ಹಾಸನ: ರಾಜ್ಯಾಧ್ಯಂತ ಇರುವಂತ ಇಂದಿರಾ ಕ್ಯಾಂಟೀನ್ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಲ್ಲದೇ ಆಯಾ ಪ್ರಾದೇಶಿಕ ಆಹಾರ ವಿತರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಆಹಾರ ಪ್ರಿಯರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಪೌರಾಡಳಿತ ಇಲಾಖೆಯ ಸಚಿವ ರಹೀಂ ಖಾನ್ ಅವರು, ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಆಯಾ ಪ್ರಾದೇಶಿಕ ಆದಾರಗಳನ್ನು ನೀಡೋದಕ್ಕೆ ಚಿಂತನೆ ನಡೆಸಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ಬಗ್ಗೆ ಸಿಎಂ ಸಿದ್ಧರಾಮಯ್ಯ ವಿಶೇಷ ಕಾಳಜಿ ವಹಿಸಿದ್ದಾರೆ. ಈಗಿರುವ ಇಂದಿರಾ ಕ್ಯಾಂಟೀನ್ ಗಳ ಜೊತೆಗೆ ಹೆಚ್ಚುವರಿ ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತದೆ. ಅದರಲ್ಲೂ ಬಡವರು, ಆಸ್ಪತ್ರೆಗಳಿರುವ ಕಡೆ ಹೆಚ್ಚುವರಿಯಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತದೆ ಎಂಬುದಾಗಿ ತಿಳಿಸಿದರು.
ಅಂದಹಾಗೇ ಈಗಾಗಲೇ ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರದ ಮೆನೂ ಬದಲಾವಣೆ ಮಾಡಿದೆ. ಶುಚಿ ರುಚಿಗೆ ಮೊದಲ ಆದ್ಯತೆಯನ್ನು ನೀಡಿ, ಆಹಾರ ವಿತರಣೆ ಮಾಡಲಾಗುತ್ತಿದೆ. ಇದೀಗ ರಾಜ್ಯಾಧ್ಯಂತ ಇಂದಿರಾ ಕ್ಯಾಂಟೀನ್ ಮೇಲ್ದರ್ಜೆಗೆ ಏರಿಸೋ ಮೂಲಕ, ಪ್ರಾದೇಶಿಕ ಆಹಾರಕ್ಕೂ ಆದ್ಯತೆ ನೀಡಲಾಗುತ್ತಿದೆ.
ಗಮನಿಸಿ: ಜ.28ರಂದು ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ, ಈ ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ
BREAKING: ಗದಗದಲ್ಲಿ ‘ಸರ್ಕಾರಿ ಬಸ್ ಹಾಗೂ ಲಾರಿ’ ನಡುವೆ ಭೀಕರ ಅಪಘಾತ: ಮೂವರು ಸಾವಿನ ಶಂಕೆ