Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕಿರ್ಲೋಸ್ಕರ್​ ಕಂಪನಿಯಿಂದ ರಾಜ್ಯದಲ್ಲಿ 3 ಸಾವಿರ ಕೋಟಿ ಹೂಡಿಕೆ : ಸಚಿವ ಎಂ.ಬಿ. ಪಾಟೀಲ್

05/11/2025 9:52 AM

BREAKING : ಕೆಲವೇ ದಿನಗಳಲ್ಲಿ ರಾಜ್ಯ ಸಂಪುಟ ಪುನಾರಚನೆ ಸಾಧ್ಯತೆ : ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವು

05/11/2025 9:45 AM

BREAKING : ಅಮೆರಿಕದಲ್ಲಿ ಕಾರ್ಗೋ ವಿಮಾನ ಪತನಗೊಂಡು 7 ಮಂದಿ ಸಾವು : ಭಯಾನಕ ವೀಡಿಯೋ ವೈರಲ್ |WATCH VIDEO

05/11/2025 9:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದುರ್ಬಲ ಸಮಾಜದ ಉನ್ನತಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿ: ಸಚಿವ ಮಧು ಬಂಗಾರಪ್ಪ
KARNATAKA

ದುರ್ಬಲ ಸಮಾಜದ ಉನ್ನತಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿ: ಸಚಿವ ಮಧು ಬಂಗಾರಪ್ಪ

By kannadanewsnow0905/04/2025 3:12 PM

ಶಿವಮೊಗ್ಗ : ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು, ಶೋ಼ಷಿತರನ್ನು ಮಾತ್ರವಲ್ಲದೇ ಸಮಾಜದ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಗ್ಯಾರಂಟಿ ಯೋಜನೆಗಳು ಸರ್ವರ ಸರ್ವೋದಯಕ್ಕೆ ಸಹಕಾರಿಯಾಗಿವೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಡಾ|| ಬಾಬು ಜಗಜೀವನರಾಮ್ಜಯಂತಿ ಕಾರ್ಯಕ್ರಮದಲ್ಲಿ ಆಡಳಿತಾರೂಢ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಕುರಿತು ವಾರ್ತಾ ಇಲಾಖೆಯು ಫಲಾನುಭವಿಗಳ ಯಶೋಗಾಥೆಗಳನ್ನಾಧರಿಸಿದ ಕಿರುಹೊತ್ತಿಗೆ ಗ್ಯಾರಂಟಿ ಸರ್ಕಾರದ ವಿಕಾಸಪಥವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಜನಸಾಮಾನ್ಯರ ನೋವು-ನಲಿವುಗಳನ್ನು ಸಮೀಪದಿಂದ ಬಲ್ಲವನಾಗಿದ್ದೇನೆ. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಅದಮ್ಯ ಆಕಾಂಕ್ಷೆ ಹೊಂದಿದ್ದೇನೆ. ಜನಸಾಮಾನ್ಯರಿಗೆ ಸಹಕಾರಿಯಾಗುವಂತೆ ನನ್ನೆಲ್ಲಾ ಆಸೆ-ಕನಸುಗಳಿಗೆ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ಮೂರ್ತರೂಪ ನೀಡಿ ಪ್ರಣಾಳಿಕೆಯ ಅನುಷ್ಟಾನ ಸಮಿತಿಯ ಉಪಾಧ್ಯಕ್ಷನಾಗಿ ಅವುಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ದೇನೆ. ಅದು ಇಂದು ಫಲಪ್ರದವಾಗಿರುವುದು ಅತ್ಯಂತ ಸಂತೋಷವೆನಿಸಿದೆ ಎಂದರು.

ಈ ಎಲ್ಲಾ ಯೋಜನೆಗಳ ಅನುಷ್ಠಾನದ ಹಿಂದೆ ನನ್ನ ಪೂಜ್ಯ ತಂದೆ ಹಾಗೂ ದೂರದೃಷ್ಟಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರನ್ನು ಅನುಸರಿಸಲಾಗುತ್ತಿದೆ ಎಂದ ಅವರು, ಹಲವು ದಶಕಗಳ ಹಿಂದೆ ಬಡವರು, ದೀನದಲಿತರು, ಕೃಷಿಕರು ಸೇರಿದಂತೆ ಎಲ್ಲಾ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ಉಚಿತ ವಿದ್ಯುತ್, ಅಕ್ಷಯ, ಆರಾಧನಾ, ಶುಶ್ರೂಷ, ಆಶ್ರಯ, ಗ್ರಾಮೀನ ಕೃಪಾಂಕದಂತಹ ಅನೇಕ ಜನಪ್ರಿಯ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಅದೇ ಪರಂಪರೆ ಇಂದಿಗೂ ಮುಂದುವರೆದಿದೆ ಎಂದವರು ನುಡಿದರು.

ಪ್ರಸಕ್ತ ಸರ್ಕಾರವು ಜಾರಿಗೊಳಿಸಿರುವ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾದ ಶಕ್ತಿ ಯೋಜನೆ, ರಾಜ್ಯವನ್ನು ಹಸಿವು ಮುಕ್ತಗೊಳಿಸುವಲ್ಲಿ ಜಾರಿಗೊಳಿಸಲಾಗಿರುವ ಅನ್ನಭಾಗ್ಯ, ರಾಜ್ಯದ ಪ್ರತಿ ಮನೆಯನ್ನು ಕತ್ತಲಿಂದ ಬೆಳಕಿನೆಡೆಗೆ ಕರೆತರುವ ಗೃಹಜ್ಯೋತಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಮಾಸಿಕವಾಗಿ 2000ರೂ.ಗಳನ್ನು ಅವರ ಖಾತೆಗೆ ನೀಡುವ ಗೃಹಲಕ್ಷ್ಮೀ ಹಾಗೂ ಪದವಿ ಮತ್ತು ಡಿಪ್ಲೋಮಾ ಪಡೆದು ಉದ್ಯೋಗ ಲಭಿಸದಿರುವ ಯುವಕರಿಗೆ 2ವರ್ಷಗಳವರೆಗೆ ಪ್ರತಿ ತಿಂಗಳು ಭತ್ಯೆ ನೀಡುವ ಯುವನಿಧಿ ಯೋಜನೆಗಳು ಅತ್ಯಂತ ಜನಪ್ರಿಯ ಯೋಜನೆಗಳಾಗಿದ್ದು, ನೆರೆಯ ರಾಜ್ಯ ಸರ್ಕಾರಗಳು ರಾಜ್ಯದ ಮಾದರಿಯಲ್ಲಿ ಈ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿರುವುದು ಯೋಜನೆಯ ಮಹತ್ವವನ್ನು ಸಾರಿ ಹೇಳುತ್ತಿವೆ ಎಂದರು.

ಈ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಒಂದಿಲ್ಲೊಂದು ರೀತಿಯ ಬದಲಾವಣೆ, ಸುಧಾರಣೆ ತಂದಿರುವುದಲ್ಲದೇ ಆರ್ಥಿಕ ಸಂಚಲ ಸೃಷ್ಟಿಸಿದೆ. ಜಿ.ಎಸ್.ಟಿ.ಸಂಗ್ರಹದಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದ ಅವರು, ಯಾವುದೇ ಸರ್ಕಾರ ಜನರ ವೆಚ್ಚ ಸಾಮರ್ಥ್ಯವನ್ನು ಅಥವಾ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದಲ್ಲಿ ಅಂತಹ ಸಮಾಜದಲ್ಲಿ ಆರ್ಥಿಕ ಚಲನಶೀಲತೆ ಆರೋಗ್ಯಕರವಾಗಿರುತ್ತದೆ. ಜಿ.ಡಿ.ಪಿ. ಬೆಳವಣಿಗೆಯೂ ಉತ್ತಮ ರೀತಿಯಲ್ಲಿ ಇರುತ್ತದೆ ಎನ್ನುವ ಆರ್ಥಿಕ ಮಂತ್ರದ ಮೂಲಪಾಠಕ್ಕೆ ಈ ಯೋಜನೆಗಳು ಸಾಕ್ಷಿಯಾಗಿವೆ ಎಂದರು.

ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳೊಂದಿಗೆ ಇನ್ನಷ್ಟು ಜನಪರವಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ರಚನಾತ್ಮಕವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಮಾದರಿ ಜಿಲ್ಲೆ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವುದಾಗಿ ಅವರು ನುಡಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ಬಾನು, ಡಾ|| ಆರ್.ಎಂ.ಮಂಜುನಾಥಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಲ್ಲೇಶಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ ಮತ್ತಿತರರು ಉಪಸ್ಥಿತರಿದ್ದರು.

BIG NEWS: ‘ಒಳ ಮೀಸಲಾತಿ’ ಬಗ್ಗೆ ಅನುಮಾನ ಬೇಡ, ನಾವು ಜಾರಿ ಮಾಡೇ ಮಾಡ್ತೀವಿ: ಸಿಎಂ ಸಿದ್ಧರಾಮಯ್ಯ ಘೋಷಣೆ

ಏ. 15 ರಿಂದ `ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿ ಸ್ಪರ್ಧೆ’ : ಆನ್‍ಲೈನ್‍ನಲ್ಲಿ ನೊಂದಣಿಗೆ ಸೂಚನೆ

Share. Facebook Twitter LinkedIn WhatsApp Email

Related Posts

BIG NEWS : ಕಿರ್ಲೋಸ್ಕರ್​ ಕಂಪನಿಯಿಂದ ರಾಜ್ಯದಲ್ಲಿ 3 ಸಾವಿರ ಕೋಟಿ ಹೂಡಿಕೆ : ಸಚಿವ ಎಂ.ಬಿ. ಪಾಟೀಲ್

05/11/2025 9:52 AM2 Mins Read

BREAKING : ಕೆಲವೇ ದಿನಗಳಲ್ಲಿ ರಾಜ್ಯ ಸಂಪುಟ ಪುನಾರಚನೆ ಸಾಧ್ಯತೆ : ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವು

05/11/2025 9:45 AM1 Min Read

BREAKING : ಬೆಳ್ಳಂ ಬೆಳಗ್ಗೆ ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ : ಕಾರು-ಕೊರಿಯರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವು.!

05/11/2025 9:11 AM1 Min Read
Recent News

BIG NEWS : ಕಿರ್ಲೋಸ್ಕರ್​ ಕಂಪನಿಯಿಂದ ರಾಜ್ಯದಲ್ಲಿ 3 ಸಾವಿರ ಕೋಟಿ ಹೂಡಿಕೆ : ಸಚಿವ ಎಂ.ಬಿ. ಪಾಟೀಲ್

05/11/2025 9:52 AM

BREAKING : ಕೆಲವೇ ದಿನಗಳಲ್ಲಿ ರಾಜ್ಯ ಸಂಪುಟ ಪುನಾರಚನೆ ಸಾಧ್ಯತೆ : ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವು

05/11/2025 9:45 AM

BREAKING : ಅಮೆರಿಕದಲ್ಲಿ ಕಾರ್ಗೋ ವಿಮಾನ ಪತನಗೊಂಡು 7 ಮಂದಿ ಸಾವು : ಭಯಾನಕ ವೀಡಿಯೋ ವೈರಲ್ |WATCH VIDEO

05/11/2025 9:44 AM

ಷೇರು ಮಾರುಕಟ್ಟೆ ರಜಾದಿನ:ಇಂದು ‘ ಗುರು ನಾನಕ್ ಜಯಂತಿ’ ಪ್ರಯುಕ್ತ BSE, NSE ಬಂದ್ | Share Market Holiday

05/11/2025 9:29 AM
State News
KARNATAKA

BIG NEWS : ಕಿರ್ಲೋಸ್ಕರ್​ ಕಂಪನಿಯಿಂದ ರಾಜ್ಯದಲ್ಲಿ 3 ಸಾವಿರ ಕೋಟಿ ಹೂಡಿಕೆ : ಸಚಿವ ಎಂ.ಬಿ. ಪಾಟೀಲ್

By kannadanewsnow0505/11/2025 9:52 AM KARNATAKA 2 Mins Read

ಬೆಂಗಳೂರು : ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಕರ್ನಾಟಕದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಬಂಡವಾಳ ಹೂಡಲಿದೆ…

BREAKING : ಕೆಲವೇ ದಿನಗಳಲ್ಲಿ ರಾಜ್ಯ ಸಂಪುಟ ಪುನಾರಚನೆ ಸಾಧ್ಯತೆ : ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವು

05/11/2025 9:45 AM

BREAKING : ಬೆಳ್ಳಂ ಬೆಳಗ್ಗೆ ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ : ಕಾರು-ಕೊರಿಯರ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವು.!

05/11/2025 9:11 AM

ಗಮನಿಸಿ :`ಟೂತ್ ಪೇಸ್ಟ್’ ನ ಕೆಳಭಾಗದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತಾ?

05/11/2025 8:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.