ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವಂತ ಗ್ಯಾರಂಟಿ ಯೋಜನೆಗಳು ಕೇವಲ ಮತಬ್ಯಾಂಕ್ ತೆವಲಿಗಾಗಿ ಮಾಡಿಕೊಂಡದ್ದೇ ಹೊರತು, ಜನರ ಅಭಿವೃದ್ಧಿಗಾಗಿ ಮಾಡಿದ್ದಲ್ಲ ಅಂತ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಎಸ್‍ಇಪಿ ಟಿಎಸ್‍ಪಿ ದಲಿತರ ಹಣ ದುರುಪಯೋಗದ ಬಗ್ಗೆ ನಾವು ಹಲವು ಬಾರಿ ಗಮನ ಸೆಳೆದಿದ್ದೇವೆ. ಕಳೆದ ಆರ್ಥಿಕ ವರ್ಷದಲ್ಲಿ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದ 11,114 ಕೋಟಿ ರೂ.ಗಳನ್ನು ಈ ಸರಕಾರ ಬೇರೆ ಬೇರೆ ಕಾರ್ಯಗಳಿಗೆ ದುರುಪಯೋಗ ಪಡಿಸಿಕೊಂಡಿತ್ತು ಎಂದು ಆಕ್ಷೇಪಿಸಿದರು.
7 ಡಿ ರದ್ದು ಮಾಡುವುದಾಗಿ ಹೇಳಿದ್ದರು. ಅದರಂತೆ 7 ಡಿ ರದ್ದು ಮಾಡಿದ್ದರು. ಆದರೂ, ದಲಿತರಿಗಾಗಿ ಮೀಸಲಿಟ್ಟ 14282 ಕೋಟಿ ರೂಗಳನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. 7 ಡಿ ರದ್ದು ಮಾಡಿದ್ದು, 7 ಸಿ ನಲ್ಲಿ ಗ್ಯಾರಂಟಿಗೆ ಹಣ ಕೊಡುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರಲ್ಲದೆ, ಲೂಟಿ ಮಾಡುವುದಾದರೆ ಹಿಂದಿನ ಬಾಗಿಲಾದರೇನು, ಮುಂದಿನ ಬಾಗಿಲಾದರೆ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರ ನೇತೃತ್ವದ ಇದು ಲೂಟಿ ಸರಕಾರ. ದಲಿತರ ಏಳಿಗೆಯನ್ನು ಸಹಿಸದ ಸರಕಾರ ಎಂದು ಟೀಕಿಸಿದ ಅವರು, ಉಪ ಯೋಜನೆಯಡಿ ಸೇರಿದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ದೈಹಿಕ ವಿಕಲಚೇತನರ ಸ್ಕೀಮ್‍ಗಳಿಗೆ ಬಳಸುವಂತೆ 7 ಸಿ ಹೇಳುತ್ತದೆ. ಆದರೆ, ಗ್ಯಾರಂಟಿಗಳು ಇದರಡಿ ಬರುವುದಿಲ್ಲ ಎಂದು ಎಚ್ಚರಿಸಿದರು.
ಗ್ಯಾರಂಟಿಗಳನ್ನು ನೀವು ಮತಬ್ಯಾಂಕ್ ತೆವಲಿಗಾಗಿ ಮಾಡಿಕೊಂಡದ್ದೇ ಹೊರತು ಇದು ಜನರ ಅಭಿವೃದ್ಧಿಗಾಗಿ ಮಾಡಿದ್ದಲ್ಲ. ಇದು ತಾತ್ಕಾಲಿಕವಾಗಿ ಅವರನ್ನು ಮೆಚ್ಚಿಸುವ, ಮೂಗಿಗೆ ತುಪ್ಪ ಸವರುವ ಕಾರ್ಯಕ್ರಮ ನಮಗೆ ಬೇಕಿರಲಿಲ್ಲ. ಯಾರೂ ನಿಮಗೆ ಅರ್ಜಿ ಕೊಟ್ಟು ಕೇಳಿರಲಿಲ್ಲ ಎಂದು ನುಡಿದರು.
ದಲಿತರ ಮಕ್ಕಳಿಗೆ ಸ್ಕಾಲರ್‍ಶಿಪ್ ಬರುತ್ತಿಲ್ಲ. ಸ್ಕಾಲರ್‍ಶಿಪ್ ಪಡೆದು ಉನ್ನತ ಶಿಕ್ಷಣಕ್ಕೆ ಹೊರದೇಶಗಳಿಗೆ ಹೋಗುತ್ತಿದ್ದರು. ಈ ವರ್ಷದಿಂದ ಅದನ್ನೂ ರದ್ದು ಮಾಡಿದ್ದಾರೆ. ನಿಮ್ಮ ಕಾಳಜಿ ಏನು? ದಲಿತರಿಗೆ ಬೇರೆ ಸರಕಾರಗಳಿಗಿಂತ 3 ಸಾವಿರ ಕೋಟಿ ಹೆಚ್ಚು ಕೊಟ್ಟಿದ್ದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅನೌನ್ಸ್ ಮಾಡಿದರೂ ಜನರಿಗೆ ಅದು ತಲುಪದಿದ್ದರೆ ಹೇಗೆ? ಎಂದು ಕೇಳಿದರು.
ಕಾರ್ಯಕರ್ತರ ಸಮಸ್ಯೆಗಳಿಗೆ ಕಿವಿಯಾದ ಸಿಎಂ: ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚನೆ
GOOD NEWS: ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರರಿಗೆ ‘ಮನೆ ಭಾಗ್ಯ’