ಚಾಮರಾಜನಗರ: ಜಿಲ್ಲೆಯಲ್ಲಿ ಆರಕ್ಷತೆಗೆ ತೆರವ ವೇಳೆಯಲ್ಲಿ ವರನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಂತ ಘಟನೆ ನಡೆದಿದೆ. ಗಾಯಗೊಂಡಿದ್ದಂತ ರವೀಶ್ ಎಂಬಾತನನ್ನು ಭೇಟಿಯಾಗಲು ಆಸ್ಪತ್ರೆಗೆ ವಧು ನಯನಾ ಭೇಟಿಯಾಗೋದಕ್ಕೆ ಹೋದಾಗ ಅವರ ಭೇಟಿಗೆ ನಿರಾಕರಿಸಿರುವಂತ ಘಟನೆ ನಡೆದಿದೆ.
ಚಾಮರಾಗನಗರದ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದಂತ ವರ ರವೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ವಧು ನಯನಾ ಭೇಟಿಯಾಗೋದಕ್ಕೆ ತೆರಳಿದ್ದರು. ಆದರೇ ಆಕೆಯನ್ನು ಭೇಟಿಯಾಗೋದಕ್ಕೆ ರವೀಶ್ ನಿರಾಕರಿಸಿದ್ದಾರೆ. ಆದರೇ ನಯನಾ ಮಾತ್ರ ನನ್ನನ್ನೇ ಮದುವೆಯಾಗುವಂತೆ ಆತನನ್ನು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆಗೆ ರವೀಶ್ ಒಪ್ಪದ ಹಿನ್ನಲೆಯಲ್ಲಿ ವದು ನಯನಾ ವಾಪಾಸ್ ತೆರಳಿದ್ದಾರೆ.
ಇನ್ನೂ ವರ ರವೀಶ್ ಅವರನ್ನು ಅಡ್ಡಗಟ್ಟಿ ಚಾಕು ಇರಿದಂತ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ. ಆರೋಪಿಗಳಿಗಾಗಿ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಪೊಲೀಸರ ತನಿಖೆಯ ವೇಳೆಯಲ್ಲಿ ವಧುವಿನ ಪ್ರಿಯಕರನೇ ಆರತಕ್ಷತೆಗೆ ತೆರಳುತ್ತಿದ್ದಂತ ವರನ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಇರಿದು ಕೃತ್ಯ ಎಸಗಿರೋದು ದೃಢಪಟ್ಟಿದೆ. ಸದ್ಯದಲ್ಲೇ ಆತನನ್ನು ಬಂಧಿಸುವುದಾಗಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಹೇಳಿದ್ದಾರೆ.
GOOD NEWS: ರಾಜ್ಯದ ‘ಸರ್ಕಾರಿ ಕಾಲೇಜು’ಗಳಲ್ಲಿ ಖಾಲಿ ಇರುವ ‘2000 ಬೋಧಕರ ಹುದ್ದೆ’ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್








