ಬೆಳಗಾವಿ: ಜಿಲ್ಲೆಯ ಗಡಿ ಭಾಗದಲ್ಲಿನ ಅಥಣಿಯಲ್ಲಿರುವಂತ ಕುಡನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಗ್ರೇನೆಡ್ ಪತ್ತೆಯಾಗಿದೆ. ಇದು ಬಾಂಬ್ ಎಂಬುದು ಸಹ ಅರಿಯದಂತ ವಿದ್ಯಾರ್ಥಿಗಳು ಮಾತ್ರ, ಅದರಲ್ಲೇ ಆಟ ಆಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ಕಂಡಂತ ಶಿಕ್ಷಕರು ಅದು ಬಾಂಬ್ ಎಂಬುದಾಗಿ ತಿಳಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

BREAKING NEWS: ಕಾಮನ್ವೆಲ್ತ್ ಗೇಮ್ಸ್ 2022: ಟಿ20ಐ ಗ್ರೂಪ್ ಹಂತದಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು, ಅಥಣಿಯ ಜತ್ತ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹ್ಯಾಂಡ್ ಗ್ರೇನೆಡ್ ಅನ್ನು ಪೊಲೀಸರು ವಶಕ್ಕೆ ಪಡೆದು, ಇಡೀ ಗ್ರಾಮವನ್ನೇ ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಮತ್ತೆಲ್ಲೂ ಸ್ಪೋಟಕ ವಸ್ತುಗಳ ಪತ್ತೆಯಾಗಿಲ್ಲ.

BIG NEWS: ಆ.6ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ

Share.
Exit mobile version