ಬೆಂಗಳೂರು: ರಾಜ್ಯದ ಯಾವುದೇ ಕಛೇರಿಯಲ್ಲಿ ಸಾರಿಗೆ ವಾಹನಗಳ ಅರ್ಹತಾ ಪತ್ರ ನವೀಕರಿಸುವ ಹಾಗೂ ಸಾರಿಗೇತರ ವಾಹನಗಳ ನೋಂದಣಿ ನವೀಕರಿಸುವ ಕುರಿತು ಪುಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳ (ಎಸ್.ಓ.ಪಿ)ಯನ್ನು ಜಾರಿಗೊಳಿಸಿದೆ. ಇನ್ಮುಂದೆ ವಾಹನಗಳ ಅರ್ಹತಾ ಪತ್ರ ನವೀಕರಣ, ಸಾರಿಗೇತರ ವಾಹನಗಳ ನೋಂದಣಿ ನವೀಕರಣಕ್ಕೆ ಈ ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಲಾಗಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದ್ದು, ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ನಾಗರೀಕರಿಗೆ ಸೇವೆಯ ಬಳಕೆಯನ್ನು ಸುಲಭಗೊಳಿಸುವ ಕ್ರಮಗಳ ಶಿಫಾರಸ್ಸು ಹಾಗೂ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 56 ರಡಿಯಲ್ಲಿ ಹಾಗೂ ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 52 ಹಾಗೂ ನಿಯಮ 62 ರನ್ವಯ ಸಾರಿಗೆ ವಾಹನಗಳ ಅರ್ಹತಾ ಪತ್ರ ನವೀಕರಣಕ್ಕಾಗಿ ವಾಹನ ಮಾಲೀಕರು ಮೂಲ ನೋಂದಣಿ ಪ್ರಾಧಿಕಾರ ಸೇರಿದಂತೆ ಇತರೆ ನೋಂದಣಿ ಪ್ರಾಧಿಕಾರಗಳಲ್ಲಿ ಅರ್ಜಿ ಸಲ್ಲಿಸಿದ ಪ್ರಕರಣಗಳಲ್ಲಿ ರಾಜ್ಯದ ಯಾವುದೇ ನೋಂದಣಿ ಪ್ರಾಧಿಕಾರಿಗಳಲ್ಲಿ ಅರ್ಹತಾ ಪತ್ರ ನವೀಕರಣ ಮಾಡಲು ಕ್ರಮ ವಹಿಸುವಂತೆ ಉಲ್ಲೇಖ (1)ರ ಪತ್ರಗಳಲ್ಲಿ ತಿಳಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ನೋಂದಣಿ ಪ್ರಾಧಿಕಾರಗಳಲ್ಲಿ ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರು ಮೂಲ ನೋಂದಣಿ ಪ್ರಾಧಿಕಾರದ ವಾಹನಗಳು ಹೊರತುಪಡಿಸಿ ಇತರೆ ನೋಂದಣಿ ಪ್ರಾಧಿಕಾರಗಳು ಹಾಗೂ ಬೇರೊಂದು ರಾಜ್ಯದ ನೋಂದಣಿ ಪ್ರಾಧಿಕಾರಗಳ ವಾಹನಗಳನ್ನು ತಪಾಸಣೆ ಮಾಡದೇ ಕಛೇರಿಯ ವ್ಯಾಪ್ತಿಯೊಳಗೆ ವಾಹನಗಳು ಬಾರದೇ ಇದ್ದರೂ ಅರ್ಹತಾ ಪತ್ರ ನವೀಕರಿಸುತ್ತಿರುವುದು ಈ ಕಛೇರಿಯ ಗಮನಕ್ಕೆ ಬಂದಿರುತ್ತದೆ. ಇತ್ತೀಚೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೆಂಗಳೂರು (ಕೇಂದ್ರ) ದಲ್ಲಿ 41 ಗುಜರಾತ್ ರಾಜ್ಯದ ವಾಹನಗಳನ್ನು ಭೌತಿಕವಾಗಿ ತಪಾಸಣೆ ಮಾಡದೇ ಸದರಿ ವಾಹನಗಳ ಅರ್ಹತಾ ಪತ್ರ ನವೀಕರಿಸಿರುತ್ತಾರೆ. ಆದರೆ ಅದೇ ದಿನ ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗಿವೆ ಎಂದು ಗುಜರಾತ್ ರಾಜ್ಯದ ಸಾರಿಗೆ ಆಯುಕ್ತರು ಉಲ್ಲೇಖ (2)ರ ಪತ್ರದಲ್ಲಿ ತಿಳಿಸಿರುತ್ತಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ನೋಂದಣಿ ಪ್ರಾಧಿಕಾರಗಳಲ್ಲಿ ಈ ರೀತಿಯ ಪಕರಣಗಳು ಮರುಕಳಿಸದಂತೆ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳು ಮತ್ತು ಹಿರಿಯ ಮೋಟಾರು | ಮೋಟಾರು ವಾಹನ ನಿರೀಕ್ಷಕರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲು ಆದೇಶಿಸಿದೆ ಹಾಗೂ ದಿನಾಂಕ:02.02.2026ರಿಂದ ಹಂತ ಹಂತವಾಗಿ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳ ಕಛೇರಿಯಲ್ಲಿ M-fitness App (Geo-fencing) ಅನ್ನು ಜಾರಿಗೆ ತರುವ ಸಂಬಂಧ ಈಗಾಗಲೇ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ವಾಹನಗಳು ಕಡ್ಡಾಯವಾಗಿ ಕಛೇರಿಗಳಿಗೆ ಹಾಜರಾಗಬೇಕಿದ್ದು, ವಾಹನಗಳ ಛಾಯಚಿತ್ರ ಮತ್ತು Co-ordinates ಗಳನ್ನು ಪಡೆದು ದಾಖಲಿಸಿದ ನಂತರವಷ್ಟೆ ಅರ್ಹತಾ ಪತ್ರವನ್ನು ನೀಡುವ ಕುರಿತು ತಾಂತ್ರಿಕವಾಗಿ ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲಿ ಅಳವಡಿಸಲಾಗುವುದು. ಸದರಿ ತಂತ್ರಾಂಶ ಜಾರಿಗೊಳ್ಳುವವರೆಗೆ ಅರ್ಹತಾ ಪತ್ರ ನವೀಕರಣಕ್ಕೆ ಬರುವ ವಾಹನಗಳ ತಪಾಸಣೆಗೆ ಈ ಕೆಳಕಂಡ ಪುಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳ (ಎಸ್.ಓ.ಪಿ) ಪಾಲಿಸಲು ಆದೇಶಿಸಿದ್ದಾರೆ.
1) ನೋಂದಣಿ ಪ್ರಾಧಿಕಾರಿದ ಕಛೇರಿಯ ನಿಗದಿತ ಜಾಗದಲ್ಲಿ ಮಾತ್ರ ಅರ್ಹತಾ ಪತ್ರ ನವೀಕರಣಕ್ಕೆ ಬರುವ ವಾಹನಗಳನ್ನು ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರು ಖುದ್ದಾಗಿ ಪರಿಶೀಲಿಸಿ, ಅರ್ಹತಾ ಪತ್ರಗಳನ್ನು ನವೀಕರಿಸತಕ್ಕದ್ದು.2) ವಾಹನವನ್ನು ಪರಿಶೀಲಿಸುವ ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರು ಅವರ ಹಾಗೂ ವಾಹನದ ಪೂರ್ಣ ಛಾಯಾ ಚಿತ್ರದೊಂದಿಗೆ (ವಾಹನದ Number Plate ಸೇರಿದಂತೆ) GPS Photo Location App 28, Date, Time, Location ಸೃಜನೆಯಾಗುವಂತೆ ಛಾಯಾ ಚಿತ್ರವನ್ನು ತೆಗೆದು ತಮ್ಮ ಕಛೇರಿಯ ನೋಂದಣಿ ಪ್ರಾಧಿಕಾರಿಗಳ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ನಲ್ಲಿ ಸಲ್ಲಿಸುವುದು.
3) ಕಛೇರಿಯ ನೋಂದಣಿ ಪ್ರಾಧಿಕಾರಿಗಳ ಕಛೇರಿ ಮುಖ್ಯಸ್ಥರ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ನಲ್ಲಿ ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರಿಂದ ಸಲ್ಲಿಕೆಯಾಗುವ ಆಯಾ ದಿವಸದ ವಾಹನಗಳ ಛಾಯಾ ಚಿತ್ರಗಳ ವಾಹನ್ ತಂತ್ರಾಂದಲ್ಲಿ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಲು ತಿಳಿಸಿದೆ.
4) ಸಂಬಂಧಪಟ್ಟ ಕಛೇರಿಯ ನೋಂದಣಿ ಪ್ರಾಧಿಕಾರಿಗಳು/ ಕಛೇರಿ ಮುಖ್ಯಸ್ಥರು ಅರ್ಹತಾ ಪತ್ರ ನವೀಕರಣಕ್ಕೆ ಕಛೇರಿಗೆ ಬರುವ ವಾಹನಗಳಲ್ಲಿ ಕನಿಷ್ಠ 20% ರಷ್ಟು ವಾಹನಗಳನ್ನು ಖುದ್ದಾಗಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡುವುದು.
5) ಎಲ್ಲಾ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಮೇಲ್ಕಂಡ ಮಾನದಂಡಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ಕುರಿತು ಕಛೇರಿಯ ತಪಾಸಣೆಯ ಸಮಯದಲ್ಲಿ ಹಾಗೂ ಮಾಸಿಕ ಸಭೆಗಳಲ್ಲಿ ಪರಿಶೀಲಿಸಿ ಖಚಿತಪಡಿಸಿಕೊಂಡು ಈ ಕಛೇರಿಗೆ ಮಾಹೆವಾರು ವರದಿಯನ್ನು ನೀಡತಕ್ಕದ್ದು.
6) ಇತರೆ ರಾಜ್ಯದ ವಾಹನಗಳ ಅರ್ಹತಾ ಪತ್ರ ನವೀಕರಣವನ್ನು ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರು ಭೌತಿಕವಾಗಿ ಪರಿಶೀಲಿಸಿದ ನಂತರ ಖುದ್ದಾಗಿ ಕಛೇರಿ ಮುಖ್ಯಸ್ತರೇ ಮೇಲ್ವಿಚಾರಣೆಯನ್ನು ಮಾಡತಕ್ಕದ್ದು.
ಮೇಲ್ಕಂಡ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ಯಾವುದೇ ದೂರುಗಳಿಗೆ ಅವಕಾಶ ಕೊಡದೇ ಕಾರ್ಯನಿರ್ವಹಿಸಲು ತಿಳಿಸಿದೆ ಹಾಗೂ ಅರ್ಹತಾ ಪತ್ರ ನವೀಕರಣಕ್ಕೆ ಬರುವ ವಾಹನಗಳನ್ನು ಭೌತಿಕವಾಗಿ ತಪಾಸಣೆ ನಡೆಸದೇ ಅರ್ಹತಾ ಪತ್ರ ನವೀಕರಣಗೊಂಡಲ್ಲಿ ಸಂಬಂಧಪಟ್ಟ ಹಿರಿಯ ಮೋಟಾರು / ಮೋಟಾರು ವಾಹನ ನಿರೀಕ್ಷಕರು ಹಾಗೂ ಕಛೇರಿಯ ಮುಖ್ಯಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು

ಹೋಂ ಗಾರ್ಡ್ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಗೃಹರಕ್ಷಕ ದಳಕ್ಕೆ ಸೇರಲು ಅರ್ಜಿ ಆಹ್ವಾನ
SHOCKING: ಹಣಕ್ಕಾಗಿ ದೊಡ್ಡಪ್ಪ, ದೊಡ್ಡಮ್ಮನಿಗೆ ಹೈಡೋಸೇಜ್ ಇಂಜೆಕ್ಷನ್ ನೀಡಿ ಕೊಂಡ ಪಾಪಿ ವೈದ್ಯ








