ಚಿಕ್ಕಬಳ್ಳಾಪುರ: ಜಿಲ್ಲಿಯೆಲ್ಲಿ ಗ್ರಾಮಪಂಚಾಯ್ತಿ ಅಧ್ಯಕ್ಷನನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ಚರಂಡಿಯಲ್ಲಿ ಬಿಸಾಕಿ ಹೋಗಿರುವಂತ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಸನಹಳ್ಳಿಯ ಹಾರೋಬಂಡೆ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷನ ಪುತ್ರನನ್ನು ಬರ್ಬರವಾಗಿ ಕೊಲೆ ಮಾಡಿ ಚರಂಡಿಗೆ ಬಿಸಾಕಿ ದುಷಅಕರ್ಮಿಗಳು ಪರಾರಿಯಾಗಿದ್ದಾರೆ.
ಹಾರೋಬಂಡೆ ಗ್ರಾಮದ 30 ವರ್ಷದ ಮಾರುತೇಶ್ ಎಂಬಾತನನ್ನು ಕೊಲೆ ಮಾಡಿ, ಚರಂಡಿಯಲ್ಲಿ ಬಿಸಾಕಿ ಹೋಗಿದ್ದಾರೆ. ಪಾಳು ಬಿದ್ದ ಬಡಾವಣೆಯೊಂದರ ಚರಂಡಿಯಲ್ಲಿ ಮಾರುತೇಶ್ ಶವಪತ್ತೆಯಾಗಿದೆ.
ಪ್ಲಂಬರ್ ಹಾಗೂ ಎಲೆಕ್ಟ್ರಿಕ್ ಕೆಲಸವನ್ನು ಮಾರುತೇಶ್ ಮಾಡುತ್ತಿದ್ದರು. ಕುಡಿದ ಅಮಲಿನಲ್ಲಿ ಜೊತೆಗಾರರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲೇ ಬೈಕ್ ಹಾಗೂ ಮದ್ಯದ ಬಾಟಲಿ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಅಂದಹಾಗೇ ಕಳೆದ ಮೂರು ದಿನಗಳ ಹಿಂದೆ ಮಾರುತೇಶ್ ನಾಪತ್ತೆಯಾಗಿದ್ದರು. ಇಂದು ಅವರು ಕೊಲೆಯಾದಂತ ಸ್ಥಿತಿಯಲ್ಲಿ ಹಾರೋಬಂಡೆ ಗ್ರಾಮದ ಬಳಿಯ ಪಾಳು ಬಿದ್ದ ಬಡಾವಣೆಯೊಂದರ ಚರಂಡಿಯಲ್ಲಿ ಪತ್ತೆಯಾಗಿದ್ದಾರೆ.
BREAKING : ನಟ ದರ್ಶನ್ ಗೆ ರಿಲೀಫ್ : ಫೆ.10 ರವರೆಗೆ ಮೈಸೂರಿನಲ್ಲಿರಲು ಅನುಮತಿ ನೀಡಿ ಕೋರ್ಟ್ ಆದೇಶ.!
BREAKING: ನಾಳೆಯ ‘KMF ನೌಕರ’ರ ಮುಷ್ಕರ ಮುಂದೂಡಿಕೆ: ‘ನಂದಿನಿ ಉತ್ಪನ್ನ’ಗಳ ಮಾರಾಟದಲ್ಲಿ ವ್ಯತ್ಯಯವಿಲ್ಲ