ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ಏರಿಳಿತ ಮತ್ತು ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯ ನಡುವೆ, ಕೇಂದ್ರ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನದ (ATF) ರಫ್ತು ಸುಂಕವನ್ನು (Windfall Tax) ಗಣನೀಯವಾಗಿ ಹೆಚ್ಚಿಸಿದೆ. ಈ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹಿಂದೆ ಪ್ರತಿ ಲೀಟರ್ಗೆ ₹21.5 ಇದ್ದ ರಫ್ತು ಸುಂಕವನ್ನು ಈಗ ಬರೋಬ್ಬರಿ ₹55.5 ಕ್ಕೆ ಏರಿಸಲಾಗಿದೆ.ವಿಮಾನಗಳಿಗೆ ಬಳಸುವ ಇಂಧನದ ಮೇಲಿನ ಸುಂಕವನ್ನು ಪ್ರತಿ ಲೀಟರ್ಗೆ ₹29.5 ರಿಂದ ₹42 ಕ್ಕೆ ಹೆಚ್ಚಿಸಲಾಗಿದೆ.
ರಫ್ತು ಮಾಡಲಾಗುವ ಪೆಟ್ರೋಲ್ ಮೇಲಿನ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಇದು ಶೂನ್ಯವಾಗಿಯೇ ಮುಂದುವರಿಯಲಿದೆ.
ತಕ್ಷಣದಿಂದ ಜಾರಿ: ಏಪ್ರಿಲ್ 11 ರಂದು ಹೊರಡಿಸಲಾದ ಅಧಿಕೃತ ಆದೇಶದಂತೆ ಈ ಪರಿಷ್ಕೃತ ದರಗಳು ಶನಿವಾರದಿಂದಲೇ ಅನ್ವಯವಾಗಲಿವೆ.
ರಫ್ತು ಮಾಡುವುದಕ್ಕಿಂತ ಹೆಚ್ಚಾಗಿ ಭಾರತದೊಳಗಿನ ಗ್ರಾಹಕರಿಗೆ ಮತ್ತು ಕೈಗಾರಿಕೆಗಳಿಗೆ ಇಂಧನ ಸುಲಭವಾಗಿ ದೊರೆಯುವಂತೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದಾಗ ರಫ್ತುದಾರರು ಅತಿಯಾದ ಲಾಭ ಗಳಿಸುವುದನ್ನು ತಡೆದು, ಆ ಲಾಭವನ್ನು ತೆರಿಗೆಯ ರೂಪದಲ್ಲಿ ದೇಶದ ಬೊಕ್ಕಸಕ್ಕೆ ತರುವುದು ಸರ್ಕಾರದ ಗುರಿ.
ಪಶ್ಚಿಮ ಏಷ್ಯಾದಲ್ಲಿ (ಇಸ್ರೇಲ್-ಇರಾನ್ ಸಂಘರ್ಷ) ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇದನ್ನು ಎದುರಿಸಲು ಭಾರತ ಮುನ್ನೆಚ್ಚರಿಕೆ ವಹಿಸಿದೆ.








