ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಅನುಷ್ಠಾನವನ್ನು ಮಾಡಲಾಗಿದೆ. ಈ ಮೂಲಕ ಹಾವು ಕಡಿತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡವಳಿಯನ್ನು ಹೊರಡಿಸಲಾಗಿದ್ದು, ಕರ್ನಾಟಕದಲ್ಲಿ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು 2023-24 ರಲ್ಲಿ ಪ್ರಾರಂಭಿಸಿ, ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಇದರ ಯಶಸ್ವಿ ಅನುಷ್ಠಾನಕ್ಕಾಗಿ, ಮೇಲಿನ ಉಲ್ಲೇಖ (1) ರಲ್ಲಿ ಓದಲಾದ ಅಧಿಸೂಚನೆಯಲ್ಲಿ ಸರ್ಕಾರವು ಹಾವು ಕಡಿತದ ಪ್ರಕರಣಗಳು ಮತ್ತು ಹಾವು ಕಡಿತದಿಂದ ಸಂಭವಿಸುವ ವ್ಯಕ್ತಿಗಳ ಮರಣಗಳನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ, 2020 ರ ಪ್ರಕರಣ 3 ರ ಅಡಿಯಲ್ಲಿ “ಅಧಿಸೂಚಿತ ಕಾಯಿಲೆ” ಎಂದು ಘೋಷಿಸಿದೆ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ಇವರು ವಿಷಪೂರಿತ ಹಾವು ಕಡಿತಕ್ಕೆ ತುತ್ತಾದವರಿಗೆ ಸಕಾಲಿಕ ಮತ್ತು ಸೂಕ್ತ ಚಿಕಿತ್ಸೆಯನ್ನು ನೀಡದಿದ್ದಲ್ಲಿ ಮರಣ ಅಥವಾ ಶಾಶ್ವತ ಅಂಗವೈಕಲ್ಯಗಳಂತಹ ವೈದ್ಯಕೀಯ ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿಸುತ್ತಾ, ಮೇಲಿನ ಉಲ್ಲೇಖ (2) ರಲ್ಲಿ ಓದಲಾದ ಕಡತದಲ್ಲಿ ಪ್ರಸ್ತಾವನೆಯನ್ನು ಕಳುಹಿಸಿರುತ್ತಾರೆ. ಹಾವಿನ ಪ್ರತಿ ವಿಷದ (ಆಂಟಿಸ್ಟೇಕ್ವೆನಮ್) ತ್ವರಿತ ಲಭ್ಯತೆ, ಸಮಯೋಚಿತವಾಗಿ ರೋಗಿಗಳನ್ನು ಸಾಗಿಸುವುದು ಮತ್ತು ವೈದ್ಯರ ಬಳಿ ಕಳುಹಿಸಿಕೊಡುವುದರಿಂದ, ಇಂತಹ ವೈದ್ಯಕೀಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಕರ್ನಾಟಕ ರಾಜ್ಯದಲ್ಲಿ 2023ರಲ್ಲಿ ಹಾವು ಕಡಿತದ 6,596 ಪ್ರಕರಣಗಳು ಮತ್ತು 19 ಮರಣಗಳು ವರದಿಯಾಗಿವೆ. ದಿನಾಂಕ: 12-02-2024 ರಂದು ಹಾವು ಕಡಿತದ ಪ್ರಕರಣಗಳು ಮತ್ತು ಮರಣಗಳನ್ನು “ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದ ನಂತರ, ಮೇಲಿನ ಉಲ್ಲೇಖ (1) ರಲ್ಲಿ ಓದಲಾದ ಹಾಗೆ, 2024 ರಲ್ಲಿ ರಾಜ್ಯದಲ್ಲಿ ಒಟ್ಟು 13,235 ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ ಒಂದು ನೂರು (100) ಜನರು ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ.
ಕರ್ನಾಟಕ ರಾಜ್ಯವು ಹಾವು ಕಡಿತದಿಂದ ಉಂಟಾಗುವ ಅನಾರೋಗ್ಯ ಮತ್ತು ಮರಣವನ್ನು ತಗ್ಗಿಸಲು ಈ ಮುಂದಿನ ಉಪಕ್ರಮಗಳನ್ನು ತೆಗೆದುಕೊಂಡಿದೆ:
a)ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಆಸ್ಪತ್ರೆಗಳವರೆಗೆ ಹಾವಿನ ಪ್ರತಿವಿಷದ (ಎಎಸ್‌ಐ) ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ.
ಬಿ) ಹಾವು ಕಡಿತದ ರೋಗ ಲಕ್ಷಣಗಳನ್ನು ಹೊಂದಿರುವ ಎಲ್ಲಾ ಹಾವು ಕಡಿತದ ಪ್ರಕರಣಗಳಿಗೆ 10 ವಯಿಗಳ ಆರಂಭಿಕ ಡೋಸ್‌ಗಳನ್ನು ನೀಡಲು ಪ್ರಮಾಣಿತ ಕಾರ್ಯ ನಿರ್ವಹಣಾ ವಿಧಾನವನ್ನು (ಎಸ್‌ಒಪಿ) ಪ್ರಕಟಿಸಲಾಗಿದೆ.
2) ಹಾವು ಕಡಿತದ ಪ್ರಕರಣಗಳನ್ನು ನಿರ್ವಹಿಸಲು ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗಿದೆ.
ಮೇಲಿನ ಎಲ್ಲಾ ಕ್ರಮಗಳ ಹೊರತಾಗಿಯೂ, ಕಾರ್ಯಕ್ರಮದ ಅನುಷ್ಠಾನದಲ್ಲಿ ರಾಜ್ಯವು ಈ ಕೆಳಕಂಡ ಕೆಲವು ಸವಾಲುಗಳನ್ನು ಎದುರಿಸುತ್ತಿದೆ:-
a) ಕೆಲವು ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳು ಎಲ್ಲಾ ಪ್ರಕರಣಗಳನ್ನು ವರದಿ ಮಾಡುತ್ತಿಲ್ಲವಾದ್ದರಿಂದ / ಅಥವಾ ವರದಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ, ಶೇ.100ರಷ್ಟು ಪ್ರಮಾಣದಲ್ಲಿ ಪ್ರಕರಣಗಳ ಮತ್ತು ಮರಣಗಳ ಬಗ್ಗೆ ವರದಿ ಮಾಡಲು ಸಾಧ್ಯವಾಗುತ್ತಿಲ್ಲ.
ಬಿ) ಹಾವು ಕಡಿತಕ್ಕೆ ತುತ್ತಾದವರು ಇನ್ನೂ ಸಾಂಪ್ರದಾಯಿಕ ನಂಬಿಕೆಯ ವೈದ್ಯರ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಇದು ಅತ್ಯಮೂಲ್ಯವಾದ ಕ್ಷಣಗಳು ವ್ಯರ್ಥವಾಗುವುದಕ್ಕೆ ಕಾರಣವಾಗುತ್ತಿದೆ. ಮರಣ ವಿಶ್ಲೇಷಣೆಯ ಪ್ರಕಾರ ಮರಣಕ್ಕೆ ಇದುವೇ ಮುಖ್ಯ ಕಾರಣವಾಗಿದೆ.
2) ಬಾಹ್ಯ ವೈದ್ಯಕೀಯ ಅಧಿಕಾರಿಗಳಿಗೆ ನಿರಂತರವಾಗಿ ತರಬೇತಿ ನೀಡಬೇಕಾಗಿದೆ.
a) ಇತರೆ ಇಲಾಖೆಗಳನ್ನು ತೊಡಗಿಸಿಕೊಂಡು ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ದ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
2) ಹಾವು ಕಡಿತದಿಂದ ಸಂಭವಿಸುವ ಎಲ್ಲಾ ಮರಣಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯವ್ಯವಸ್ಥೆಯನ್ನು ಸೃಜಿಸುವಂತೆ ಆಯುಕ್ತರು ವಿನಂತಿಸಿರುತ್ತಾರೆ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಇವರು ಹೊರಡಿಸಿದ ಮೇಲಿನ ಉಲ್ಲೇಖ (3) ರಲ್ಲಿ ಓದಲಾದ ಕಛೇರಿ ಜ್ಞಾಪನಾ ಪತ್ರದಲ್ಲಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್1ಎನ್1 ಮರಣ ಲೆಕ್ಕಪರಿಶೋಧನಾ ಸಮಿತಿಯನ್ನು ರಚಿಸಲಾಗಿದೆ.
ಮೇಲಿನ ಉಲ್ಲೇಖ (4) ರಲ್ಲಿ ಓದಲಾದ ಕಛೇರಿ ಜ್ಞಾಪನಾ ಪತ್ರದಲ್ಲಿ, ಹೆಚ್.ಎನ್ ಮರಣ ಲೆಕ್ಕ ಪರಿಶೋಧನಾ ಸಮಿತಿಗೆ ಹಾವು ಕಡಿತದಿಂದಾದ ಮರಣಗಳ ಲೆಕ್ಕ ಪರಿಶೋಧನೆಯ ಜವಾಬ್ದಾರಿಯನ್ನೂ ಸಹ ವಹಿಸಲಾಗಿದೆ
ಆಯುಕ್ತರ ಪ್ರಸ್ತಾವನೆ ಮತ್ತು ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ
ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನಲೆಯಲ್ಲಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
1. ಕಛೇರಿ ಜ್ಞಾಪನಾ ಪತ್ರದಲ್ಲಿ ಜಿಲ್ಲೆಗಳಲ್ಲಿ ರಚಿಸಲಾದ ಹೆಚ್1ಎನ್1 ಮರಣದ ಲೆಕ್ಕ ಪರಿಶೋಧನಾ ಸಮಿತಿಗೆ ಮೇಲೆ ಉಲ್ಲೇಖ (3) ರಲ್ಲಿ ಓದಲಾದ ಹಾವು ಕಡಿತದಿಂದಾಗಿ ಸಂಭವಿಸುವ ಮರಣಗಳ ಲೆಕ್ಕ ಪರಿಶೋಧನೆಯ ಜವಾಬ್ದಾರಿಯನ್ನು ಸಹವಹಿಸಲಾಗಿದೆ.
2. ಮೇಲಿನ ಉಲ್ಲೇಖ (3) ರಲ್ಲಿ ಓದಲಾದ ಕಛೇರಿ ಜ್ಞಾಪನಾ ಪತ್ರದಲ್ಲಿ ಈಗಾಗಲೇ ರಚಿಸಲಾದ ಸಮಿತಿಯಲ್ಲಿ ಹಾವು ಕಡಿತದಿಂದಾಗಿ ಸಂಭವಿಸುವ ಮರಣಗಳ ಲೆಕ್ಕ ಪರಿಶೋಧನೆಯನ್ನು ಪರಿಶೀಲಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
3. ಜಿಲ್ಲೆಯಲ್ಲಿನ ಹಾವು ಕಡಿತ ಪ್ರಕರಣಗಳ ಪರಿಶೀಲನಾ ಸಭೆಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಒಮ್ಮೆಯಾದರೂ ನಡೆಸಲು ಮತ್ತು ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
4. ಪ್ರಸ್ತಾವನೆಯ (4) ನೇ ಕಂಡಿಕೆಯಲ್ಲಿ ವಿವರಿಸಿರುವಂತೆ, ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ (ಎನ್.ಪಿ.ಎಸ್.ಇ.) ಅನುಷ್ಠಾನದಲ್ಲಿ ಕಂಡು ಬಂದ ಸವಾಲುಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
BIG NEWS : ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಊಟ ಮಾಡಿದ ಮಹಿಳೆಗೆ 500 ರೂ.ದಂಡ : ‘BMRCL’ ಮಹತ್ವದ ಪ್ರಕಟಣೆ.!
BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 1,000 ಕ್ಕೂ ಹೆಚ್ಚು ಅಂಕ ಏರಿಕೆ |Share Market