ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) 5 ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.
ಭಾರತ ಸಂವಿಧಾನದ ಅನುಚ್ಛೇದ 243 ಜೆಡ್ ಎ ಯೊಂದಿಗೆ ಓದಲಾದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024ರ ಪ್ರಕರಣ 34 ಮತ್ತು ಗ್ರೇಟರ್ ಬೆಂಗಳೂರು ಆಡಳಿತ (ಚುನಾವಣೆ) ನಿಯಮಗಳು, 2025ರ ನಿಯಮ 3ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಿಗೆ ಚುನಾವಣೆಯನ್ನು ನಡೆಸುವ ಸಲುವಾಗಿ ನಿಗದಿತ ಅಧಿಕಾರಿಗಳನ್ನು ನೇಮಕ ಮಾಡಿ ಈ ಕೆಳಗಿನಂತೆ ಆದೇಶ ಹೊರಡಿಸಿದೆ.
ರಾಜ್ಯ ಚುನಾವಣಾ ಆಯೋಗವು ಕೋಷ್ಟಕದ ಭಾಗ-1ರ ಅಂಕಣ (1) ರಲ್ಲಿ ನಮೂದಿಸಿರುವ ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇವರನ್ನು ಅವರ ಹೆಸರಿನ ಮುಂದೆ ಅಂಕಣ (2) ರಲ್ಲಿ ಹೆಸರಿಸಿರುವ ನಗರ ಪಾಲಿಕೆಗಳ ವ್ಯಾಪ್ತಿಗಳಿಗೊಳಪಟ್ಟ ಅಂಕಣ (3) ರಲ್ಲಿರುವ ವಾರ್ಡುಗಳನ್ನೊಳಗೊಂಡ ಪ್ರದೇಶಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿಗಳೆಂದು (District Election Officer).
ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಸಂಬಂಧಿತ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸದರಿಯವರಿಗೆ ಸಹಾಯ ಮಾಡಲು ಕೋಷ್ಟಕದ ಭಾಗ-2ರ ಅಂಕಣ (1) ರಲ್ಲಿ ನಮೂದಿಸಿರುವ ಆಯುಕ್ತರು, ಬೆಂಗಳೂರು ಕೇಂದ್ರ/ ಉತ್ತರ/ ದಕ್ಷಿಣ/ ಪೂರ್ವ/ ಪಶ್ಚಿಮ ನಗರ ಪಾಲಿಕೆ, ಇವರುಗಳನ್ನು ಅಂಕಣ (2) ರಲ್ಲಿ ಹೆಸರಿಸಿರುವ ನಗರ ಪಾಲಿಕೆಗಳ ವ್ಯಾಪ್ತಿಗಳಿಗೊಳಪಟ್ಟ ಅಂಕಣ (3) ರಲ್ಲಿರುವ ವಾರ್ಡುಗಳನ್ನೊಳಗೊಂಡ ಪ್ರದೇಶಕ್ಕೆ ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳೆಂದು (Additional District Election Officer) ನೇಮಿಸಿ ಆದೇಶಿಸಿದೆ.