ತುಮಕೂರು: ಇ-ಸ್ವತ್ತು ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 8,000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿಂಕೆರೆಯ ಉದ್ಯಮಿ ಟಿ.ಕೆ ಮೊಹಮ್ಮದ್ ಎಂಬುವರು ಇ-ಸ್ವತ್ತಿಗಾಗಿ ಅರ್ಜಿಯನ್ನು ತೋವಿಂಕೆರೆ ಗ್ರಾಮ ಪಂಚಾಯ್ತಿಗೆ ಸಲ್ಲಿಸಿದ್ದರು. ಇ-ಸ್ವತ್ತು ಮಾಡಿಕೊಡೋದಕ್ಕೆ ತೋವಿಂಕೆರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸುಮಾ, ಬಿಲ್ ಕಲೆಕ್ಟರ್ ಮಾರುತಿ ರೂ.8,000 ಲಂಚ ನೀಡಲು ಬೇಡಿಕೆ ಇಟ್ಟಿದ್ದರು.
ಈ ಹಿನ್ನಲೆಯಲ್ಲಿ ತುಮಕೂರು ಲೋಕಾಯುಕ್ತ ಎಸ್ಪಿಗೆ ಟಿ.ಕೆ ಮೊಹಮ್ಮದ್ ದೂರು ನೀಡಿದ್ದರು. ಇಂದು ಇ-ಸ್ವತ್ತು ನೀಡಲು 8,000 ಲಂಚದ ಹಣವನ್ನು ತೋವಿಂಕೆರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಸುಮಾ, ಬಿಲ್ ಕಲೆಕ್ಟರ್ ಮಾರುತಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ ರೆಡ್ ಹ್ಯಾಂಡ್ ಇಬ್ಬರನ್ನು ಹಿಡಿದಿದ್ದಾರೆ.
ಈ ಸಂಬಂಧ 08/2025 ಯು/ಎಸ್ 7 (ಎ) ಪಿಸಿ ಆಕ್ಟ್ 1988 (ತಿದ್ದುಪಡಿ ಕಾಯ್ದೆ 2018) ರಂತೆ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಪ್ರವಾಸಿಗರ ಗಮನಕ್ಕೆ: ಅ.21ರ ದೀಪಾವಳಿ ಹಬ್ಬದಂದು ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಓಪನ್
BIG NEWS: ರಾಜ್ಯದ ‘ಸರ್ಕಾರಿ ಶಾಲಾ ಆವರಣ’ದಲ್ಲಿ ಖಾಸಗಿ ಕಾರ್ಯಕ್ರಮ ಬ್ಯಾನ್: 2013ರಲ್ಲೇ ಆದೇಶ, ಪತ್ರ ವೈರಲ್