ವಿಜಯನಗರ: ಪರೀಕ್ಷೆ ಮುಗಿಸಿ ತಾತನ ಜೊತೆ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು, ತಾತ ಮತ್ತು ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ.
ಘಟನೆಯ ವಿವರ: ಕೂಡ್ಲಿಗಿ ಪಟ್ಟಣದ ಅಂಬೇಡ್ಕರ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸೃಷ್ಠಿ(14) ಮತ್ತು ಆಕೆಯ ತಾತ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಸೃಷ್ಠಿ ಇಂದು ತನ್ನ ಶಾಲೆಯ ಪರೀಕ್ಷೆಯನ್ನು ಮುಗಿಸಿ ತಾತನ ಜೊತೆ ಬೈಕ್‌ನಲ್ಲಿ ಕರ್ನಾರಹಟ್ಟಿಗೆ ತೆರಳುತ್ತಿದ್ದಳು. ಈ ವೇಳೆ ಕ್ಯಾಸನಕೆರೆ ಬಳಿ ಹೆದ್ದಾರಿಯಲ್ಲಿ ರೈತರು ರಾಗಿ ಒಣಗಿಸಲು ಹಾಕಿದ್ದರು. ರಾಗಿಯ ಮೇಲೆ ಬೈಕ್ ಚಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ.
ಲಾರಿ ಹರಿದು ಸಾವು: ಬೈಕ್‌ನಿಂದ ಕೆಳಕ್ಕೆ ಬಿದ್ದ ಸೃಷ್ಠಿಯ ತಲೆಯ ಮೇಲೆ ವೇಗವಾಗಿ ಬಂದ ಲಾರಿ ಹರಿದಿದೆ. ಘಟನೆಯ ತೀವ್ರತೆಗೆ ತಾತ ಮತ್ತು ಮೊಮ್ಮಗಳು ಇಬ್ಬರೂ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಧಾನ್ಯಗಳನ್ನು ಒಣಗಿಸಲು ಹಾಕುತ್ತಿರುವುದೇ ಈ ಅವಘಡಕ್ಕೆ ನೇರ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಧಾನ್ಯ ಒಣಗಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾಗರ ಗ್ರಾಮಾಂತರದಲ್ಲಿ ಜಾನುವಾರು ಕಳ್ಳರ ಹಾವಳಿ: ತಡೆಗೆ ಪೊಲೀಸ್ ಇಲಾಖೆ ಖಡಕ್ ಕ್ರಮ, ಈ ಎಚ್ಚರಿಕೆ
ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ








