ಮಂಡ್ಯ: ಜಿಎಸ್ಟಿ ಇಳಿಕೆ ಬಗ್ಗೆ ಕೇಂದ್ರ ಸರ್ಕಾರ ಟಾಂ ಟಾಂ ಹೊಡೆಯುತ್ತಿದೆ. ಒಂದರಲ್ಲಿ ಕಡಿಮೆ ಮಾಡಿ ಹೆಮ್ಮೆ ಪಡುವುದಲ್ಲ. ಟ್ಯಾಕ್ಸ್ ತೊಂದರೆ ಸರಿ ಮಾಡಿ ಎಂಬುದಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಕೇಂದ್ರ ಸರ್ಕಾರದಿಂದ GST ಇಳಿಕೆ ವಿಚಾರ ಮಾತನಾಡಿದಂತ ಅವರು, ರಾಷ್ಟ್ರ ಮಟ್ಟದಲ್ಲಿ GST ಇಳಿಕೆ ಮಾಡಿದ್ದಾರೆ. ಇನ್ನು ಹಲವು ಟ್ಯಾಕ್ಸ್ ವ್ಯವಸ್ಥೆಯಲ್ಲಿ ತೊಂದರೆ ಇದೆ. ಒಂದರಲ್ಲಿ ಕಡಿಮೆ ಮಾಡಿ ಹೆಮ್ಮೆ ಪಡುವುದಲ್ಲ ಟ್ಯಾಕ್ಸ್ ಕಟ್ಟಬೇಕು ವಂಚನೆ ಮಾಡಬಾರದು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ರಾಜಕೀಯವಾಗಿ ಸೀಮಿತವಾಗಿದೆ ಎಂದರು.
ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿಚಾರ ಪ್ರತಿಕ್ರಿಯಿಸಿದಂತ ಅವರು, ವಿರೋಧ ಪಕ್ಷದ ಪ್ರಯತ್ನ ಮೆಟ್ಟಿಲೆರಲ್ಲ. ಬಾನು ಮುಷ್ತಾಕ್, ಹೂ, ಮಂಗಳಾರತಿ ತಗೊಳ್ಳ ಅಂದ್ರು ಅದೆಲ್ಲ ಉಲ್ಟಾ ಆಯ್ತು. ಸುಪ್ರೀಂಕೋರ್ಟ್ ಗೆ ಹಹೋಗಿ ಛಿಮಾರಿ ಹಾಕಿಸಿಕೊಂಡ್ರು. ಸಾಧಕರು ನಡೆದುಕೊಂಡ ರೀತಿ ಹಿಂದುಗಳೆ ಮೆಚ್ಚಿದ್ದಾರೆ. ಅವರಿಗೆ ಶೆಮ್ ಆಯ್ತು, ದಿನೇ ದಿನೇ ಬಿಜೆಪಿ ಕುಸಿಯುತ್ತಿದ್ದಾರೆ ಎಂದರು.
ಆರ್.ಅಶೋಕ್ ಪ್ರಶ್ನೆಗೆ ಉತ್ತರ ಕೊಡಲ್ಲ. ಕೇಂದ್ರ ಸರ್ಕಾರ ಯಾವುದೋ ಒಂದು ಇಳಿಕೆ ಮಾಡೋದಲ್ಲ. ಕೇಂದ್ರ ರೀತಿ ನಾವು ಪ್ರತಿ ವರ್ಷ ಟ್ಯಾಕ್ಸ್ ಹಾಕ್ತಿಲ್ಲ. ಕೇಂದ್ರದ ರೀತಿ ಮೀತಿ ಮೀರಿ ಏರಿಕೆ ಮಾಡಲ್ಲ ಎಂದರು.
ವರದಿ; ಗಿರೀಶ್ ರಾಜ್, ಮಂಡ್ಯ
JOB ALERT: ರಾಜ್ಯದಲ್ಲಿ ಖಾಲಿ ಇರುವ ‘600 ಸ್ಟಾಫ್ ನರ್ಸ್ ಹುದ್ದೆ’ಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ