ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ನೌಕರರು ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದರು. ಇವರೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ, ಬೇಡಿಕೆ ಈಡೇರಿಕೆಯ ಬಗ್ಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಗ್ರಾಮ ಪಂಚಾಯ್ತಿ ನೌಕರರ ಮುಷ್ಕರ ವಾಪಾಸ್ ಪಡೆಯಲಾಗಿದ್ದು, ನಾಳೆಯಿಂದ ಕೆಲಸಕ್ಕೆ ಹಾಜರಾಗಲಿದ್ದಾರೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು ಮಾಹಿತಿ ನೀಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವೃಂದದ ಸಂಘಗಳ ಎಲ್ಲ ಪ್ರತಿಭಟನಾ ನಿರತರು ತಮ್ಮ ತಮ್ಮ ಜಿಲ್ಲೆಗಳಿಗೆ ಹಿಂದಿರುಗಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಳೆಯಿಂದ ತಮ್ಮ ಕರ್ತವ್ಯಗಳ ಮೇಲೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಈ ತಿಂಗಳ ಆಗಸ್ಟ್.10ರಂದು ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವೃಂದದ ಸಂಘಗಳ ಪ್ರತಿನಿಧಿಗಳು ದಿನಾಂಕ 04.10.2024ರಂದು ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸುದೀರ್ಘ ಸಭೆಯಲ್ಲಿ ಭಾಗವಹಿಸಿ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದು, ಸರ್ಕಾರದ ಕಡೆಯಿಂದ ಸಕಾರಾತ್ಮಕವಾಗಿ ಸ್ಪಂದಿಸಲಾಗಿರುವ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಅಪರ ಮುಖ್ಯ ಕಾರ್ದರ್ಶಿಗಳು ಹೇಳಿದ್ದಾರೆ.
ನೌಕರರ ಮುಷ್ಕರಕ್ಕೂ ಮುನ್ನ 30.09.2024ರಂದು ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಕರೆದ 02 ಸಭೆಗಳಿಗೆ ನೌಕರರ ವೃಂದದ ಸಂಘಗಳಿಂದ ಯಾರೂ ಹಾಜರಾಗದ ಕಾರಣ, ಸಚಿವರ ನಿರ್ದೇಶನದಂತೆ 01.10.2024ರಂದು ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು, ಈ ಸಭೆಗೂ ಸಹ ಸಂಘಗಳಿಂದ ಯಾರೂ ಹಾಜರಾಗಿರುವುದಿಲ್ಲ, ಆದಾಗ್ಯೂ, ಸಚಿವರು ನೌಕರರ ಬೇಡಿಕೆಗಳ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಕಾರಾತ್ಮಕವಾಗಿ ಚರ್ಚಿಸಿರುತ್ತಾರೆ ಎಂದೂ ಹೇಳಿರುವ ಉಮಾ ಮಹದೇವನ್ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಪ್ರತಿಭಟನಾ ಸ್ಥಳಕ್ಕೆ ತಾವು 04.10.2024ರಂದು ಆಯುಕ್ತರೊಂದಿಗೆ ಭೇಟಿ ನೀಡಿ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಸ್ವೀಕರಿಸಿ ಬೇಡಿಕೆಗಳ ಕುರಿತು ಅವರ ಜೊತೆ ಚರ್ಚಿಸಿರುವುದಾಗಿಯೂ ತಿಳಿಸಿರುತ್ತಾರೆ.
ಅಕ್ಟೋಬರ್.7ರಿಂದ ಜಿಲ್ಲಾ ಪಂಚಾಯ್ತಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿಕೆ
ಇಂದು ಆರ್.ಡಿ.ಪಿ.ಆರ್ ಕುಟುಂಬದ ಎರಡನೇ ದಿನದ ಹೋರಾಟವು ಯಶಸ್ವಿಯಾಗಿ ಪೂರ್ಣಗೊಂಡಿತು. ಆದರೆ ಸರ್ಕಾರದ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದ ಕಾರಣ ರಾಜ್ಯ ಮಟ್ಟದ ಎಲ್ಲಾ ವೃಂದ ಸಂಘಗಳ ತೀರ್ಮಾನದಂತೆ ಸದರಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಅಕ್ಟೋಬರ್ 7 ರ ಸೋಮವಾರದಿಂದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಎದುರು ಮುಂದುವರೆಸಲು ತೀರ್ಮಾನಿಸಲಾಗಿದೆ. ಎಲ್ಲಾರೂ ಈ ನಿರ್ಧಾರಕ್ಕೆ ಬದ್ಧರಾಗಿ ಬೆಂಬಲಿಸಿ ಮುಷ್ಕರದಲ್ಲಿ ತಪ್ಪದೇ ಭಾಗವಹಿಸುವ ಮೂಲಕ ಸಹಕರಿಸಬೇಕೆಂದು KSPDOWA ಅಧ್ಯಕ್ಷರು ಮನವಿ ಮಾಡಿದ್ದಾರೆ.
ವಿ.ಸೂ: ಇಂದು ಅಕ್ಟೋಬರ್ 7 ರ ಸೋಮವಾರದಿಂದ ಕೂಡ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಿನ್ನೆಯಂತೆ ಯಾವುದೇ ಸೇವೆಗಳನ್ನು ಒದಗಿಸುವಂತಿಲ್ಲ. ಗ್ರಾಮ ಪಂಚಾಯಿತಿ ಕಚೇರಿಗೆ ಹೋಗುವಂತಿಲ್ಲ. ವಿಶೇಷವಾಗಿ ಗ್ರಾಮ ಪಂಚಾಯಿತಿ ನೀರುಘಂಟಿಗಳು ಮೊಬೈಲ್ ಆಪ್ ನಲ್ಲಿ ಹಾಜರಾತಿ ನೀಡುವಂತಿಲ್ಲ ಪಿಡಿಓ ಸಹೋದ್ಯೋಗಿಗಳು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕೋರಿದ್ದಾರೆ. ಈ ಮೂಲಕ ಮುಷ್ಕರ ವಾಪಾಸ್ ಆಗಿಲ್ಲ, ನಾಳೆಯಿಂದ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಮುಂದುವರೆಯುವುದಾಗಿ ಸಂಘವು ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ಸಾವರ್ಕರ್ ಮಾನನಷ್ಟ ಮೊಕದ್ದಮೆ’: ರಾಹುಲ್ ಗಾಂಧಿಗೆ ಪುಣೆ ಕೋರ್ಟ್ ಸಮನ್ಸ್
ಶಿವಮೊಗ್ಗ ಜನತೆ ಗಮನಕ್ಕೆ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut