ಬೆಂಗಳೂರು:‘ಚುನಾವಣೆ ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನದಿಂದ ಕಳೆದ ಏಳು ತಿಂಗಳಲ್ಲಿ ಬಡವರ ಮೇಲೆ ಬರದ ತೀವ್ರತೆ ಕಡಿಮೆಯಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಹಾಗೂ ಹಿರಿಯ ಸರ್ಕಾರಿ ಕಾರ್ಯದರ್ಶಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಸಿದ್ದರಾಮಯ್ಯ, ಶೇ.60ಕ್ಕೂ ಹೆಚ್ಚು ಜನರು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ,.ಬರಗಾಲದ ತೀವ್ರತೆ ಕಡಿಮೆಯಾಗಲು ನಮ್ಮ ಭರವಸೆಗಳೇ ಕಾರಣ. ಬರಗಾಲವಿದ್ದರೂ ಬಡ ಕುಟುಂಬಗಳು ಕೊಳ್ಳುವ ಶಕ್ತಿಯನ್ನು ಪಡೆದಿರುವುದರಿಂದ ಅದರ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ,’’ ಎಂದು ಅವರು ಹೇಳಿದರು.
ಸಾರ್ವತ್ರಿಕ ಮೂಲ ಆದಾಯ ನೀತಿಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಜನರ ಆದಾಯ ಹೆಚ್ಚಿದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35,000 ಕೋಟಿ ಬೆಳೆ ನಷ್ಟವಾಗಿದೆ, ಪ್ರಕೃತಿಯು ನಮ್ಮನ್ನು ಬೆಂಬಲಿಸದಿದ್ದರೆ ಸರ್ಕಾರದಿಂದ ಪರಿಹಾರ ಸಾಕಾಗುವುದಿಲ್ಲ, ಹವಾಮಾನ ಬದಲಾವಣೆಯಿಂದ ನಾವು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. 2024 ರಲ್ಲಿ ಮಾನ್ಸೂನ್ ಸಮಯದಲ್ಲಿ ಉತ್ತಮ ಮಳೆಗಾಗಿ,ನಾನು ಪ್ರಾರ್ಥಿಸುತ್ತೇನೆ.” ಎಂದು ಅವರು ಹೇಳಿದರು.