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ವೈ ಎಸ್ ವಿ ದತ್ತ ಅವರನ್ನು ನೇಮಕ ಮಾಡಿದ್ದಾರೆ.
ಸದಸ್ಯರಾಗಿ ಮಾಜಿ ಶಾಸಕರಾದ ಅಶ್ವಿನ್ ಕುಮಾರ್, ಸುರೇಶ್ ಗೌಡ, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಶಾಸಕರಾದ ಭೀಮನಗೌಡ (ರಾಜುಗೌಡ) ಪಾಟೀಲ್, ಜಿ.ಡಿ. ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ಎಂ.ಆರ್. ಮಂಜುನಾಥ್, ಕೆ. ವಿವೇಕಾನಂದ, ಸಿ.ಎನ್. ಮಂಜೇಗೌಡ, ಡಾ. ಸೂರಜ್ ರೇವಣ್ಣ, ಹಿರಿಯ ನಾಯಕ ಸುಧಾಕರ್ ಎಸ್.ಶೆಟ್ಟಿ ಅವರು ಸದಸ್ಯರಾಗಿದ್ದಾರೆ.
ಡಿ. ನಾಗರಾಜಯ್ಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ
ಮಾಜಿ ಸಚಿವರಾದ ಡಿ. ನಾಗರಾಜಯ್ಯ ಅವರನ್ನು ಜೆಡಿಎಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮಾಜಿ ಸಂಸದ ಕುಪೇಂದ್ರರೆಡ್ಡಿ, ಶಾಸಕ ಜಿ.ಕೆ. ವೆಂಕಟಾಶಿವಾರೆಡ್ಡಿ, ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ಕೆ. ಮಹದೇವ, ಆರ್. ಚೌಡರೆಡ್ಡಿ, ಪಿ.ಆರ್ ಸುಧಾಕರ್ ಲಾಲ್, ಎಲ್.ಎನ್. ನಿಸರ್ಗ ನಾರಾಯಣಸ್ವಾಮಿ, ಡಾ. ಕೆ. ಶ್ರೀನಿವಾಸಮೂರ್ತಿ, ಶಾಸಕ ಹೆಚ್. ಟಿ. ಮಂಜುನಾಥ್ ಸದಸ್ಯರಾಗಿದ್ದಾರೆ.
ಗ್ರೇಟರ್ ಬೆಂಗಳೂರು ಪಾಲಿಕೆಗಳಿಗೆ ಉಸ್ತುವಾರಿಗಳ ನೇಮಕ
ಹೊಸದಾಗಿ ರಚನೆ ಆಗಿರುವ ಗ್ರೇಟರ್ ಬೆಂಗಳೂರು ಐದು ಪಾಲಿಕೆಗಳ ಉಸ್ತುವಾರಿಗಳನ್ನಾಗಿ ಈ ಕೆಳಕಂಡವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ನಗರದ ಕೇಂದ್ರ, ಪಶ್ಚಿಮ,ದಕ್ಷಿಣ, ಪೂರ್ವ, ಉತ್ತರ ಪಾಲಿಕೆಗಳಿಗೆ ಜೆಡಿಎಸ್ ಉಸ್ತುವಾರಿ ಸಮಿತಿ ಅಧ್ಯಕ್ಷರನ್ನಾಗಿ ಅರಕಲಗೂಡು ಶಾಸಕ ಎ. ಮಂಜು ಅವರನ್ನು ನೇಮಕ ಮಾಡಲಾಗಿದೆ.
ಸದಸ್ಯರನ್ನಾಗಿ ಶಾಸಕರಾದ ಎಂ.ಟಿ. ಕೃಷ್ಣಪ್ಪ, ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ಸಿ.ಎನ್. ಮಂಜೇಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ನೂತನ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಮಾಜಿ ಶಾಸಕರಾದ ಸುರೇಶ್ ಗೌಡ, ಎ. ಮಂಜುನಾಥ್, ಹೆಚ್.ಎಂ. ರಮೇಶ್ ಗೌಡ, ಕೆ.ಎ. ತಿಪ್ಪೇಸ್ವಾಮಿ, ಎಲ್.ಎನ್. ನಾರಾಯಣಸ್ವಾಮಿ, ಹಿರಿಯ ನಾಯಕ ಜಗದೀಶ್ ನಾಗರಾಜಯ್ಯ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಹಿರಿಯ ನಾಯಕ ಆರ್. ಪ್ರಕಾಶ್ ಅವರುಗಳು ಸದಸ್ಯರಾಗಿರುತ್ತಾರೆ.
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ಶಬರಿಮಲೆಗೆ ‘KSRTC ವೋಲ್ವೋ ಬಸ್’ ಸಂಚಾರ ಆರಂಭ
BREAKING: ಬ್ಯಾಂಕ್ ಖಾತೆಯಿಲ್ಲದೇ ‘ಮಕ್ಕಳು UPI ವರ್ಗಾವಣೆ’ಗೆ ಅನುಮೋದಿಸಿದ RBI | Junio Payments








