Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಧ್ಯಪ್ರಾಚ್ಯ ಬಿಕ್ಕಟ್ಟು: ಏನಿದು ‘ಎನರ್ಜಿ ಲಾಕ್‌ಡೌನ್’? ಭಾರತಕ್ಕೂ ತಟ್ಟಲಿದೆಯೇ ಇದರ ಬಿಸಿ?

26/03/2026 10:32 AM

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

26/03/2026 10:29 AM

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ರಿಲೀಫ್ : ಸಣ್ಣಪುಟ್ಟ `ಕ್ರಿಮಿನಲ್ ಕೇಸ್‌’ ಗಳಿದ್ದರೂ ಸರ್ಕಾರಿ ಕೆಲಸ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

26/03/2026 10:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರದ ಕುಮ್ಮಕ್ಕೂ ಇದೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ
KARNATAKA

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರದ ಕುಮ್ಮಕ್ಕೂ ಇದೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

By kannadanewsnow0925/01/2025 6:07 PM

ಬೆಂಗಳೂರು: ಮೈಕ್ರೋ ಫೈನಾನ್ಸ್ ದಂಧೆಗೆ ಸರಕಾರದ ಕುಮ್ಮಕ್ಕೂ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿನವರೆಗೆ ಮುಂದುವರೆಯುತ್ತಿರಲಿಲ್ಲ; ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅನೇಕರ ಮಾರಣಹೋಮ ಆದ ಬಳಿಕ ಸರಕಾರವು ಎಚ್ಚತ್ತು ಇವತ್ತು ಒಂದು ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ತರುವ ಮತ್ತು ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ ಎಂದರು.

ಮೈಕ್ರೋ ಫೈನಾನ್ಸ್‍ಗಳ ಸಮಸ್ಯೆ ಕುರಿತು ಅನೇಕ ಮುಖಂಡರು ಗಮನ ಸೆಳೆದರೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಕೊನೆಗೂ ಇವತ್ತು ಒಂದು ತೀರ್ಮಾನಕ್ಕೆ ಬಂದಿದೆ. ಫೈನಾನ್ಸ್ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ; ಕಾಂಗ್ರೆಸ್ ಸರಕಾರದ ಹಿತದೃಷ್ಟಿಯಿಂದ ಅಲ್ಲ ಎಂದು ತಿಳಿಸಿದರು.

ಮಂತ್ರಿಗಳು, ಶಾಸಕರಿಂದ ಆನ್‍ಲೈನ್ ಗೇಮ್ಸ್ ಕಂಪೆನಿ

ಮೈಕ್ರೋ ಫೈನಾನ್ಸ್‍ನಲ್ಲಿ ಆಗುವ ಅನಾಹುತಕ್ಕಿಂತ 10ರಷ್ಟು ಅನಾಹುತಗಳು ಆನ್‍ಲೈನ್ ಗೇಮ್ಸ್ ಮೂಲಕ ಆಗುತ್ತಿದೆ ಎಂದು ಅವರು ತಿಳಿಸಿದರು. ಸರಕಾರದ ಕೆಲವು ಮಂತ್ರಿಗಳು, ಶಾಸಕರು ಆನ್‍ಲೈನ್ ಗೇಮ್ಸ್ ಕಂಪೆನಿಗಳನ್ನು ಮಾಡಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅನೇಕ ಯುವಕರು ಬೀದಿಪಾಲಾಗುತ್ತಿದ್ದಾರೆ. ರಮ್ಮಿ ಆಟದ ಮೂಲಕ ಸುಲಭದಲ್ಲಿ ಹಣ ಬರುವ ಸಾಮಾಜಿಕ ಜಾಲತಾಣದ ಜಾಹೀರಾತುಗಳನ್ನು ನಂಬಿ ಜನರ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಜನರು ಗೇಮ್‍ನಲ್ಲಿ ಸೋತ ಬಳಿಕ ಕಳ್ಳತನ ಮಾಡಿ ಆ ದುಡ್ಡು ಕಟ್ಟುತ್ತಾರೆ. ಇವತ್ತು ದರೋಡೆಗಳು, ಕಳ್ಳತನಗಳು ಇದೇ ಕಾರಣಕ್ಕಾಗಿ ಆಗುತ್ತಿವೆ ಎಂದು ತಿಳಿಸಿದರು.

ಇದರ ಬೇರು ಹುಡುಕಬೇಕಿದೆ. ಆನ್‍ಲೈನ್ ಗೇಮ್ ಕಾರಣದಿಂದ ಕಳ್ಳತನ, ದರೋಡೆ ಆಗುತ್ತಿದೆÉಂದು ವಿಶ್ಲೇಷಿಸಿದರು. ಅನೇಕರು ಕೆಲಸ ಬಿಟ್ಟು ಈ ಗೇಮ್ ಆಡುತ್ತಿದ್ದಾರೆ. ಇನ್ನೂ ಅನೇಕರು ಹೆಚ್ಚು ಸಾಲ ಮಾಡಿಕೊಂಡು ಕಟ್ಟಲಾಗದೆ ಪ್ರಾಣತ್ಯಾಗ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಇದರ ಬಗ್ಗೆಯೂ ತೀಕ್ಷ್ಣ ಕ್ರಮ ಕೈಗೊಳ್ಳುವಂತೆ ಕೋರಿದರು. ಆನ್‍ಲೈನ್ ಗೇಮ್‍ನಲ್ಲಿ ಇರುವವರ ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಇದು ಹಗೆತನದ ರಾಜಕೀಯವಲ್ಲವೇ?

ಯದುವೀರ್ ಅವರು ಬಿಜೆಪಿ ಸಂಸದರಾಗಿದ್ದು, ಅವರ ಆಸ್ತಿಗಳ ಮೇಲೆ ಕಾಂಗ್ರೆಸ್ ಸರಕಾರ ಕಣ್ಣು ಹಾಕಿದೆ. ಒಂದು ಕಡೆ ಚಾಮುಂಡೇಶ್ವರಿ ಬೆಟ್ಟಕ್ಕೆ, ಅಲ್ಲಿನ ಆಸ್ತಿಗಳ ಮೇಲೆ ಕಣ್ಣು ಹಾಕಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನ ಅರಮನೆ ಮೇಲೆ ಕೂಡ ಕಣ್ಣು ಹಾಕಿದ್ದಾರೆ ಎಂದು ಆರೋಪಿಸಿದರು. ಅವರು ಕಾಂಗ್ರೆಸ್ಸಿನ ಸಂಸದರಾಗಿದ್ದರೆ ಅವರ ಆಸ್ತಿಗಳ ಮೇಲೆ ಕಣ್ಣು ಹಾಕುತ್ತಿರಲಿಲ್ಲ ಎಂದು ನುಡಿದರು. ಇದು ಹಗೆತನದ ರಾಜಕಾರಣವಲ್ಲವೇ ಎಂದು ಕೇಳಿದರು.

ಇದಕ್ಕೆ ಸುಗ್ರೀವಾಜ್ಞೆ ಬೇಕಿತ್ತೇ? ಸದಾಶಿವನಗರದಲ್ಲಿ ಒಂದಡಿ ಜಾಗಕ್ಕೆ ಒಂದು ಲಕ್ಷ ಇರಬಹುದು. ಇಂಥ ಪರಿಸ್ಥಿತಿಯಲ್ಲಿ ನೀವು ಯಾರ ಆಸ್ತಿಗೆ ಕಣ್ಣು ಹಾಕುತ್ತಿದ್ದೀರಿ? ಇದು ಹಗೆತನದ ಪರಮಾವಧಿಯ ರಾಜಕಾರಣ ಎಂದು ಟೀಕಿಸಿದರು.

BIG NEWS: ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ಗೆ ಸರ್ಕಾರ ಬ್ರೇಕ್: ಬಲವಂತವಾಗಿ ಸಾಲ ವಸೂಲಿ ಮಾಡೋರ ವಿರುದ್ಧ ‘ಕ್ರಿಮಿನಲ್ ಕೇಸ್’ ಫಿಕ್ಸ್

BREAKING : ರಾಜ್ಯದಲ್ಲಿ ಸಾಲಗಾರರ ಕಾಟಕ್ಕೆ ಸರಣಿ ಆತ್ಮಹತ್ಯೆ : ಚಾಮರಾಜನಗರದಲ್ಲಿ ಪತಿ ಮಾಡಿದ ಸಾಲಕ್ಕೆ ಪತ್ನಿ ಸೂಸೈಡ್!

Share. Facebook Twitter LinkedIn WhatsApp Email

Related Posts

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

26/03/2026 10:29 AM1 Min Read

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM1 Min Read

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM1 Min Read
Recent News

ಮಧ್ಯಪ್ರಾಚ್ಯ ಬಿಕ್ಕಟ್ಟು: ಏನಿದು ‘ಎನರ್ಜಿ ಲಾಕ್‌ಡೌನ್’? ಭಾರತಕ್ಕೂ ತಟ್ಟಲಿದೆಯೇ ಇದರ ಬಿಸಿ?

26/03/2026 10:32 AM

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

26/03/2026 10:29 AM

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ರಿಲೀಫ್ : ಸಣ್ಣಪುಟ್ಟ `ಕ್ರಿಮಿನಲ್ ಕೇಸ್‌’ ಗಳಿದ್ದರೂ ಸರ್ಕಾರಿ ಕೆಲಸ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

26/03/2026 10:24 AM

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಲವರ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಪುತ್ರಿ !

26/03/2026 10:20 AM
State News
KARNATAKA

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

By kannadanewsnow0526/03/2026 10:29 AM KARNATAKA 1 Min Read

ಚಾಮರಾಜನಗರ : ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ ಮುಂದುವರೆದಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಮತ್ತೆ ಕಾಣಿಸಿಕೊಂಡಿದ್ದು…

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM

ALERT : ಚಿನ್ನ ಖರೀದಿಸುವ ಮುನ್ನ ಎಚ್ಚರ: ಅಸಲಿ ಮತ್ತು ನಕಲಿ ಬಂಗಾರ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

26/03/2026 9:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.