ಬೆಂಗಳೂರು: ಇಂದು ರಾಜ್ಯ ಸರ್ಕಾರವು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಜಿ.ಎಸ್ ಸಂಗ್ರೇಶಿ ಅವರನ್ನು ನೇಮಕವನ್ನು ಹಿಂಪಡೆದಿರುವಂತ ಸರ್ಕಾರವು, ಅವರನ್ನು ಕರ್ನಾಟಕ ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (ಕರ್ನಾಟಕ ಕಾಯ್ದೆ, 1993) ರ ಸೆಕ್ಷನ್ 308 ರ ಉಪ ವಿಭಾಗ (1) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಲು, ಗೌರವಾನ್ವಿತ ರಾಜ್ಯಪಾಲರು ಈ ಮೂಲಕ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಸಂಗ್ರೇಶಿ ಅವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಅಂತ ತಿಳಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ (ರಾಜ್ಯ ಚುನಾವಣಾ ಆಯುಕ್ತರ ಸೇವಾ ಷರತ್ತುಗಳು) ನಿಯಮಗಳು, 2006 ರ ನಿಯಮ 4 ರ ಅಡಿಯಲ್ಲಿ ಆಯುಕ್ತರ ಅಧಿಕಾರಾವಧಿ ಆಯುಕ್ತರಾಗಿ ನೇಮಕಗೊಂಡ ದಿನಾಂಕದಿಂದ ಐದು ವರ್ಷಗಳು ಅಥವಾ ಅವರು 65 ವರ್ಷ ವಯಸ್ಸಾಗುವವರೆಗೆ ಇರುತ್ತದೆ ಎಂದು ಹೇಳಿದೆ.

ಒಟ್ಟಾರೆಯಾಗಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ಜಿ.ಎಸ್. ಸಂಗ್ರೇಶಿ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ. ಸಂಗ್ರೇಶಿ ಅವರನ್ನು ಕರ್ನಾಟಕ ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಕ ಮಾಡಿ ಸರ್ಕಾರದ ಶಿಫಾರಿಸಿನ ಮೇರೆಗೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

BIG NEWS: ‘ರಾಕೇಶ್ ಶೆಟ್ಟಿ’ ವಿರುದ್ಧ ‘ರೌಡಿ ಶೀಟರ್’ ಓಪನ್ ಮಾಡಿ: ‘ಗಿರೀಶ್ ಮಟ್ಟೆಣ್ಣವರ’ ಆಗ್ರಹ

BIG NEWS: ‘ರಾಕೇಶ್ ಶೆಟ್ಟಿ’ ವಿರುದ್ಧ ‘ರೌಡಿ ಶೀಟರ್’ ಓಪನ್ ಮಾಡಿ: ‘ಗಿರೀಶ್ ಮಟ್ಟೆಣ್ಣವರ’ ಆಗ್ರಹ

Share.
Exit mobile version